Alia Bhatt grandfather Narendranath Razdan passes away Alia Bhatt: ಆಲಿಯಾ ಭಟ್ ತಾತ ನರೇಂದ್ರನಾಥ್ ರಾಜ್​ದಾನ್ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ - Vistara News

South Cinema

Alia Bhatt: ಆಲಿಯಾ ಭಟ್ ತಾತ ನರೇಂದ್ರನಾಥ್ ರಾಜ್​ದಾನ್ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ

Alia Bhatt: ನರೇಂದ್ರನಾಥ್ ರಾಜ್​ದಾನ್ ಶ್ವಾಸಕೋಶದ ಸೋಂಕಿನಿಂದಾಗಿ ಬಳಲುತ್ತಿದ್ದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸೋಂಕು ಉಲ್ಬಣಗೊಂಡಿದ್ದರಿಂದ, ವೈದ್ಯರು ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈಗ ಈ ಬಗ್ಗೆ ಆಲಿಯಾ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Alia Bhatt grandfather
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಆಲಿಯಾ ಭಟ್ (Alia Bhatt) ಅವರ ತಾತ (ತಾಯಿಯ ತಂದೆ) ನರೇಂದ್ರನಾಥ್ ರಾಜ್​ದಾನ್ (Narendranath Razdan) (95) ಜೂನ್‌ 1ರಂದು ನಿಧನರಾದರು.

ನರೇಂದ್ರನಾಥ್ ರಾಜ್​ದಾನ್ ಶ್ವಾಸಕೋಶದ ಸೋಂಕಿನಿಂದಾಗಿ ಬಳಲುತ್ತಿದ್ದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸೋಂಕು ಉಲ್ಬಣಗೊಂಡಿದ್ದರಿಂದ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯದೇ ಕೊನೆಯುಸಿರೆಳಿದ್ದಾರೆ.

ಈಗ ಈ ಬಗ್ಗೆ ಆಲಿಯಾ ಭಟ್‌ ತಮ್ಮ ತಾತನ ನೆನಪುಗಳನ್ನು ಮೆಲುಕು ಹಾಕಿ ಭಾವುಕ ಪೋಸ್ಟ್‌ ಒಂದನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್‌ ತಾತ ನರೇಂದ್ರನಾಥ್ ರಾಜ್​ದಾನ್ ಕುರಿತು ಕೆಲವು ಸಾಲುಗಳನ್ನು ಹೀಗೆ ಬರೆದುಕೊಂಡಿದ್ದಾರೆ. ʻʻನನ್ನ ಅಜ್ಜನೇ ನನಗೆ ಹೀರೊ. ಅವರು ತಮ್ಮ 93 ವರ್ಷದ ವರೆಗೆ ಗಾಲ್ಫ್ ಆಡಿದ್ದಾರೆ. ನನಗೆ ಅತ್ಯುತ್ತಮ ಕಥೆಗಳನ್ನು ಹೇಳಿದರು. ಮೊಮ್ಮಗಳಾದ ನನ್ನ ಜತೆ ಆಟವಾಡಿದರು. ಅವರ ಕ್ರಿಕೆಟ್ ನನಗೆ ತುಂಬವೇ ಇಷ್ಟವಾಯಿತು, ಅವರ ಸ್ಕೆಚಿಂಗ್ ನನ್ನ ಅಚ್ಚುಮೆಚ್ಚು. ಅವರು ತಮ್ಮ ಕೊನೇ ಉಸಿರು ಇರುವವರೆಗೂ ತಮ್ಮ ಕುಟುಂಬವನ್ನು ಪ್ರೀತಿಸುತ್ತಿದ್ದರು. ಈಗ ನಾನು ತುಂಬಾ ದುಃಖದಿಂದ್ದೇನೆ. ಆದರೆ, ಮನಸ್ಸಿನ ಮೂಲೆಯಲ್ಲಿ ಸಂತೋಷವನ್ನು ಕಾಣುತ್ತಿದ್ದೇನೆ. ಏಕೆಂದರೆ, ನನ್ನ ಅಜ್ಜನ ಪ್ರತಿ ಹೆಜ್ಜೆಯಲ್ಲೂ ನಮಗೆ ಸಂತೋಷ ಕಾಣುತ್ತಿತ್ತು” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Alia Bhatt: ಅತ್ಯುತ್ತಮ ನಟಿ ಪ್ರಶಸ್ತಿ ಬಂದರೂ ಸಮಾರಂಭಕ್ಕೆ ಗೈರಾದ ಆಲಿಯಾ ಭಟ್‌; ಕಾರಣವೇನು?

