ಬೆಂಗಳೂರು: ಮನರಂಜನಾ ಕ್ಷೇತ್ರದಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ಅತಿ ಹೆಚ್ಚು ತೆರಿಗೆ ಕಟ್ಟುವ ನಟರಾಗಿ ಹೊರಹೊಮ್ಮಿದ್ದರು. ವರದಿ ಪ್ರಕಾರ ಅವರು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿರುವ ಆದಾಯ ತೆರಿಗೆ ಇಲಾಖೆಯು ನಟನಿಗೆ ಸಮ್ಮಾನ್ ಪತ್ರ ಹಾಗೂ ಗೌರವ ಪ್ರಮಾಣಪತ್ರವನ್ನೂ ನೀಡಿತ್ತು. ಇದರ ಬೆನ್ನಲ್ಲೆ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅವರ ಬಹುತೇಕ ಚಿತ್ರಗಳೆಲ್ಲ ಪ್ಲಾಪ್ ಆಗಿರುವ ಕಾರಣ ಅವರು ಇನ್ನು ಮುಂದೆ ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರ ಸಿನಿಮಾ ಅಷ್ಟೇನು ಹಿಟ್ ಆಗಿರಲಿಲ್ಲ. ಇತ್ತೀಚಿಗಷ್ಟೇ ಅವರ ರಕ್ಷಾಬಂಧನ್ ಸಿನಿಮಾ ಬಿಡುಗಡೆಗೊಂಡಿತ್ತು. ಆದರೆ ಅದು ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಕಲೆಕ್ಷನ್ ಮಾಡಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಂಭಾವನೆ ಪಟೆಯುತ್ತಿರುವ ನಟನ ಚಿತ್ರದಲ್ಲಿ ಕಲೆಕ್ಷನ್ ಆಗುತ್ತಿಲ್ಲ ಎಂಬ ಆತಂಕ ಚಿತ್ರರಂಗದಲ್ಲಿ ಇತ್ತು. ಇದೀಗ ಸ್ವತಃ ಅಕ್ಷಯ್ ಕುಮಾರ್ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡಿದ್ದಾರೆ. ಹೊಸ ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Akshay Kumar | ಅತಿ ಹೆಚ್ಚು ತೆರಿಗೆ ಪಾವತಿಗಾಗಿ ಸಮ್ಮಾನ್ ಪ್ರಮಾಣ ಪತ್ರ ಪಡೆದ ನಟ
ಸಂಭಾವನೆ ಕಡಿಮೆ ತೆಗೆದುಕೊಳ್ಳುತ್ತಾರೆ. ಆದರೆ ಒಂದೊಮ್ಮೆ ಸಿನಿಮಾ ಹಿಟ್ ಆದರೆ ಬಂದಿರುವ ಲಾಭದಲ್ಲಿ ಪಾಲು ಕೊಡಬೇಕೆಂಬ ಕರಾರು ಹಾಕಲಿದ್ದಾರೆ. ಅವರ ಈ ನಿರ್ಧಾರಕ್ಕೆ ನಿರ್ಮಾಪಕರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಅಕ್ಷಯ್ ಕುಮಾರ್ ಅವರ ನಾಲ್ಕು ಚಿತ್ರಗಳು ಒಂದರ ಹಿಂದೆ ಒಂದರಂತೆ ಫ್ಲಾಪ್ ಆಗಿದ್ದವು. ಒಂದು ಸಿನಿಮಾಗೆ ಅವರು 70 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ ಎಂದು ವರದಿಯಾಗಿತ್ತು. ಅವರ ʻಸೂರ್ಯವಂಶಿʼ ಸಿನಿಮಾ ಹಿಟ್ ಆಗಿತ್ತು. ಆದರೆ ನಂತರದಲ್ಲಿ ಬಂದ “ಪೃಥ್ವಿರಾಜ್ʼ ಸಿನಿಮಾ ಕಲೆಕ್ಷನ್ ಮಾಡಿರಲಿಲ್ಲ.
ಅಕ್ಷಯ್ ಇದೀಗ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 1971ರ ಯುದ್ಧವನ್ನು ಆಧರಿಸಿದ ‘ಗೂರ್ಖಾ’ ಸಿನಿಮಾದಲ್ಲಿ ನಟಿಸಲು ಅಕ್ಷಯ್ ಒಪ್ಪಿದ್ದಾರೆ. ಗೂರ್ಖಾ ಸೇನಾ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ | Raksha Bandhan | ಟ್ವೀಟ್‌ನಲ್ಲಿ ಟ್ರೆಂಡ್ ಆಯ್ತು ರಕ್ಷಾಬಂಧನ್ ಸಿನಿಮಾ: ಅಕ್ಷಯ್ ಕುಮಾರ್ ನಟನೆಗೆ ಮೆಚ್ಚುಗೆ