Site icon Vistara News

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan gets a series of questions from the police

ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಸೇರಿ ಹಲವರು ಲಾಕ್‌ ಆಗಿದ್ದಾರೆ. ಸೋಮವಾರ ಬೆಳಗ್ಗೆ 9:30ರಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಟ ದರ್ಶನ್ ಅವರ ವಿಚಾರಣೆ ನಡೆಯುತ್ತಿದೆ. ದರ್ಶನ್‌ರನ್ನು ಖುದ್ದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇತ್ತ ಇತರೆ ಆರೋಪಿಗಳಿಂದ ವಿಜಯನಗರ ಎಸಿಪಿ ಚಂದನ್ ಹೇಳಿಕೆ ಪಡೆಯುತ್ತಿದ್ದಾರೆ.

ವಿಚಾರಣೆಯಲ್ಲಿ ನಟ ದರ್ಶನ್‌ಗೆ ಪ್ರಶ್ನೆಗಳ ಸುರಿಮಳೆಯನ್ನೇ ಕೇಳಲಾಗುತ್ತಿದೆ. ಪವಿತ್ರಾಗೌಡಗೂ ಮೃತ ರೇಣುಕಾಸ್ವಾಮಿಗೂ ಹೇಗೆ ಪರಿಚಯ? ಪವಿತ್ರಗೌಡ ಬಗ್ಗೆ ಪೋಸ್ಟ್ ಮಾಡಿದರೆ ನಿಮಗ್ಯಾಕೆ ಕೋಪ? ನಿಮಗೂ ಪವಿತ್ರಾಗೌಡಗೂ ಏನು ಸಂಬಂಧ? ಪವಿತ್ರಾಗೌಡ ಈ ಬಗ್ಗೆ ನಿಮ್ಮ ಬಳಿ ದೂರು ನೀಡಿದ್ದರಾ ಎಂದು ದರ್ಶನ್‌ಗೆ ಡಿಸಿಪಿ ಗಿರೀಶ್‌ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಕರಣಕ್ಕೆ ಕಾರಣ ಏನು? ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದು ಯಾರು? ಅಶ್ಲೀಲವಾಗಿ ಕಾಮೆಂಟ್ ಮಾಡಿದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ದೂರು ನೀಡದೇ ಚಿತ್ರದುರ್ಗದಿಂದ ಆರ್‌ಆರ್‌ನಗರಕ್ಕೆ ರೇಣುಕಾಸ್ವಾಮಿಯನ್ನು ಕರೆಸಿದ್ದು ಯಾಕೆ? ಪ್ರಶ್ನಿಸಿದ್ದಾರೆ.

ಇತ್ತ ಕೊಲೆ ಕೇಸ್‌ನಲ್ಲಿ ಸ್ವತಃ ತಾವೇ ಶರಣಾಗಿರುವ ಇತರೆ ಆರೋಪಿಗಳಿಗೂ ಹಲವು ಆಯಾಮದಲ್ಲಿ ವಿಚಾರಣೆ ನಡೆಯುತ್ತಿದೆ. ರೇಣುಕಾಸ್ವಾಮಿ ಪೋಸ್ಟ್ ಬಗ್ಗೆ ದರ್ಶನ್‌ಗೆ ಹೇಳಿದವರು ಯಾರು? ರೇಣುಕಾಸ್ವಾಮಿಗೆ ಮೊದಲು ಹಲ್ಲೆ ಮಾಡಿದ್ದು ಯಾರು? ಹಲ್ಲೆ ನಂತರ ರೇಣುಕಾಸ್ವಾಮಿ ಮೃತಪಟ್ಟಿದ್ದು ದೃಢಪಡಿಸಿದ್ದು ಯಾರು, ನಂತರ ಮೃತದೇಹವನ್ನು ಡಿಸ್‌ಪೋಸ್‌ ಮಾಡುವ ಐಡಿಯಾ ಕೊಟ್ಟಿದ್ಯಾರು? ಘಟನೆ ನಂತರ ಎಲ್ಲರೂ ಎಲ್ಲಿ ಹೋಗಿದ್ದೀರಿ? ಎಂದು ಮೂವರು ಆರೋಪಿಗಳಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಹಣಕಾಸಿನ ಡ್ರಾಮಾ ಮಾಡಿದ್ದ ಆರೋಪಿಗಳು

ನಿನ್ನೆ ಸೋಮವಾರ ಮೂವರು ಆರೋಪಿಗಳು ಪೊಲೀಸರ ಮುಂದೆ ಹಣಕಾಸಿನ ಡ್ರಾಮಾ ಮಾಡಿದ್ದರು. ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಲು ಸೂಚಿಸಿದವರು ಯಾರು? ಎಂದು ಹಲವು ಆಯಾಮಗಳಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಏನಿದು ಪ್ರಕರಣ?

ರೇಣುಕಾಸ್ವಾಮಿ ಎಂಬಾತ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಟ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು (ಜೂ.11) ಬಂಧಿಸಿದ್ದಾರೆ. ಮೈಸೂರಿನಲ್ಲಿರುವ (Mysore) ದರ್ಶನ್‌ ಅವರ ತೋಟದ ಮನೆಯಲ್ಲಿ ಬೆಂಗಳೂರಿನ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದರು. ನಟನನ್ನು ಬಂಧಿಸಿ (Actor Darshan Arrested) ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.

ನಟ ದರ್ಶನ್‌ ಜತೆಗೆ ಗೆಳತಿ, ನಟಿಯೂ ಆದ ಪವಿತ್ರಾ ಗೌಡ (Pavithra Gowda) ಅವರ ಕುರಿತು ಅಶ್ಲೀಲ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ನಡೆದ ರೇಣುಕಾಸ್ವಾಮಿ ಎಂಬಾತ ಕೊಲೆ ನಡೆದಿದೆ ಎನ್ನಲಾಗಿತ್ತು. ಸದ್ಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಹಾಗೂ ಅವರ ಗೆಳತಿ ಪವಿತ್ರಾ ಗೌಡ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version