ರೇಣುಕಾಸ್ವಾಮಿ ಕೊಲೆ ಪ್ರಕರಣ ಅಂತಿಮ ಹಂತ ತಲುಪಿದೆ. ಅತಿ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ ಪ್ರಕರಣವಾಗಿದ್ದು, ಈಗಾಗಲೆ ಸಾಬೀತಾಗಿರುವ ಸಾಕ್ಷಾಧಾರಗಳು ಹಾಗು ಆರೋಪಿಗಳ ಪರ ವಹಿಸಿ ಬಂದ ಹೇಳಿಕೆಗಳೇ ದರ್ಶನ್‌ಗೆ (Actor Darshan) ಕಂಟಕವಾಗಿವೆ. ಎಸಿಪಿ ಚಂದನ್ ನೇತೃತ್ವದ ತಂಡ ನಿಜಕ್ಕೂ ಶ್ರಮವಹಿಸಿ ಅನೇಕ ಸಾಕ್ಷಿಗಳನ್ನ ಕಲೆ ಹಾಕಿದೆ. ಪ್ರತಿಯೊಂದು ಸಾಕ್ಷಿಗಳೂ ಕೂಡ ಪ್ರಕರಣಕ್ಕೆ ಅಷ್ಟೆ ಪ್ರಾಮುಖ್ಯತೆಯನ್ನ ಒದಗಿಸಿದ್ದು ದರ್ಶನ್ ಮನೆಯ ಸಿಸಿಟಿವಿ ರಿಟ್ರೀವ್ ಸಹ ಒಂದು ಮಹತ್ವದ ಸಾಕ್ಷಿಯಾಗಿದೆ.
ಕೃತ್ಯ ಬಯಲಿಗೆ ಬಂದ ಬಳಿಕ ಡಿಲೀಟ್ ಆರೋಪಿಗಳು ದರ್ಶನ್ ಮನೆಗೆ ಸೇರಿ ಮೀಟಿಂಗ್ ಮಾಡಿದ್ದರು ಏನ್ನುವ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಡಿವಿಆರ್‌ನನ್ನು ಎಫ್ ಎಸ್ ಎಲ್‌ಗೆ ರವಾನೆ ಮಾಡಿದ್ದರು. ಎಫ್ ಎಸ್ ಎಲ್ ಅಧಿಕಾರಿಗಳು ಡಿವಿಆರ್‌ನಲ್ಲಿರುವ ಡಿಲೀಟೆಡ್ ವೀಡಿಯೊವನ್ನ ಪುನಃ ಪಡೆದುಕೊಂಡಿದ್ದಾರೆ. ದರ್ಶನ್ ಅವರು ತಪ್ಪು ಮಾಡಿಲ್ಲ ಎಂಬರ್ಥದಲ್ಲಿ ಮಾತನಾಡಿದ ಸೆಲೆಬ್ರಿಟಿಗಳ ಹೇಳಿಕೆಗಳನ್ನೂ ಕೂಡ ಪೊಲೀಸರು ಅನಾಲೈಝ್ ಮಾಡ್ತಿದ್ದಾರೆ. ಹತ್ತಾರು ಪೊಲೀಸರ ಶ್ರಮ , ಅನೇಕ ಸಾಕ್ಷಿಗಳು , ನ್ಯಾಯಾಲಯದ ಆದೇಶಗಳು ಇವೆಲ್ಲವೂ ಸುಳ್ಳು ಎಂಬರ್ಥದಲ್ಲಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ತಮ್ಮದೇ ಆದ ಸಾಮ್ರಾಜ್ಯವನ್ನ ಕಟ್ಟಿ ವ್ಯವಸ್ಥೆಯೇ ಸುಳ್ಳು ಎಂಬರ್ಥದಲ್ಲಿ ಕೆಲ ಸೆಲೆಬ್ರಿಟಿಗಳು ವರ್ತನೆಯನ್ನ ಮಾಡ್ತಿರುವುದು ಪೊಲೀಸರಿಗೆ ಹಾಗು ನ್ಯಾಯಾಲಯದ ಗಮನಕ್ಕೆ ಬಂದಿದೆ ಹಾಗು ಅಭಿಮಾನಿಗಳ ಧಮ್ಕಿಗಳೂ ಕೂಡ ಉಳಿದ ಆರೋಪಿಗಳ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ಈ ಹಿನ್ನಲೆಯಲ್ಲಿ ಇವೆಲ್ಲವೂ ಜಾಮೀನಿಗೆ ತೊಂದರೆಯಾಗುವ ಸಾಧ್ಯತೆಗಳೂ ಹೆಚ್ಚಿದೆ. ಇನ್ನು ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಕೌಂಟ್‌ಡೌನ್ ಆರಂಬವಾಗಿದೆ. ಚಾರ್ಜ್ ಶೀಟ್‌ನಲ್ಲಿ, ಸಿಡಿ ಆರ್ ರಿಪೋರ್ಟ್ ಗಳು , ಬಟ್ಟೆಗಳ ಸ್ಯಾಂಪಲ್ಸ್ , ಸಿಸಿಟಿವಿ , ಎಫ್ ಎಸ್ ಎಲ್ ರಿಪೋರ್ಟ್‌ಗಳು , 164 ಹೇಳಿಕೆಗಳೆಲ್ಲಾದರ ಉಲ್ಲೇಖವಿದೆ . ರೇಣುಕಾಸ್ವಾನಿ ಕೊಲೆಗೆ ಬಳಕೆಯಾದ ವಸ್ತುಗಳು ಕೂಡ ಪೊಲೀಸರ ಬಳಿದೆ. ಕೊಲೆಗೆ ಮುನ್ನ ಸ್ಟೋನಿ ಬ್ರೂಕ್ ಸಿಬ್ಬಂಧಿಗಳ ಹೇಳಿಕೆ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ಹೇಳಿಕೆಗಳು ಸಾಕಷ್ಟು ಮಹತ್ವ ಪಡೆದಿದೆ. ಸದ್ಯ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ.