Site icon Vistara News

ಪ್ರಿಯಾಂಕ ಚೋಪ್ರಾ ಹಳೆಯ ಆಭರಣದ ಜಾಹೀರಾತು ವಿಡಿಯೋ ವೈರಲ್, ನೆಟ್ಟಿಗರು ಏನಂದ್ರು?

priyanka chopra

ಬಾಲಿವುಡ್​ ಬೆಡಗಿ ಪ್ರಿಯಾಂಕ ಚೋಪ್ರಾ ಸಿನಿಮಾ ಜೊತೆ ಜೊತೆಗೆ ಕಮರ್ಷಿಯಲ್ ಜಾಹೀರಾತುಗಳಲ್ಲೂ ನಟಿಸುತ್ತಿರುತ್ತಾರೆ. ಸದ್ಯ ಅವರು ಈ ಹಿಂದೆ ಆಭರಣಗಳ ಜಾಹೀರಾತಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರೆಡ್ಡಿಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಜಾಹೀರಾತಿನಲ್ಲಿ ಅಭಿನಯಿಸಿರುವ ಹಳೆಯ ವಿಡಿಯೋವೊಂದನ್ನು  ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಪ್ರಿಯಾಂಕ ಹಳದಿ ಬಣ್ಣದ ಸೀರೆಯುಟ್ಟಿದ್ದಾರೆ. ಮೊದಲಿಗೆ ಚಿಟ್ಟೆಗಳ ಹಿಂದೆ ಓಡುವ ನಟಿ. ನಂತರ ಅದೇ ಚಿಟ್ಟೆಗಳು ಕಾಮನಬಿಲ್ಲಾಗಿ ಬಳಿಕ ಚಿನ್ನಾಭರಣವಾಗುತ್ತವೆ. ನಟಿ ಆಭರಣವನ್ನು ಪಡೆದುಕೊಳ್ಳುವ ಸಲುವಾಗಿ ಜೋಸ್ಕೋ ಆಭರಣದ ಅಂಗಡಿಗೆ ಪ್ರವೇಶ ಮಾಡುತ್ತಾಳೆ. ಬಳಿಕ ಆಭರಣದ ಅಂಗಡಿಯಲ್ಲಿ ವಿಭಿನ್ನ ರೀತಿಯ ಕಣ್ಣು ಕುಕ್ಕುವ ಆಭರಣಗಳನ್ನು ಕಂಡು ಬೆರಗಾಗುವ ಪ್ರಿಯಾಂಕ, ತಮ್ಮ ಕೈಗೆಟಕುವ ಆಭರಣಗಳನ್ನೇಲ್ಲಾ ಧರಿಸಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಸದ್ಯ ಈ ಜಾಹೀರಾತು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ.

ಇದನ್ನು ಓದಿ| 18 ವರ್ಷವಿದ್ದಾಗ ಹೇಗಿದ್ದರು ಪಿಗ್ಗಿ? Memories ಶೇರ್‌ ಮಾಡಿಕೊಂಡ ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ ಹಳೆಯ ಜಾಹೀರಾತು ವಿಡಿಯೋ ನೋಡಿದ ಅವರ ಅಪಾರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಒಬ್ಬಾತ 1970ರಲ್ಲಿಯೇ ಈ ಮಟ್ಟಿಗಿನ ಗ್ರಾಫಿಕ್ಸ್​ಗಳನ್ನು ಮಾಡಲಾಗುತ್ತಿತ್ತು ಎಂದರೆ, ಮತ್ತೊಬ್ಬರು ಅದ್ಭುತ ಎಂದಿದ್ದಾರೆ. ಇನ್ನೊಬ್ಬರು ಪ್ರಿಯಾಂಕ ಚಿನ್ನದಲ್ಲಿ ಸ್ನಾನ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿರುವ ನಟಿ ಪ್ರಿಯಾಂಕ ಚೋಪ್ರಾ ಕಳೆದ ತಿಂಗಳು ಪ್ಯಾರಿಸ್​ನಲ್ಲಿ ನಡೆದ ಬಲ್ಗೇರಿಯಾ ಹೈ ಜ್ಯುವೆಲರಿ ಗಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರೆ ಬ್ರಾಂಡ್ ಅಂಬಾಸಿಡರ್​ಗಳಾದ ಹ್ಯಾಥ್​ವೇ ಮತ್ತು ಲಿಸಾ ಅವರ ಜೊತೆ ತೆಗೆಸಿಕೊಂಡ ಪೋಟೋವನ್ನು ಕೂಡ ಶೇರ್​ ಮಾಡಿಕೊಂಡಿದ್ದರು.

ಪ್ರಸ್ತುತ ಪ್ರಿಯಾಂಕ ಲಾಸ್ ಏಂಜಲಿಸ್​ನಲ್ಲಿ ಪತಿ ನಿಕ್ಕಿ ಜೊನಾಸ್​ ಮತ್ತು ಮಗಳು Malti Marie Chopra Jonas​ ಜೊತೆ ವಾಸವಾಗಿದ್ದಾರೆ. ನ್ಯೂಯಾರ್ಕ್​ನಲ್ಲಿ ತಮ್ಮದೇ ಸ್ವಂತ ರೆಸ್ಟೋರೆಂಟ್​ನ್ನು ಸಹ ಹೊಂದಿದ್ದಾರೆ. ಜತೆಗೆ ತಮ್ಮದೇ ಹೇರ್​ಕೇರ್ ಬ್ರಾಂಡ್​ನ್ನು ಸಹ ಹೊಂದಿದ್ದಾರೆ. ಇತ್ತೀಚೆಗಷ್ಟೇ ಸಿಟಾಡೆಲಾ ವೆಬ್​ ಸೀರಿಸ್​​ ಮುಗಿಸಿರುವ ಪ್ರಿಯಾಂಕ ಕೈಯಲ್ಲಿ ಮತ್ತೆರಡು ಹಾಲಿವುಡ್​ ಸಿನಿಮಾಗಳಿದ್ದು, ಇದಾದ ಬಳಿಕ ಬಾಲಿವುಡ್​ನ ಮತ್ತೊಂದು ಸಿನಿಮಾದಲ್ಲಿ ಫರ್ಹಾನ್ ಅಖ್ತರ್ ಜೊತೆ Jee Le Zaraa ಸಿನಿಮಾದಲ್ಲಿ ನಟಿಸಲಿದ್ದಾರೆ.

ಇದನ್ನು ಓದಿ| ಪ್ಯಾರಿಸ್‌ನ ಬಲ್ಗೇರಿಯ ಈವೆಂಟ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

Exit mobile version