Site icon Vistara News

Actor Darshan: ದರ್ಶನ್‌ ಆರೋಪಮುಕ್ತನಾಗಿ ಶೀಘ್ರ ಹೊರ ಬರಲಿ; ಹಿರಿಯ ನಟಿ ಗಿರಿಜಾ ಲೋಕೇಶ್ ಹಾರೈಕೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್‌ (Actor Darshan) ಬಗ್ಗೆ ಮಾತನಾಡುತ್ತಾ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಅವನು ಕಷ್ಟಪಡುವುದನ್ನು ನೋಡಿದರೆ ತುಂಬಾ ಸಂಕಟ ಆಗುತ್ತೆ, ಅದ್ರಿಂದ ಬೇಗ ಆಚೆ ಬರಲಿ ಎಂದು ಅವರು ಹಾರೈಸಿದ್ದಾರೆ.

ʼʼಪ್ರಕರಣ ಕಾನೂನಿನ ಚೌಕಟ್ಟಿನಲ್ಲಿ ಇದೆ. ನಾವು ಏನು ಮಾತನಾಡೋದಕ್ಕೆ ಆಗಲ್ಲ. ತಪ್ಪು ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ. ನನ್ನ ಕಣ್ಣೆದುರಲ್ಲೇ ಬೆಳೆದ ದರ್ಶನ್‌ ಆ ಥರ ಅಲ್ಲ. ನಾನು ಕಂಡಂತೆ ದರ್ಶನ್ ಆ ರೀತಿ ಇರಲಿಲ್ಲ. ಮುಗ್ಧ ಸ್ವಭಾವದ ಆತ ತಂದೆಗೆ ಹೆದರಿಕೊಳ್ತಿದ್ದ. ಇದೆಲ್ಲ ಕನಸಾಗಿರಬಾರದ ಅಂತ ಅನ್ನಿಸುತ್ತೆʼʼ ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.

ʼʼದರ್ಶನ್‌ ತಂದೆ ನಿಧನ ಹೊಂದಿದಾಗ, ಅಕ್ಕನ ಮದುವೆ ಮಾಡಿದಾಗ ಹೇಗಿದ್ದ ಎನ್ನುವುದನ್ನು ನಾನು ನೋಡಿದೀನಿ. ಚಿತ್ರರಂಗಕ್ಕೆ ಬಂದಾಗ ಯಾವ ರೀತಿ ಅವಮಾನಗಳನ್ನ ಎದುರಿಸಿ ಮುಂದೆ ಬಂದಿದ್ದಾನೆ, ಹೇಗೆ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎನ್ನುವುದನ್ನೂ ಗಮನಿಸಿದ್ದೇನೆ. ಹೀಗಾಗಿ ಆರೋಪ ಮುಕ್ತನಾಗಿ ಬೇಗ ಹೊರಗೆ ಬರಲಿ ಎಂದು ಪ್ರಾರ್ಥಿಸ್ತೀನಿʼʼ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಬಲ ಕೊಡಲಿವೆ 164 ಹೇಳಿಕೆಗಳು

ದರ್ಶನ್ & ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳಿಗೆ 164 ಹೇಳಿಕೆಗಳು ಮತ್ತಷ್ಟು ಬಲ ಕೊಡಲಿವೆ. ಈಗಾಗಲೇ 12 ಜನರ ವಿಡಿಯೊ ಹೇಳಿಕೆಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ದಾಖಲಿಸಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ CRPC 164 ಅಡಿಯಲ್ಲಿ 12 ಜನರ ಹೇಳಿಕೆ ದಾಖಲಿಸಲಾಗಿದೆ. ಈ 12 ಜ‌ನರ ಪ್ರಮುಖ ಸಾಕ್ಷಿಗಳ ವಿವರ ಇಲ್ಲಿದೆ.

