Site icon Vistara News

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan

ಬೆಂಗಳೂರು: ಕೊಲೆಯಾದ ರೇಣುಕಾಸ್ವಾಮಿ (Renuka Swamy Murder case) ಕೂಡಾ ನಟ ದರ್ಶನ್ (Actor Darshan) ಅಭಿಮಾನಿಯಾಗಿದ್ದವನು. ಆದರೆ ಅದೇ ಅಭಿಮಾನಿಯ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರುವಂತಾಯಿತು. ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ನನ್ನು ಸಹಕೈದಿ ಭೇಟಿ ಮಾಡಿದ್ದಾರೆ. ತನ್ನ ಅಭಿಮಾನಿಗೆ ಜೀವನಪಾಠ ಮಾಡಿದ್ದು, ಮಾತ್ರವಲ್ಲದೇ ಆತನಿಂದ ಧ್ಯಾನವನ್ನು ಕಲಿತುಕೊಂಡಿದ್ದಾರೆ.

ಕೊಲೆಯಾಗಿ ಹೋಗಿರುವ ರೇಣುಕಾಸ್ವಾಮಿ, ನಟ ದರ್ಶನ್‌ನ ಅಪ್ಪಟ ಅಭಿಮಾನಿ. ಅಭಿಮಾನಿ ಅನ್ನೋದಕ್ಕಿಂತ ಈತ ದರ್ಶನ್‌ನ ಅಂಧಾಭಿಮಾನಿ. ಬಾಸ್.. ಡಿ ಬಾಸ್ ಅಂತ ಇದ್ದವನಾತ. ಆದರೆ ಪವಿತ್ರಾಗೌಡಗೆ ಆಶ್ಮೀಲವಾಗಿ ಮೆಸೇಜ್ ಕಳುಹಿಸಿದ್ದ ಅನ್ನೋ ಒಂದೇ ಒಂದು ಕಾರಣಕ್ಕೆ ದರ್ಶನ್ ಮತ್ತು ಗ್ಯಾಂಗ್ ಆತನನ್ನು ಭೀಕರವಾಗಿ ಕೊಲೆ ಮಾಡಿದೆ ಎನ್ನುವ ಆರೋಪವನ್ನು ಎದುರಿಸುತ್ತಿದೆ. ಈ ಪ್ರಕರಣದಲ್ಲಿ ಎ2 ಆರೋಪಿಯಾಗಿ ದರ್ಶನ್ ಜೈಲುಪಾಲಾಗಿದ್ದಾರೆ. ಅಭಿಮಾನಿಯನ್ನೇ ಕೊಂದ ಆರೋಪ ಹೊತ್ತಿರುವ ದರ್ಶನ್, ಜೈಲಿನಲ್ಲಿ ತಮ್ಮ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಅವರ ಜತೆ ಒಂದಿಷ್ಟು ಸಮಯವನ್ನು ಕಳೆದಿದ್ದು, ಮಾತ್ರವಲ್ಲದೇ ಬದುಕಿನ ಪಾಠವನ್ನು ಮಾಡಿದ್ದಾರೆ.

ಸನ್ನಡತೆ ಆಧಾರದಲ್ಲಿ ಇನ್ನೇನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಬೇಕಿದ್ದ ಸಿದ್ಧಾರೂಢ ಅವರು ದರ್ಶನ್‌ನ ಭೇಟಿ ಮಾಡಲೇಬೇಕು ಎನ್ನುವ ಆಸೆ ಹೊಂದಿದ್ದರು. ಅದಕ್ಕಾಗಿ ಅವರು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಇದಕ್ಕೆ ಜೈಲು ಅಧಿಕಾರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಸಿದ್ಧರೂಢರನ್ನು ಭೇಟಿಯಾಗೋದಿಕ್ಕೆ ದರ್ಶನ್‌ ಒಪ್ಪುತ್ತಾರಾ? ಅವರಿಗೆ ಮನಸಿದ್ಯಾ ಅಂತ ಅಧಿಕಾರಿಗಳು ದರ್ಶನ್‌ನ ಕೇಳಿದ್ದರು. ಆದರೆ ದರ್ಶನ್‌ ಹಿಂದೂ ಮುಂದೂ ನೋಡಲೇ ಇಲ್ಲ. ಒಂಚೂರು ಯೋಚನೆ ಮಾಡದೇ ತನ್ನನ್ನು ಭೇಟಿಯಾಗಲು ಬಯಸುತ್ತಿರುವ ಅಭಿಮಾನಿಯ ಭೇಟಿಗೆ ಒಪ್ಪಿಕೊಂಡಿದ್ದರು. ಸಿದ್ಧಾರೂಢ ಅವರನ್ನು ಒಳ ಕಳುಹಿಸುವಂತೆ ಮನವಿ ಮಾಡಿದ್ದರು.

ತನ್ನನ್ನು ಭೇಟಿಯಾಗಲು ಬಂದ ಅಭಿಮಾನಿ ಸಿದ್ಧರಾಢೂ ಜತೆಗೆ ಸುಮಾರು 12 ನಿಮಿಷ ಟೈಮ್‌ ಸ್ಪೆಂಡ್ ಮಾಡಿದ್ದ ದರ್ಶನ್, ಅದರಲ್ಲಿ 10 ನಿಮಿಷಗಳ ಕಾಲ ಧ್ಯಾನವನ್ನೇ ಮಾಡಿದ್ದರು. ಇನ್ನುಳಿದ 2 ನಿಮಿಷದಲ್ಲಿ ಅಭಿಮಾನಿ ಸಿದ್ಧಾರೂಢ ಅವರ ಜತೆಗೆ ಮಾತನಾಡಿದ ದಾಸ, ಅವರ ಬಗ್ಗೆ ವಿಚಾರಿಸಿದ್ದಾರೆ. ಏನ್ ಆಗಿದ್ದು? ಯಾವ ಕಾರಣಕ್ಕೆ ಜೈಲಿಗೆ ಬಂದಿದ್ದು ಅಂತೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತಾಗಿ, ತನ್ನ ನೋವಿನ ಬಗ್ಗೆಯಾಗಲೇ ಒಂದೇ ಒಂದು ಮಾತನ್ನು ದರ್ಶನ್ ಆಡಿಲ್ಲ. ಕೇವಲ ಸಿದ್ಧರೂಢ ಅವರ ಬಗ್ಗೆ ಮಾತ್ರವೇ ವಿಚಾರಿಸಿದ್ದಾರೆ.

