Site icon Vistara News

Alia Bhatt-Ranbir Kapoor: ಆಲಿಯಾ ಭಟ್‌ ಇದೀಗ ವಿಲನ್‌; ರಣಬೀರ್‌ ʻಅನಿಮಲ್‌ʼ ಸಿನಿಮಾ ಅದೇ ದಿನ ರಿಲೀಸ್‌!

Alia Bhatt Heart Of Stone To Release With Ranbir Kapoor Animal

#image_title

ಬೆಂಗಳೂರು: ಆಲಿಯಾ ಭಟ್ (Alia Bhatt) ʻಹಾರ್ಟ್ ಆಫ್ ಸ್ಟೋನ್ʼ ಸಿನಿಮಾ ಮೂಲಕ (Alia Bhatt-Ranbir Kapoor) ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬ್ರೆಜಿಲ್‌ನಲ್ಲಿ ನೆಟ್‌ಫ್ಲಿಕ್ಸ್ TUDUM ಈವೆಂಟ್‌ನಲ್ಲಿ ಸಿನಿಮಾ ಟ್ರೈಲರ್‌ ಬಿಡುಗಡೆಗೊಳಿಸಿದೆ. ಗಾಲ್ ಗಡೋಟ್ ಮತ್ತು ಜೇಮಿ ಡೋರ್ನಾನ್ ಜತೆಗೆ ಆಲಿಯಾ ಭಟ್ ಇದೇ ಮೊದಲ ಬಾರಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಆಗಸ್ಟ್ 11ರಂದು ನೆಟ್​ಫ್ಲಿಕ್ಸ್ ಮೂಲಕ ಈ ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ದಿನ ರಣಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.

ಆಲಿಯಾ ನಟನೆಯ ಅವರ ಹಾಲಿವುಡ್ ಚೊಚ್ಚಲ ಚಿತ್ರ ʻಹಾರ್ಟ್ ಆಫ್ ಸ್ಟೋನ್ʼ ಮತ್ತು ಪತಿ ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ. ಹಾರ್ಟ್‌ ಆಫ್‌ ಸ್ಟೋನ್‌ ಒಟಿಟಿಯಲ್ಲಿ ಪ್ರದರ್ಶನಗೊಳ್ಳಲಿದ್ದು, ಕಪೂರ್ ಅವರ ಚಿತ್ರ ಥಿಯೇಟ್ರಿಕಲ್ ಬಿಡುಗಡೆಯನ್ನು ಹೊಂದಿರುತ್ತದೆ. ಹಾರ್ಟ್ ಆಫ್ ಸ್ಟೋನ್ ನಲ್ಲಿ ಆಲಿಯಾ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾಗೆ ಟಾಮ್ ಹಾರ್ಪರ್​ ನಿರ್ದೇಶನ ಮಾಡಿದ್ದಾರೆ.

ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಚಿತ್ರದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ʻಅರ್ಜುನ್​ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ʻಅನಿಮಲ್ʼ ಸಿನಿಮಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್‌ ನಿರ್ಮಿಸಿದೆ.

ಇದನ್ನೂ ಓದಿ: Alia Bhatt: ಆಲಿಯಾ ಭಟ್ ತಾತ ನರೇಂದ್ರನಾಥ್ ರಾಜ್​ದಾನ್ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ

ಹಾರ್ಟ್ ಆಫ್ ಸ್ಟೋನ್ ಜತೆಗೆ, ಆಲಿಯಾ ಭಟ್ ಅವರು ರಣವೀರ್ ಸಿಂಗ್ ಜತೆಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಸಹ ಹೊಂದಿದ್ದಾರೆ. ಚಿತ್ರವು ಜುಲೈ 28 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

Exit mobile version