ಸಾಕ್ಷಿ ನಂಬರ್ 1: ಎ1 ಆರೋಪಿ ಪವಿತ್ರಾಗೌಡ ಮನೆಯ ಸಿಸಿ ಟಿವಿ ಡಿವಿಆರ್ ರುಟ್ರೀವ್ ಮಾಡಿದ ಎಫ್‌ಎಸ್‌ಎಲ್ ಅಧಿಕಾರಿಯ ಹೇಳಿಕೆ.

ಸಾಕ್ಷಿ ನಂಬರ್ 2: ಎ2 ಆರೋಪಿ ದರ್ಶನ್ ಮನೆಯ ಡಿವಿಆರ್ ರಿಟ್ರೀವ್ ಮಾಡಿದ ಎಫ್‌ಎಸ್‌ಎಲ್ ಅಧಿಕಾರಿಯ ಹೇಳಿಕೆ.

ಸಾಕ್ಷಿ ನಂಬರ್ 3: ಶವ ಸಾಗಿಸಿದ ಸ್ಕಾರ್ಫಿಯೋ ವಾಹನದ ಮಾಲೀಕನ ಹೇಳಿಕೆ.

ಸಾಕ್ಷಿ ನಂಬರ್ 4: ಪಟ್ಟಣಗೆರೆ ಶೆಡ್‌ನ ಗುತ್ತಿಗೆದಾರನ ಹೇಳಿಕೆ.

ಸಾಕ್ಷಿ ನಂಬರ್ 5: ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದ ಕಾರು ಚಾಲಕನ ಹೇಳಿಕೆ.

ಸಾಕ್ಷಿ ನಂಬರ್ 6: ಆರೋಪಿಗಳು ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿದ ಬಳಿಕ ಫೋಟೊಗಳನ್ನು ಒರ್ವ ವ್ಯಕ್ತಿಗೆ ಹಳುಹಿಸಿದ್ದು, ಆತನ ಹೇಳಿಕೆ.

ಸಾಕ್ಷಿ ನಂಬರ್ 7: ಮೃತದೇಹ ಬಿಸಾಡಿದ ಬಳಿಕ ಆರೋಪಿಗಳಾದ ಕಾರ್ತಿಕ್ ಹಾಗೂ‌ ನಿಖಿಲ್ ಆಟೋದಲ್ಲಿ ನಾಯಂಡಹಳ್ಳಿವರೆಗೂ ಬಂದಿದ್ದಾರೆ. ವೇಳೆ ಡ್ರಾಪ್ ಮಾಡಿದ್ದ ಆಟೋ ಚಾಲಕನ ಹೇಳಿಕೆ.

ಸಾಕ್ಷಿ ನಂಬರ್ 8: ಪಟ್ಟಣಗೆರೆ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತನ ಹೇಳಿಕೆ.

ಸಾಕ್ಷಿ ನಂಬರ್ 9: ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಎಂಬಾತನ ಹೇಳಿಕೆ.

ಸಾಕ್ಷಿ ನಂಬರ್ 10: ಆರೋಪಿಗಳ ಸಂಪರ್ಕದಲ್ಲಿ ಇದ್ದ ಮುತ್ತಿರಾಜ್ ಎಂಬಾತನ ಹೇಳಿಕೆ.

ಸಾಕ್ಷಿ ನಂಬರ್ 11: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಆಟೋದಲ್ಲಿ ಕಿಡ್ನಾಪ್ ಮಾಡಿದ್ದಾಗ ಆಟೋ ಚಾಲಕನ ಹೇಳಿಕೆ.

ಸಾಕ್ಷಿ ನಂಬರ್ 12: ಜೂನ್ 8ರಂದು ಶೆಡ್‌ನಲ್ಲಿ ಇದ್ದ ಸೆಕ್ಯುರಿಟಿ ಗಾರ್ಡ್ ಹೇಳಿಕೆ.

ಇದನ್ನೂ ಓದಿ: Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Exit mobile version