ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಸೆರೆಯಾಗಿರುವ ನಟ ದರ್ಶನ್ (Actor Darshan) ಮತ್ತು ಆತನ ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ಇದೀಗ ತನಿಖೆಯಲ್ಲಿ ಮಹತ್ವದ ಸಾಕ್ಷ್ಯ ಇದೆ ಎನ್ನಲಾದ ಎರಡು ಮೊಬೈಲ್ ಫೋನ್‌ಗಳನ್ನು ನಾಶ ಮಾಡಿದ್ದಾರೆ (Darshan Arrested) ಎನ್ನಲಾಗಿದೆ.
ರೇಣುಕಾಸ್ವಾಮಿಯ ಮೃತದೇಹವನ್ನು ಸುಮ್ಮನಹಳ್ಳಿಯ ರಾಜಕಾಲುವೆಗೆ ಎಸೆದು, ಬಳಿಕ ಅದೇ ಜಾಗದಲ್ಲಿ 2 ಮೊಬೈಲ್ ಮೋರಿಗೆ ಎಸೆದಿದ್ದಾರೆ. ಒಂದು ಮೊಬೈಲ್ ರೇಣುಕಾಸ್ವಾಮಿಗೆ ಸೇರಿದ್ದು, ಇನ್ನೊಂದು ಓರ್ವ ಆರೋಪಿಯ ಮೊಬೈಲ್ ಫೋನ್ ಅನ್ನು ಎಸೆದು ಹೋಗಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಇನ್ನೂ ಬಿಸಾಡಿರುವ ಮೊಬೈಲ್‌ನಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿರುವ ವಿಡಿಯೊವನ್ನು ಆರೋಪಿಗಳು ಚಿತ್ರೀಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ಕೊಲೆಯಾದ ರೇಣುಕಾಸ್ವಾಮಿ ಫೋನ್ ಜತೆಗೆ ಆರೋಪಿಯೊಬ್ಬನ ಮೊಬೈಲ್ ಫೋನ್‌ನನ್ನು ಮೋರಿಗೆ ಎಸೆಯಲಾಗಿದೆ.
ಆರೋಪಿಗಳ ಫೋನ್ ಜಪ್ತಿ, ಎಫ್‌ಎಸ್‌ಎಲ್‌ಗೆ ರವಾನೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಹಲವರು ಬಂಧಿಯಾಗಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳಿಂದ ಒಟ್ಟು 14 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. 14 ಮೊಬೈಲ್‌ಗಳ ಡಾಟಾ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಮೊಬೈಲ್‌ನಲ್ಲಿ ಹಲವಾರು ಮಾಹಿತಿಗಳು ಡಿಲೀಟ್ ಆಗಿರುವ ಅನುಮಾನ ಇದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಡಾಟಾ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ (FSL) ರವಾನೆ ಮಾಡಲಾಗಿದೆ.
ಇದನ್ನೂ ಓದಿ: Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?
ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka Swamy murder case) ಈಗಾಗಲೇ ದರ್ಶನ್ ಸೇರಿ 13 ಆರೋಪಿಗಳನ್ನು (Actor Darshan) ಪೊಲೀಸರು ಅರೆಸ್ಟ್ ಮಾಡಿದ್ದು, ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದೆ. ಈ ನಡುವೆ ಹಂತಕರಿಗೆ ನೀಡಲು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.
ಆರ್.ಆರ್.ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಆರೋಪಿಗಳ ತಂಡ ಪಾರ್ಟಿ ಮಾಡಿತ್ತು. ವಿನಯ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ 30 ಲಕ್ಷ ಹಣ ಸೀಜ್ ಮಾಡಲಾಗಿದೆ. ಇದು ಕೊಲೆ ಆರೋಪ ಹೊರುವ ಯುವಕರಿಗೆ ನೀಡಲು ಇಟ್ಟಿದ್ದ ಹಣ ಎನ್ನಲಾಗಿದೆ. ಕೊಲೆ ನಾವೇ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿಗೆ ತಲಾ 5 ಲಕ್ಷ ನೀಡಲು ಹಣ ಇಡಲಾಗಿತ್ತು.
ಪವಿತ್ರಾ ಗೌಡ ಕಾಲಿಗೆ ಬಿದ್ದರೂ ಕರಗಲಿಲ್ಲ ಆರೋಪಿಗಳ ಮನಸ್ಸು
ಹಲ್ಲೆ ಸಮಯದಲ್ಲಿ ಪವಿತ್ರಾ ಗೌಡ ಕಾಲಿಗೆ ರೇಣುಕಾಸ್ವಾಮಿಯನ್ನು ಬೀಳಿಸಿ ಡಿ ಗ್ಯಾಂಗ್ ಕ್ಷಮಾಪಣೆ ಕೇಳಿಸಿತ್ತು ಎನ್ನಲಾಗಿದೆ. ಅಕ್ಕನ ಕಾಲಿಗೆ ಬೀಳೋ ಎಂದು ಸೂ… ಮಗನನೇ ಎಂದು ಹಿಂಸೆ ನೀಡಲಾಗಿದೆ. ದರ್ಶನ್ ಹೊಡೆತಕ್ಕೆ ನೋವು ತಾಳಲಾರದೆ ಪವಿತ್ರಾ ಗೌಡ ಕಾಲಿಗೆ ಬಿದ್ದು ರೇಣುಕಾಸ್ವಾಮಿ ಅಂಗಲಾಚಿಕೊಂಡಿದ್ದ. ಮೆಡ್ಂ ತಪ್ಪಾಯಿತು, ಕ್ಷಮಿಸಿ ಬಿಡಿ, ನಿಮ್ಮ ಕಾಲು ಹಿಡಿದುಕೊಳ್ತೇನೆ ಎಂದು ಗೋಗರೆದಿದ್ದ. ಆಗ ತಪ್ಪಾಯಿತು ಸಾರ್ ಎಂದು ಕಾಲಿಗೆ ಬಿದ್ದಾಗ, ದರ್ಶನ್ ಎಗರಿಸಿ ಒದ್ದಿದ್ದರು. ಪೊಲೀಸರು ಸ್ಥಳ ಮಹಜರು ಮಾಡುವಾಗ ಈ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