ಆಲಿಯಾ ಭಟ್‌ ಪೋಸ್ಟ್‌

ಆಲಿಯಾ ಭಟ್‌ ಕೆಲವುದ ದಿನಗಳ ಹಿಂದೆ ಅಬುಧಾಬಿಯಲ್ಲಿ ನಡೆದ IIFA 2023ರಲ್ಲಿ (Alia Bhatt) ಗೈರಾಗಿದ್ದರು. ತಾತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಆಲಿಯಾ, ಆ ಪ್ರವಾಸವನ್ನು ರದ್ದು ಮಾಡಿಕೊಂಡಿದ್ದರು.

ಆಲಿಯಾ ಭಟ್ ಅವರು ಈಗ ಬಾಲಿವುಡ್​ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್​ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

Kamal Haasan: ಇಂಡಿಯನ್ 2ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೀಗ ‘ಇಂಡಿಯನ್’-2ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಎನ್ನುತ್ತಿದ್ದಾರೆ. ‘ಇಂಡಿಯನ್’ ಸಿನಿಮಾ ನೋಡದವರು ನೋಡಲು ಬಯಸುತ್ತಿದ್ದಾರೆ. ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ.

VISTARANEWS.COM


on

Kamal Haasan Indian cinema release OTT today
Koo

ಬೆಂಗಳೂರು: “ಇಂಡಿಯನ್ 2,” ಎಸ್. ಶಂಕರ್ ನಿರ್ದೇಶನದ ಸಿನಿಮಾ. ನಟ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ, ಇಂಡಿಯನ್‌ 2 (Indian 2 box office) ಅಂತಿಮವಾಗಿ ಶುಕ್ರವಾರ (ಜು. 12) ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ‘ಇಂಡಿಯನ್ 2’ ಸಿನಿಮಾ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಹುಸಿ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ.  ಇಂಡಿಯನ್ 2ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೀಗ ‘ಇಂಡಿಯನ್’-2ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಎನ್ನುತ್ತಿದ್ದಾರೆ. ‘ಇಂಡಿಯನ್’ ಸಿನಿಮಾ ನೋಡದವರು ನೋಡಲು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ ಎಂದು ವರದಿಯಾಗಿದೆ.

ಕೆಲವರು ಇನ್ನು 10 ಬಾರಿ ‘ಇಂಡಿಯನ್’ ನೋಡಬಹುದು. ಸೀಕ್ವೆಲ್ ನೋಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು ‘ಇಂಡಿಯನ್’ ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಜುಲೈ 14ರಿಂದ ಅಂದರೆ ಇಂದು ರಾತ್ರಿಯಿಂದಲೇ ‘ಇಂಡಿಯನ್’ ಸಿನಿಮಾ ರಿಲೀಸ್ ಆಗಲಿದೆ. ರೀ ಮಾಸ್ಟರ್ಸ್‌ 4K ವರ್ಷನ್‌ ನೋಡಲು ಸಿಗಲಿದೆ ಎಂದು ವರದಿಯಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ‘ಇಂಡಿಯನ್-2’ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಆಗಸ್ಟ್ 15ಕ್ಕೆ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. “ಇಂಡಿಯನ್ 2” ನ ಸಮಗ್ರ ಪಾತ್ರವರ್ಗವು ಆಕರ್ಷಕವಾಗಿದೆ.

ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ. 1.1 ಕೋಟಿ ರೂ. ಹಿಂದಿ ಆವೃತ್ತಿಯಿಂದ ಮತ್ತು 7.9 ಕೋಟಿ ರೂ. ತೆಲುಗು ಆವೃತ್ತಿಯಿಂದ ಬಂದಿದೆ.ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

Continue Reading

ಟಾಲಿವುಡ್

Raj Tarun: ಆತ್ಮಹತ್ಯೆಗೆ ಯತ್ನಿಸಿದ ನಟ ರಾಜ್ ತರುಣ್ ಪ್ರೇಯಸಿ; ಪೊಲೀಸರ ಮಧ್ಯ ಪ್ರವೇಶ!

