Site icon Vistara News

ಬ್ರಾಹ್ಮಣ್ಯ ಭಯೋತ್ಪಾದನೆ ಎಂದಿದ್ದು ನಿರ್ದಿಷ್ಟ ಜಾತಿಯ ಕುರಿತಲ್ಲ: ನಟ ಚೇತನ್​ ಹೇಳಿಕೆ ಮರ್ಮವೇನು?

actor chetan

ಬೆಂಗಳೂರು : “ಬ್ರಾಹ್ಮಣ್ಯ ಭಯೋತ್ಪಾದನೆʼʼ ಎಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್​ ಪೊಲೀಸರಿಗೆ ವಿವರವಾದ ಹೇಳಿಕೆ ನೀಡಿದ್ದಾರೆ. ಚೇತನ್‌ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪ್ರತಿ ವಿಸ್ತಾರ ನ್ಯೂಸ್​ಗೆ ಲಭ್ಯವಾಗಿದೆ.

ಇತ್ತೀಚೆಗಷ್ಟೇ ಬ್ರಾಹ್ಮಣರು ಭಯೋತ್ಪಾದಕರು ಹಾಗೂ ಬ್ರಾಹ್ಮಣ್ಯ ಭಯೋತ್ಪಾದನೆ ಎಂದು ಫೇಸ್​ಬುಕ್​, ಇನ್‌ಸ್ಟಾಗ್ರಾಂ ಲೈವ್​ನಲ್ಲಿ ಹೇಳಿದ್ದ ನಟ ಚೇತನ್ ಹೇಳಿದ್ದರು​. ಈ ಬಗ್ಗೆ ಸಾಕಷ್ಟು ಅಕ್ರೋಶ ಕೂಡ ವ್ಯಕ್ತವಾಗಿತ್ತು. ಅಲ್ಲದೆ ಚೇತನ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಲಾಗಿತ್ತು. ಅದರಂತೆ ಚೇತನ್‌ ಬಂಧಿಸಿ ಬಳಿಕ ಠಾಣೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಸದ್ಯ ಚೇತನ್ ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಜೊತೆಗೆ ಫೇಸ್​ಬುಕ್​, ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್​ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ.

ಬ್ರಾಹ್ಮಣರ ಬಗ್ಗೆ ಮಾತನಾಡಿದ ಆರೋಪವಿದೆ ಎಂಬ ಪ್ರಶ್ನೆಗೆ ಹೇಳಿಕೆಯಲ್ಲಿ ಉತ್ತರಿಸಿರುವ “ಚೇತನ್​, ಅಂಬೇಡ್ಕರ್, ಪೆರಿಯಾರ್ ಅವರಂತಹ ಬಹುಜನ ಚಿಂತಕರು ಮಾಡಿರುವ ವಿಚಾರಗಳನ್ನು ಆಧುನಿಕ ಚೌಕಟ್ಟಿನಲ್ಲಿ ಹೇಳಿದ್ದೇನೆ. ಮಹಾರಾಷ್ಟ್ರದಲ್ಲಿ 1935ರಲ್ಲಿ ಅಂಬೇಡ್ಕರ್ ಅವರು, ನಮ್ಮ ದೇಶದ ವೈರಿಗಳು ಬ್ರಾಹ್ಮಣರು ಹಾಗೂ ಬಂಡವಾಳಶಾಹಿ ವ್ಯವಸ್ಥೆ ಎಂದಿದ್ದಾರೆ. ಬ್ರಾಹ್ಮಣ ಎಂದರೆ ಒಂದು ಸಂವಿಧಾನದ ವಿರುದ್ಧದ ಮನಸ್ಥಿತಿ ಮತ್ತು ವ್ಯವಸ್ಥಿತ ವ್ಯವಸ್ಥೆ ಎಂದಿದ್ದಾರೆʼʼ ಎಂದು ವಿವರಿಸಿದ್ದಾರೆ.

