ಬೆಂಗಳೂರು: ನಟಿ ಆಲಿಯಾ ಭಟ್ (Alia Bhatt) ಅವರ ತಾತ (ತಾಯಿಯ ತಂದೆ) ನರೇಂದ್ರನಾಥ್ ರಾಜ್ದಾನ್ (Narendranath Razdan) (95) ಜೂನ್ 1ರಂದು ನಿಧನರಾದರು.
ನರೇಂದ್ರನಾಥ್ ರಾಜ್ದಾನ್ ಶ್ವಾಸಕೋಶದ ಸೋಂಕಿನಿಂದಾಗಿ ಬಳಲುತ್ತಿದ್ದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸೋಂಕು ಉಲ್ಬಣಗೊಂಡಿದ್ದರಿಂದ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯದೇ ಕೊನೆಯುಸಿರೆಳಿದ್ದಾರೆ.
ಈಗ ಈ ಬಗ್ಗೆ ಆಲಿಯಾ ಭಟ್ ತಮ್ಮ ತಾತನ ನೆನಪುಗಳನ್ನು ಮೆಲುಕು ಹಾಕಿ ಭಾವುಕ ಪೋಸ್ಟ್ ಒಂದನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ ತಾತ ನರೇಂದ್ರನಾಥ್ ರಾಜ್ದಾನ್ ಕುರಿತು ಕೆಲವು ಸಾಲುಗಳನ್ನು ಹೀಗೆ ಬರೆದುಕೊಂಡಿದ್ದಾರೆ. ʻʻನನ್ನ ಅಜ್ಜನೇ ನನಗೆ ಹೀರೊ. ಅವರು ತಮ್ಮ 93 ವರ್ಷದ ವರೆಗೆ ಗಾಲ್ಫ್ ಆಡಿದ್ದಾರೆ. ನನಗೆ ಅತ್ಯುತ್ತಮ ಕಥೆಗಳನ್ನು ಹೇಳಿದರು. ಮೊಮ್ಮಗಳಾದ ನನ್ನ ಜತೆ ಆಟವಾಡಿದರು. ಅವರ ಕ್ರಿಕೆಟ್ ನನಗೆ ತುಂಬವೇ ಇಷ್ಟವಾಯಿತು, ಅವರ ಸ್ಕೆಚಿಂಗ್ ನನ್ನ ಅಚ್ಚುಮೆಚ್ಚು. ಅವರು ತಮ್ಮ ಕೊನೇ ಉಸಿರು ಇರುವವರೆಗೂ ತಮ್ಮ ಕುಟುಂಬವನ್ನು ಪ್ರೀತಿಸುತ್ತಿದ್ದರು. ಈಗ ನಾನು ತುಂಬಾ ದುಃಖದಿಂದ್ದೇನೆ. ಆದರೆ, ಮನಸ್ಸಿನ ಮೂಲೆಯಲ್ಲಿ ಸಂತೋಷವನ್ನು ಕಾಣುತ್ತಿದ್ದೇನೆ. ಏಕೆಂದರೆ, ನನ್ನ ಅಜ್ಜನ ಪ್ರತಿ ಹೆಜ್ಜೆಯಲ್ಲೂ ನಮಗೆ ಸಂತೋಷ ಕಾಣುತ್ತಿತ್ತು” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Alia Bhatt: ಅತ್ಯುತ್ತಮ ನಟಿ ಪ್ರಶಸ್ತಿ ಬಂದರೂ ಸಮಾರಂಭಕ್ಕೆ ಗೈರಾದ ಆಲಿಯಾ ಭಟ್; ಕಾರಣವೇನು?
ಆಲಿಯಾ ಭಟ್ ಪೋಸ್ಟ್
ಆಲಿಯಾ ಭಟ್ ಕೆಲವುದ ದಿನಗಳ ಹಿಂದೆ ಅಬುಧಾಬಿಯಲ್ಲಿ ನಡೆದ IIFA 2023ರಲ್ಲಿ (Alia Bhatt) ಗೈರಾಗಿದ್ದರು. ತಾತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಆಲಿಯಾ, ಆ ಪ್ರವಾಸವನ್ನು ರದ್ದು ಮಾಡಿಕೊಂಡಿದ್ದರು.
ಆಲಿಯಾ ಭಟ್ ಅವರು ಈಗ ಬಾಲಿವುಡ್ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.