Raj Tarun: ಯಾವಾಗ ಲಾವಣ್ಯ ಅವರು ರಾಜ್‌ ತರುಣ್‌ ಹಾಗೂ ಅವರ ಜತೆ ಸಂಬಂಧ ಇತ್ತು ಎನ್ನಲಾಗುತ್ತಿದ್ದ ನಟಿ ಮಾಳವಿ ಮಲ್ಹೋತ್ರಾ ವಿರುದ್ಧ ದೂರು ನೀಡಿದ್ದರೋ. ಅದರ ಪ್ರತಿಯಾಗಿ  ರಾಜ್ ತರುಣ್​ರ ಹೊಸ ಸಿನಿಮಾದ ನಾಯಕ ನಟಿ ಮಾಳವಿ ಮಲ್ಹೋತ್ರಾ, ರಾಜ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದರು.

VISTARANEWS.COM


on

Raj Tarun Girl Friend Lawanya Attempted To Suicide
Koo

ಬೆಂಗಳೂರು:  ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಟಾಲಿವುಡ್​ನ ಜನಪ್ರಿಯ ಯುವ ನಟ ರಾಜ್ ತರುಣ್ (Raj Tarun) ವಿರುದ್ಧ ಅವರ ಪ್ರೇಯಸಿ ಲಾವಣ್ಯ ವಂಚನೆ ಪ್ರಕರಣ ದಾಖಲಿಸಿದ್ದರು. ರಾಜ್​ ಅನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.  ಇದೀಗ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಆತ್ಮಹತ್ಯೆಯನ್ನು ತಡೆದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಲಾವಣ್ಯ ಶನಿವಾರ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು ಸೂಕ್ತ ಸಮಯಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗುತ್ತಿದೆ. 

ಯಾವಾಗ ಲಾವಣ್ಯ ಅವರು ರಾಜ್‌ ತರುಣ್‌ ಹಾಗೂ ಅವರ ಜತೆ ಸಂಬಂಧ ಇತ್ತು ಎನ್ನಲಾಗುತ್ತಿದ್ದ ನಟಿ ಮಾಳವಿ ಮಲ್ಹೋತ್ರಾ ವಿರುದ್ಧ ದೂರು ನೀಡಿದ್ದರೋ. ಅದರ ಪ್ರತಿಯಾಗಿ  ರಾಜ್ ತರುಣ್​ರ ಹೊಸ ಸಿನಿಮಾದ ನಾಯಕ ನಟಿ ಮಾಳವಿ ಮಲ್ಹೋತ್ರಾ, ರಾಜ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದರು. ಲಾವಣ್ಯ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಾನು ರಾಜ್ ತರುಣ್‌ ಜತೆ ಸಂಬಂಧ ಹೊಂದಿಲ್ಲ ಮತ್ತು ನಮ್ಮಿಬ್ಬರ ಮಧ್ಯೆ ಇರುವುದು ಕೇವಲ ಫ್ರೆಂಡ್‌ಶಿಪ್‌. ನಮ್ಮ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಹೇಳಿಕೊಂಡಿದ್ದರು.