ಇದನ್ನು ಓದಿ| ಬ್ರಾಹ್ಮಣರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ: ಕಾಂಗ್ರೆಸ್‌ ವಿರುದ್ಧ ರೋಹಿತ್‌ ಚಕ್ರತೀರ್ಥ ಆರೋಪ

ಮುಂದುವರಿದು ಇದರ ಬಗ್ಗೆ ಎಲ್ಲಾದರೂ ಉಲ್ಲೇಖ ಇದ್ಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಚೇತನ್ “1935ರಲ್ಲಿ ಅಂಬೇಡ್ಕರ್ ಅವರು ಕಾರ್ಮಿಕರ ಜೊತೆ ಮಾತನಾಡುವಾಗ brahmins is negation of spirit of liberty and fraternity ಎಂದು ಹೇಳಿದ್ದಾರೆ. ಇದರ ಆಧಾರದ ಮೇಲೆ ಹೇಳಿಕೆ ನೀಡಿದ್ದೇನೆʼʼ ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ “ಬ್ರಾಹ್ಮಣ್ಯ ಅನ್ನೋದು ಪ್ರತಿಯೊಂದು ಜಾತಿಯಲ್ಲಿಯೂ, ವ್ಯವಸ್ಥೆಯಲ್ಲಿಯೂ ಹಾಗೂ ಅನೇಕ ಧರ್ಮಗಳಲ್ಲಿಯೂ ಇದೆ. ನನ್ನ ತಂದೆ ತಾಯಿ ಲಿಂಗಾಯತ ಸಮುದಾಯದವರಾಗಿದ್ದಾರೆ. ನಾನೂ ಕೂಡ ಬ್ರಾಹ್ಮಣ್ಯ ವ್ಯವಸ್ಥೆಯಿಂದ ಲಾಭ ಪಡೆದಿದ್ದೇನೆ. ನನ್ನ ತಂದೆ ತಾಯಿಯವರೂ ಸಹ ಶಿಕ್ಷಣದ ದೃಷ್ಟಿಯಲ್ಲಿ ಲಾಭವನ್ನು ಹೊಂದಿರುತ್ತಾರೆ. ನಾನು ಯಾವುದೇ ಅರ್ಹತೆ, ಮೆರಿಟ್​ನಿಂದ ಅಲ್ಲದೆ ಶ್ರೇಣಿಕ ವ್ಯವಸ್ಥೆಯಿಂದ ಸಾಮಾಜಿಕ, ಶೈಕ್ಷಣಿಕ ಲಾಭವನ್ನು ಪಡೆದುಕೊಂಡಿದ್ದೇನೆ. ಬ್ರಾಹ್ಮಣ್ಯ ವ್ಯವಸ್ಥೆಯಿಂದ ಕೆಲವರು ಲಾಭ ಪಡೆದುಕೊಂಡಿದ್ದಾರೆ. ಇದೇ ಬ್ರಾಹ್ಮಣ್ಯ ವ್ಯವಸ್ಥೆಯಿಂದ ಅನೇಕರು ನಷ್ಟವನ್ನು ಅನುಭವಿಸಿದ್ದಾರೆ. ಇದು ಒಂದು ಜಾತಿಗೆ ಸೀಮಿತವಲ್ಲ, ಒಂದು ಧರ್ಮಕ್ಕೆ ಸೀಮಿತವಲ್ಲʼʼ ಎಂದು ತಮ್ಮ ಬ್ರಾಹ್ಮಣ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.  

ಇದನ್ನು ಓದಿ| ಬೆಳಗಾವಿ ವಿವಾದ ತಾರಕಕ್ಕೆ: ಬ್ರಾಹ್ಮಣರು-ಮುಸ್ಲಿಮರು ಕಟ್ಟಿಸಿದ ಮಸೀದಿ ಎಂದ ಮುಸ್ಲಿಂ ಲೀಗ್‌

Exit mobile version