Site icon Vistara News

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

Superstar Rajinikanth is unwell Family members admitted to hospital in the middle of the night

ಸೂಪರ್‌ ಸ್ಟಾರ್‌ ರಜನಿಕಾಂತ್ (Actor Rajinikanth) ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ (ಸೆ.30) ಮಧ್ಯರಾತ್ರಿ ತಲೈವಾ ರಜನಿಕಾತ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಜನಿಕಾಂತ್​ಗೆ ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್‌ ಅಭಿನಯಿಸಿರುವ ವೆಟ್ಟೈಯನ್​​​ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್‌ಗೆ 73 ವರ್ಷ ವಯಸ್ಸು ಆಗಿದೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Exit mobile version