ಇದೀ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶನಿವಾರ ತಮ್ಮ ವಕೀಲರನ್ನು ಭೇಟಿ ಆಗಿದ್ದ ಲಾವಣ್ಯ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್, ನಟ ರಾಜ್ ತರುಣ್, ತಮ್ಮ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಇನ್ನಿತರೆಗಳಿಂದ ಬೇಸತ್ತಿರುವುದಾಗಿ ಹೇಳಿಕೊಂಡಿದ್ದರು. ಲಾವಣ್ಯ ವಕೀಲರಿಗೆ ಸಂದೇಶ ಕಳಿಸಿ, ಈ ಪ್ರಪಂಚದಲ್ಲಿ ನನ್ನ ದಿನಗಳು ಅಂತ್ಯವಾದವು’, ‘ಈ ಮೈಂಡ್ ಗೇಮ್, ಗಾಸಿಪ್​ಗಳಿಂದ ನನಗೆ ಸಾಕಾಗಿ ಹೋಗಿದೆ’ ಎಂದೆಲ್ಲ ಮೆಸೆಜ್‌ ಕಳುಹಿಸಿದ್ದರಂತೆ. ಲಾವಣ್ಯರ ಮನೆಗೆ ಧಾವಿಸಿದ ಪೊಲೀಸರು ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ತಡೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Raj Tarun: ಯುವ ನಟ ರಾಜ್ ತರುಣ್ ಮಾಜಿ ಪ್ರೇಯಸಿ ವಿರುದ್ಧ ದೂರು ದಾಖಲಿಸಿದ ನಟಿ!

ಲಾವಣ್ಯ ಈ ಹಿಂದೆ ದೂರು ನೀಡಿದ್ದೇನು?

ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದರು. . “ರಾಜ್ ತರುಣ್ ನನ್ನನ್ನು ನಂಬಿ, ಪ್ರೀತಿಸಿ, ದೈಹಿಕವಾಗಿಯೂ ಬಳಸಿಕೊಂಡಿದ್ದಾರೆ. ಇದಕ್ಕೆ ಕಾರಣ ಒಬ್ಬ ಯುವತಿ . ಹಾಗಾಗಿಯೇ ಆಕೆಯ ಹಾಗೂ ಆಕೆಯ ಸಹೋದರನ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ರಾಜ್‌ತರುಣ್ ಜತೆ 11 ವರ್ಷಗಳಿಂದ ಸಂಬಂಧ ಹೊಂದಿದ್ದೆ. ದೇವಸ್ಥಾನದಲ್ಲಿ ಮದುವೆ ಕೂಡ ಮಾಡಿಕೊಂಡಿದ್ದೇವು. ಆದರೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ 3 ತಿಂಗಳ ಹಿಂದೆ ರಾಜ್ ಮನೆ ಬಿಟ್ಟು ನನ್ನಿಂದ ದೂರ ಉಳಿದಿದ್ದರು’’ ಎಂದು ಲಾವಣ್ಯ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.

Continue Reading

ಕಾಲಿವುಡ್

Indian 2 box office: ನೆಲಕಚ್ಚಿದ ‘ಇಂಡಿಯನ್ 2’; ಫ್ಯಾನ್ಸ್‌ಗೆ ಭಾರಿ ನಿರಾಸೆ,  ಮೊದಲ ದಿನದ ಗಳಿಕೆ ಎಷ್ಟು?

Indian 2: ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

VISTARANEWS.COM


on

Indian 2 box office collection Day Kamal Haasan’s critically panned
Koo

ಬೆಂಗಳೂರು: ನಟ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ, ಇಂಡಿಯನ್‌ 2 (Indian 2 box office) ಅಂತಿಮವಾಗಿ ಶುಕ್ರವಾರ (ಜು. 12) ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ‘ಇಂಡಿಯನ್ 2’ ಸಿನಿಮಾ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಹುಸಿ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ. 1.1 ಕೋಟಿ ರೂ. ಹಿಂದಿ ಆವೃತ್ತಿಯಿಂದ ಮತ್ತು 7.9 ಕೋಟಿ ರೂ. ತೆಲುಗು ಆವೃತ್ತಿಯಿಂದ ಬಂದಿದೆ.

