Site icon Vistara News

Akshay Kumar | ಬೇಗ ಬೆಳೆಯುತ್ತಿದ್ದೀಯಾ ಮಗಳೆ ಎಂದ ಅಕ್ಷಯ್‌ ಕುಮಾರ್‌: ಮಗಳ ಜನುಮದಿನಕ್ಕೆ ಸ್ಪೆಷಲ್‌ ವಿಡಿಯೊ!

Akshay Kumar

ಬೆಂಗಳೂರು : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ (Akshay Kumar) ಮಗಳು ನಿತಾರಾ ಜನುಮದಿನಕ್ಕೆ ವಿಡಿಯೊ ಹಂಚಿಕೊಳ್ಳುವುದರ ಮೂಲಕ ವಿಶೇಷವಾಗಿ ಹಾರೈಸಿದ್ದಾರೆ. 10ನೇ ವರುಷಕ್ಕೆ ಮಗಳು ಕಾಲಿಟ್ಟಿದ್ದು, ಮಗಳ ಕೈ ಹಿಡಿದುಕೊಂಡು ಮರಳಿನ ಮೇಲೆ ನಡೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾದಲ್ಲಿ ವಿಡಿಯೊ ಶೇರ್‌ ಮಾಡಿಕೊಂಡಿದ್ದು, ಒಂದು ದೃಶ್ಯದಲ್ಲಿ ಮಗಳ ಕೈ ಹಿಡಿದು ಮರಳಿನ ಮೇಲೆ ಹೆಜ್ಜೆ ಇಟ್ಟರೆ, ಇನ್ನೊಂದು ದೃಶ್ಯದಲ್ಲಿ ಮಗಳು ಶಾಪಿಂಗ್‌ ಬ್ಯಾಗ್‌ ಹಿಡಿದು ನಡೆಯುತ್ತಿರುವ ವಿಡಿಯೊ ಶೇರ್‌ ಮಾಡಿದ್ದಾರೆ. ವಿಡಿಯೊಗೆ ಕ್ಯಾಪ್ಷನ್‌ ನೀಡಿ ʻʻನನ್ನ ಮಗಳು ಇಷ್ಟು ದಿನ ನನ್ನ ಕೈಯನ್ನು ಹಿಡಿದುಕೊಂಡಿದ್ದಳು. ಇದೀಗ ಶಾಪಿಂಗ್‌ ಬ್ಯಾಗ್‌ ಹಿಡಿದು ನಡೆಯುತ್ತಿದ್ದಾಳೆ. ಬೇಗನೆ ಬೆಳೆಯುತ್ತಿದ್ದಾಳೆ. ಈ ವಿಶೇಷ ದಿನದಂದು ಹಾಗೂ ಯಾವಾಗಲೂ ಸದಾ ಖುಷಿಯಾಗಿರು ಮಗಳೆʼʼಎಂದು ಹಾರೈಸಿದ್ದಾರೆ.

ಅಕ್ಷಯ್‌ ಹಾಗೂ ಟ್ವಿಂಕಲ್ ಖನ್ನಾ ದಂಪತಿಗೆ ನಿತಾರಾ ಎರಡನೇ ಪುತ್ರಿ. ದಂಪತಿಗೆ 20 ವರ್ಷದ ಆರವ್ ಹಿರಿಯ ಮಗನಿದ್ದಾನೆ. ಈ ಹಿಂದೆ ಅಷ್ಟೇ ನಟ ಅಕ್ಷಯ್‌ ಕೈಯಲ್ಲಿ ಹಾಗೂ ತಲೆಯ ಮೇಲೆ ಗೊಂಬೆಗಳನ್ನು ಇಟ್ಟುಕೊಂಡು, ನತಾರಾ ಜತೆ ಕೈ ಹಿಡಿದು ನಡೆಯುವ ಫೋಟೊವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ | Akshay Kumar | ಅತಿ ಹೆಚ್ಚು ತೆರಿಗೆ ಪಾವತಿಗಾಗಿ ಸಮ್ಮಾನ್‌ ಪ್ರಮಾಣ ಪತ್ರ ಪಡೆದ ನಟ

ʻʻನನ್ನ ಮಗಳನ್ನು ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಕರೆದೊಯ್ದಿದ್ದೆ. ಸ್ಟಫ್ಡ್ ಆಟಿಕೆಗಳನ್ನು ಗೆದ್ದಾಗ ಅವಳ ನಗು ನೋಡಿ ನಾನು ಹೀರೊ ಎಂದು ಭಾವಿಸಿದ್ದೆ. ಅಂದೊಂದು ಅತ್ಯುತ್ತಮ ದಿನವಾಗಿತ್ತು ʼʼಎಂದು ಸಂತಸ ವ್ಯಕ್ತಪಡಿಸಿದ್ದರು.

ಅಕ್ಷಯ್‌ ಕುಮಾರ್‌ ಅವರ ನಾಲ್ಕು ಚಿತ್ರಗಳು ಒಂದರ ಹಿಂದೆ ಒಂದರಂತೆ ಫ್ಲಾಪ್‌ ಆಗಿದ್ದವು. ಒಂದು ಸಿನಿಮಾಗೆ ಅವರು 70 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ ಎಂದು ವರದಿಯಾಗಿತ್ತು. ಅವರ ʻಸೂರ್ಯವಂಶಿʼ ಸಿನಿಮಾ ಹಿಟ್‌ ಆಗಿತ್ತು. ಆದರೆ ನಂತರದಲ್ಲಿ ಬಂದ “ಪೃಥ್ವಿರಾಜ್‌ʼ ಸಿನಿಮಾ ಕಲೆಕ್ಷನ್‌ ಮಾಡಿರಲಿಲ್ಲ. ಅಕ್ಷಯ್‌ ಇದೀಗ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 1971ರ ಯುದ್ಧವನ್ನು ಆಧರಿಸಿದ ‘ಗೂರ್ಖಾ’ ಸಿನಿಮಾದಲ್ಲಿ ನಟಿಸಲು ಅಕ್ಷಯ್ ಒಪ್ಪಿದ್ದಾರೆ. ಗೂರ್ಖಾ ಸೇನಾ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Akshay Kumar | ಸಿನಿಮಾಗಳೆಲ್ಲವೂ ಫ್ಲಾಪ್‌: ಅಕ್ಷಯ್‌ ಕುಮಾರ್‌ ತೆಗೆದುಕೊಂಡ ನಿರ್ಧಾರ ಏನು?

Exit mobile version