ಮಾತ್ರಬಲ್ಲ ಜನರು ಕ್ಷಮಿಸಬಹುದು.. ದೇವರು ಕೂಡ ಕ್ಷಮಿಸಬಹುದು.. ಆದರೆ ತಪ್ಪು ಮಾಡಿದರೆ ಕಾನೂನು ಮಾತ್ರ ಯಾವುದೇ ಕಾರಣಕ್ಕೂ ಕ್ಷಮಿಸೋದಿಲ್ಲ. ಹೀಗಂತ ಕೊಲೆ ಆರೋಪಿಯಾಗಿರುವ ದರ್ಶನ್ ತನ್ನ ಅಭಿಮಾನಿ ಸಿದ್ಧರೂಢ ಅವರ ಬಳಿ ಈ ಮಾತನ್ನಾಡಿದ್ದಾರೆ. ನಿನ್ನನ್ನು ಕಾನೂನು ಕ್ಷಮಿಸಿ ಒಂದು ಅವಕಾಶವನ್ನು ಕೊಟ್ಟಿದೆ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ, ಹೆಂಡತಿ ಮಕ್ಕಳ ಜತೆ ಪ್ರೀತಿಯಿಂದ ಬದುಕು ಅಂತ ಸಲಹೆಯನ್ನು ಕೊಟ್ಟಿದ್ದರಂತೆ. ದರ್ಶನ್ ಆಡಿರುವ ಈ ಮಾತುಗಳನ್ನು ಕೇಳಿದರೆ ನಿಜಕ್ಕೂ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆ. ತಾನು ಮಾಡಿರುವ ತಪ್ಪಿನ ಅರಿವು ಆದಂತಿದೆ ಎಂದು ಸಿದ್ಧಾರೂಢ ತಿಳಿಸಿದರು.

ಇದನ್ನೂ ಓದಿ: Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ದರ್ಶನ್ ಹಾಗೂ ಸಿದ್ಧಾರೂಢ ನಡುವಿನ 12 ನಿಮಿಷಗಳ ಭೇಟಿಯಿಂದ ಅನೇಕ ವಿಚಾರಗಳು ಹೊರಬಿದ್ದಿವೆ. ಜೈಲಿನಲ್ಲಿ ದರ್ಶನ್ ಜೀವನ ಹೇಗಿದೆ ಅನ್ನೋ ನೈಜ ಚಿತ್ರಣವೊಂದು ಸಿಕ್ಕಿಂತಾಗಿದೆ. ಫ್ಯಾಮಿಲಿ ಫಸ್ಟ್ ಮಿಕ್ಕವರು ನೆಕ್ಸ್ಟ್ ಎನ್ನುವ ನಿರ್ಧಾರಕ್ಕೆ ಜೈಲಿನಲ್ಲಿರುವ ದರ್ಶನ್ ಬಂದಿದ್ದಾರೆ.

ಪಿರಮಿಡ್‌ ಧ್ಯಾನ ಹೇಳಿಸಿಕೊಂಡ ದರ್ಶನ್‌

ಜುಲೈ 8ರಂದು ಜೈಲಾಧಿಕಾರಿಗಳ ಅನುಮತಿ ಪಡೆದು ನಟ ದರ್ಶನ್‌ರನ್ನು ಭೇಟಿಯಾದ ಸಿದ್ಧರೂಢ, ಪಿರಮಿಡ್‌ ಧ್ಯಾನವನ್ನು ಹೇಳಿಕೊಟ್ಟಿದ್ದರಂತೆ. ನಾನು ನಿಮ್ಮ ಅಭಿಮಾನಿ ಎಂದಾಗ ಸಿದ್ಧರೂಢರನ್ನು ದರ್ಶನ್‌ ತಬ್ಬಿಕೊಂಡರಂತೆ. ಹತ್ತು ನಿಮಿಷ ಧ್ಯಾನ ಮಾಡಿದ ದರ್ಶನ್‌ ಇದು ಚೆನ್ನಾಗಿದೆ, ನಾನು ಇನ್ಮೆಲೆ ಇದನ್ನೂ ಮಾಡ್ತಿಲಿ ಎಂದು ಜೈಲಿನಿಂದ ಬಿಡುಗಡೆಗೊಂಡ ಕೈದಿ ಸಿದ್ಧಾರೂಢ ಹೇಳಿದ್ದಾರೆ. ದರ್ಶನ್‌ ಅವರನ್ನು ನೋಡಿದಾಗ ಬೇಸರ ಆಯಿತು. ಆದರೆ ಅವರು ನೀನು ನಾನ್‌ ಸೆಲೆಬ್ರಿಟಿ, ನಾನು ನಿನ್ನ ಸೆಲೆಬ್ರಿಟಿ ಎಂದು ಆಟೋಗ್ರಾಫ್‌ ಕೊಟ್ಟರು ಅಂತ ದರ್ಶನ್‌ ಕುರಿತು ಸಿದ್ಧರೂಢ ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version