ಇಂಡಿಯನ್ 2 ಸಿನಿಮಾ ಕಮಲ್ ಹಾಸನ್ ಅವರ ಕೊನೆಯ ಚಿತ್ರ ʻವಿಕ್ರಮ್ʼ ಕ್ಕಿಂತ ಕಡಿಮೆ ಗಳಿಕೆ ಕಂಡಿದೆ. 2022 ರಲ್ಲಿ ವಿಕ್ರಮ್‌ ಸಿನಿಮಾ ತನ್ನ ಆರಂಭಿಕ ದಿನದಂದು 28 ಕೋಟಿ ರೂ. ಗಳಿಕೆ ಕಂಡಿತ್ತು. ವಿಕ್ರಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿತ್ತು. ವಿಶ್ವಾದ್ಯಂತ 430 ಕೋಟಿ ರೂ. ಗಳಿಕೆ ಕಂಡಿತ್ತು. ಅದಕ್ಕೂ ಮೊದಲು, ಕಮಲ್ ಹಾಸನ್ ಕೊನೆಯದಾಗಿ 2018 ರ ವಿಶ್ವರೂಪಂ ಚಿತ್ರದಲ್ಲಿ ನಟಿಸಿದ್ದರು. ಇಂಡಿಯನ್ 2’ ಸಿನಿಮಾಗೆ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಆಗಿದೆ. ಕಮಲ್ ಹಾಸನ್ ಅವರಂಥ ಸಿನಿಮಾಗೆ ಇದು ತುಂಬಾನೇ ಸಣ್ಣ ಮೊತ್ತ. 

ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: Indian 2: ಇಂಡಿಯನ್ 2ನಲ್ಲಿ ಸೆನ್ಸಾರ್ ಮಂಡಳಿ ಕೇಳಿದೆ ಆ ಐದು ಬದಲಾವಣೆ!

ಸ್ಯಾಕ್‌ನಿಲ್ಕ್ ಪ್ರಕಾರ, ಇಂಡಿಯನ್ 2 ತಮಿಳು ಆವೃತ್ತಿಗೆ ಒಟ್ಟಾರೆ 55% ಆಕ್ಯುಪೆನ್ಸಿಯನ್ನು ಹೊಂದಿತ್ತು, ಹೆಚ್ಚು ರಾತ್ರಿ ಪ್ರದರ್ಶನಗಳಿಂದ ಬಂದಿದೆ. ಚೆನ್ನೈ ಶೇ 68ರಷ್ಟು , ಹಿಂದಿ ಶೇ 11 ರಷ್ಟು ಆಕ್ಯುಪೆನ್ಸಿ , ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ಕ್ರಮವಾಗಿ ಶೇ. 12.5ರಷ್ಟು ​​ಮತ್ತು ಶೇ. 8ರಷ್ಟು ಆಕ್ಯುಪೆನ್ಸಿ ಇತ್ತು. ಚಿತ್ರದ ತೆಲುಗು ಆವೃತ್ತಿಯು ಉತ್ತಮ ಪ್ರದರ್ಶನ ನೀಡಿದೆ. ಶೇ. 58ರಷ್ಟು ಆಕ್ಯುಪೆನ್ಸಿ ಇತ್ತು ಎನ್ನಲಾಗಿದೆ. ಕಮಲ್ ಹಾಸನ್ ಇತ್ತೀಚೆಗೆ ಕಲ್ಕಿ 2898 ಎಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಜಾಗತಿಕವಾಗಿ 1000 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

Continue Reading

ಸ್ಯಾಂಡಲ್ ವುಡ್

Shiva Rajkumar: ಶಿವಣ್ಣನ ಬರ್ತ್‌ಡೇ ದಿನ, ಬರೋಬ್ಬರಿ 4 ತಿಂಗಳ ಬಳಿಕ ಒಟಿಟಿಗೆ ʻಕರಟಕ ದಮನಕʼ ಎಂಟ್ರಿ!

Shiva Rajkumar: ರಾಕ್‌ಲೈನ್ ವೆಂಕಟೇಶ್ ‘ಕರಟಕ ದಮನಕ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಚಿತ್ರದಲ್ಲಿ ಶಿವಣ್ಣ-ಪ್ರಭುದೇವಾಗೆ ನಾಯಕಿಯರಾಗಿ ನಟಿಸಿದ್ದರು.ವಿ. ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ರವಿಶಂಕರ್, ರಂಗಾಯಣ ರಘು, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

