ಜಪಾನಿನ ಒಸಾಕಾದಲ್ಲಿನ ಝೌ ಎಂಬ ರೆಸ್ಟೋರೆಂಟು ವಿನೂತನ ಐಡಿಯಾ ಮಾಡಿದೆ. ಇಲ್ಲಿಗೆ ಬರುವ ಗ್ರಾಹಕರು, ರೆಸ್ಟೋರೆಂಟಿನ ಒಳಗಿರುವ ಕೊಳದಲ್ಲಿ ಮೀನು ಹಿಡಿಯಬಹುದು. ಅದು ನಿಮ್ಮ ಟೇಬಲ್ಲಿಗೂ ಬರುತ್ತದೆ!
ದಂಗುಬಡಿಸುವ ಸುದ್ದಿ ಊಟಿಯಿಂದ ಬಂದಿದೆ. ಊಟಿಯ ಗಾಲ್ಫ್ ಕೋರ್ಸ್ ಪಕ್ಕದಲ್ಲೇ ಹುಲಿಯೊಂದು ತನ್ನ ಬೇಟೆಯನ್ನು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು ಪ್ರವಾಸಿಗರ ಮೈಯಲ್ಲೂ ನಡುಕ ಹುಟ್ಟಿಸಿದೆ!
2017ರಲ್ಲಿ ಹಾವಳಿ ಎಬ್ಬಿಸಿದ ಓಖಿ ಚಂಡಮಾರುತದಲ್ಲಿ ಗಾಯಗೊಂಡು ನೆಲೆ ಕಳೆದುಕೊಂಡಿದ್ದ ರಣಹದ್ದನ್ನು ತಮಿಳುನಾಡಿನಲ್ಲಿ ಉಪಚರಿಸಿ, ಐದು ವರ್ಷಗಳ ಬಳಿಕ ರಾಜಸ್ಥಾನಕ್ಕೆ ಬಿಡಲಾಗಿದೆ.
ತಮಾಷೆಯಾಗಿರುವ ಈ ವಿಡಿಯೋನಲ್ಲಿ ನಾಯಿಯ ಭಾವನೆಯನ್ನು ನೋಡಲು ವಿಡಿಯೋವನ್ನೇ ವೀಕ್ಷಿಸಬೇಕು. ಮುದ್ದುಮುದ್ದಾಗಿ ಅದು ಮುಖ ತಿರುಗಿಸಿ ಎತ್ತಲೋ ನೋಡುವ ಅದರ ಅಭಿನಯವೇ ಅದ್ಭುತವಾಗಿದೆ.
ಅವರ ವಯಸ್ಸು 66. ಇಷ್ಟರವರೆಗೆ 87 ಮದುವೆಯಾಗಿ ಇದೀಗ 88ನೇ ಮದುವೆಯಾಗಲು ಹಸೆಮಣೆಯೇರಲು ಕೂತ ಈತನಿಗೆ ಮಕ್ಕಳೆಷ್ಟಿವೆ ಎಂಬ ಬಗ್ಗೆ ಮಾತ್ರ ಯಾರಿಗೂ ಮಾಹಿತಿಗಳಿಲ್ಲ.
ಇಂಗ್ಲಿಷ್ ಬರದ, ಗ್ರಾಮೀಣ ಹಿನ್ನೆಲೆಯವರು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುವಾಗ ಗಲಿಬಿಗೆ ಒಳಗಾಗುತ್ತಾರೆ. ಅಂಥ ಒಂದು ವೃದ್ಧ ಜೋಡಿಯ ಮೊದಲ ಅನುಭವ ಮಧುರವಾದ ಬಗೆ ಇಲ್ಲಿದೆ.
ವಿಮಾನ ಪ್ರಯಾಣದ ನಡುವೆ ನಡೆದ ಸಣ್ಣದೊಂದು ಘಟನೆಯ 50 ಸೆಕೆಂಡುಗಳ ಚಂದದ ವಿಡಿಯೋ ಒಂದು ಕೇವಲ ಈ ವಿಡಿಯೋದಲ್ಲಿರುವ ಇಬ್ಬರಿಗೆ ಮಾತ್ರವಲ್ಲ, ವೀಕ್ಷಿಸಿದ ಅಷ್ಟೂ ಮಂದಿಯಲ್ಲಿ ಖುಷಿಯನ್ನು ಹಂಚಿದೆ.
ಕಬ್ಬು ತಿನ್ನುವ ಆಸೆಯಿಂದ ಗದ್ದೆಗೆ ನುಗ್ಗಿದ ಆನೆಮರಿ ಕೆಸರಿನಲ್ಲಿ ಕಾಲು ಹೂತು ಹೋಗಿ ಮೇಲೆ ಬರಲು ಪ್ರಯಾಸ ಪಡುವಾಗ ಹುಡುಗಿಯೊಬ್ಬಳು ಧೈರ್ಯದಿಂದ ಆನೆಮರಿಯ ಬಳಿ ಹೋಗಿ ಸಹಾಯ ಮಾಡುವ ಈ ವಿಡಿಯೋ ನೋಡಿದರೆ ನಿಮಗೂ ಮುದವೆನಿಸದೇ...
ಪುಟಾಣಿ ಸೋಫಿಯಾಳ ಪತ್ರದಿಂದ ಸ್ಪೂರ್ತಿಗೊಂಡಿರುವ ಲೆಗೋ ಸಂಸ್ಥೆ ತನ್ನ ಬಿಲ್ಡಿಂಗ್ ಬ್ಲಾಕ್ಸ್ ಹೊಸ ಸರಣಿಯಲ್ಲಿ ಹೊಸ ಬಗೆಯ ಗೊಂಬೆಗಳನ್ನು ಸೇರ್ಪಡೆಗೊಳಿಸಿದೆ. ಇವುಗಳಲ್ಲಿ ಸೋಫಿಯಾಳಂತೆಯೇ ಒಂದು ಕೈ ಇಲ್ಲದ ಗೊಂಬೆಯೂ ಸೇರಿಕೊಂಡಿದೆ.
ಪ್ರಾಣಿಗಳಲ್ಲೂ ಮಾನವೀಯತೆ ಇದೆ ಎಂಬುದನ್ನು ಮನುಷ್ಯನಿಗೆ ಆಗಾಗ ಮನವರಿಕೆ ಮಾಡುವ ಕೆಲಸವನ್ನು ಇಂಥ ವಿಡಿಯೋಗಳು ಮಾಡುತ್ತಿರುತ್ತವೆ. ಇದು ಅಂಥದೊಂದು ವಿಡಿಯೋ.