VISTARANEWS.COM


on

Shiva Rajkumar karataka damanaka In ott
Koo

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಶನ್‌ನ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ ʻಕರಟಕ ದಮನಕʼ (Karataka Damanaka)  ಮಾರ್ಚ್‌ 8ರಲ್ಲಿ ತೆರೆಗೆ ಬಂದಿತ್ತು. ಇದೀಗ ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಒಟಿಟಿಗೆ (Shiva Rajkumar) ಲಗ್ಗೆ ಇಟ್ಟಿದೆ. ಇಂದು ಶಿವರಾಜ್‌ ಕುಮಾರ್‌ ಅವರ ಜನುಮದಿನ. ಹೀಗಾಗಿ ಸಾಲು ಸಾಲು ಸಾಲು ಸಿನಿಮಾಮಗಳು ಬಿಡುಗಡೆಯಾಗಿವೆ. ಇದರ ಜತೆಗೆ ʻಕರಟಕ ದಮನಕʼ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ರಾಕ್‌ಲೈನ್ ವೆಂಕಟೇಶ್ ‘ಕರಟಕ ದಮನಕ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಚಿತ್ರದಲ್ಲಿ ಶಿವಣ್ಣ-ಪ್ರಭುದೇವಾಗೆ ನಾಯಕಿಯರಾಗಿ ನಟಿಸಿದ್ದರು.ವಿ. ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ರವಿಶಂಕರ್, ರಂಗಾಯಣ ರಘು, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.ಅಮೇಜಾನ್ ಪ್ರೈಂನಲ್ಲಿ ‘ಕರಟಕ ದಮನಕ’ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಸಾಮಾನ್ಯವಾಗಿ ತೆರೆಕಂಡ 45 ದಿನಕ್ಕೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಾವೆ. 25 ದಿನಕ್ಕೆ ದೊಡ್ಡ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಿವೆ. ಆದರೆ ಯಾಕೋ ‘ಕರಟಕ ದಮನಕ’ 4 ತಿಂಗಳ ಬಳಿಕ ಬಂದಿದೆ.

ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿದ್ದರು. ʻಕರಟಕ ದಮನಕʼ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ʻ45ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ!

ಸಿನಿಮಾ ಕುರಿತು ಮಾಧ್ಯಮದ ಜತೆ ಈ ಹಿಂದೆ ಯೋಗರಾಜ್‌ ಭಟ್‌ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು ʻʻʻಕರಟಕ ದಮನಕʼ ಲಾಕ್ ಡೌನ್‌ನಲ್ಲಿ ಹುಟ್ಟಿದ ಕಥೆ. ಈ ಚಿತ್ರಕ್ಕೂ ಮೊದಲು ಸರಸ್ವತಿ ಎಂಬ ಟೈಟಲ್‌ನಲ್ಲಿ ಅಪ್ರೋಚ್ ಮಾಡಿದ್ದೆ. ಶಿವಣ್ಣ ಕೂಡ ಕಥೆ ಒಪ್ಕೊಂಡಿದ್ದರು. ನಮ್ಮ ಇಡೀ ತಂಡ ಎನರ್ಜಿ ಕಲಿತಿದ್ದೆ ಶಿವಣ್ಣ ಅವರಿಂದ, ಪ್ರಭು ದೇವ್ ಹಾಗೂ ಶಿವಣ್ಣ ಸಿನಿಮಾದಲ್ಲಿ ಇಬ್ಬರು ದೋಸ್ತ್ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 7 ಹಾಡುಗಳಿದ್ದು, ಹರಿಕೃಷ್ಣ ಮುತ್ತು ಪೋಣಿಸಿದಂತೆ ಹಾಡುಗಳ ಕೊಟ್ಟಿದ್ದಾರೆʼʼಎಂದು ಹೇಳಿಕೊಂಡಿದ್ದರು.

Continue Reading
Advertisement
Ninagagi Kannada Serial entry by Pooja Gandhi
ಕಿರುತೆರೆ30 mins ago

Ninagagi Kannada Serial: ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ!

Cauvery Dispute
ರಾಜಕೀಯ31 mins ago

Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

haveri News
ಹಾವೇರಿ33 mins ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಕರ್ನಾಟಕ51 mins ago

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Bhavana Ramanna hoovu foundation Varna Spardhe Bharathanatya Competition
ಸಿನಿಮಾ1 hour ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ1 hour ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ1 hour ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Chandan Shetty talk about Nivedita other marriage
ಸ್ಯಾಂಡಲ್ ವುಡ್1 hour ago

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Donald Trump Assassination Bid
ವಿದೇಶ2 hours ago

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ19 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ24 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ1 day ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