Site icon Vistara News

Star Saree Fashion: ಮೈಸೂರು ಸಿಲ್ಕ್ ಸೀರೆಯಲ್ಲಿ `ರಾಮಾಯಣ’ ಕಥಾನಕ ಅನಾವರಣ ಮಾಡಿದ ಆಲಿಯಾ ಭಟ್

Alia Bhatt Turquoise Blue Silk Saree Special Ramayana Connection

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಮ ಮಂದಿರ ಪ್ರಾಣ ಪ್ರತಿಷ್ಠಾನದ ಸಮಾರಂಭದಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ (Star Saree Fashion) ಉಟ್ಟ, ರಾಮಾಯಣದ ಚಿತ್ರಣವನ್ನೊಳಗೊಂಡ ಆರಾಧ್ಯ ಕ್ರಿಯೇಷನ್ಸ್ನ ಮೈಸೂರು ಸಿಲ್ಕ್ ಸೀರೆ ಇದೀಗ ಸುದ್ದಿಯಾಗಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ನಿಟ್ಟಿನಲ್ಲಿ, ನಟಿ ಆಲಿಯಾ ಭಟ್‌ ಆಯ್ಕೆ ಮಾಡಿದ ಈ ಸೀರೆಯ ವಿಶೇಷತೆ ಸೀರೆ ಪ್ರಿಯರನ್ನು ಮಾತ್ರವಲ್ಲ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೆಲೆಬ್ರೆಟಿ ಸ್ಟೈಲಿಸ್ಟ್‌ ಅಮಿ ಪಟೇಲ್‌ ಸ್ಟೈಲಿಂಗ್‌ನಲ್ಲಿ ಆರಾಧ್ಯ ಕ್ರಿಯೇಷನ್‌ನಲ್ಲಿ ಮೂಡಿ ಬಂದಿರುವ ಈ ಸೀರೆಯ ವಿಶೇಷತೆಯೇ ಅಂತಹದ್ದು. ನೋಡಲು ಸೀರೆ ಸಿಂಪಲ್‌ ಮೈಸೂರು ಸಿಲಕ್‌ ಎಂದೆನಿಸಿದರೂ, ಅದರ ಪಲ್ಲುವಿನಲ್ಲಿ ಇಡೀ ರಾಮಾಯಣದ ಚಿತ್ರಣ ಸಂಕ್ಷೀಪ್ತವಾಗಿ ಮೂಡಿಬಂದಿರುವುದು ವಿಶೇಷವೇ ಸರಿ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಸೀರೆ ವಿನ್ಯಾಸಕ್ಕೆ 100 ಗಂಟೆ

ಮೈಸೂರ್‌ ಸಿಲ್ಕ್‌ ಸೀರೆಯ ಪಲ್ಲುವಿನಲ್ಲಿ ಮೂಡಿ ಬಂದಿರುವ ರಾಮಾಯಣದ ಸುಮಾರು 10 ಚಿತ್ರಗಳನ್ನು ರಚಿಸಲು, ಮಿನಿಯೇಚರ್‌ ಪೇಟಿಂಗ್‌ ಮಾಡಲು ಕಲಾವಿದರಿಗೆ ಬರೋಬ್ಬರಿ 100 ಗಂಟೆ ಹಿಡಿದಿದೆ.

ಸೀರೆಯ ಪಲ್ಲುವಿನಲ್ಲಿ ಯಾವ್ಯಾವ ಚಿತ್ರಗಳಿವೆ?

ಮೈಸೂರು ಸಿಲ್ಕ್‌ ಪಲ್ಲುವಿನ ಮೇಲೆ ಮೂಡಿಸಲಾಗಿರುವ ಪಟ್ಟಚಿತ್ರ ಸ್ಟೈಲ್‌ ಪೇಟಿಂಗ್‌ನಲ್ಲಿ ರಾಮಾಯಣದ ಪ್ರಮುಖ ಘಟನೆಗಳನ್ನು ಚಿತ್ರಿಸಲಾಗಿದೆ. ಅವುಗಳಲ್ಲಿ, ರಾಮ ಶಿವ ಧನುಷನ್ನು ಮುರಿಯುತ್ತಿರುವುದು, ರಘುಕುಲದ ನೀತಿ, ದಶರಥನ ಪ್ರಮಾಣವಚನ, ದೋಣಿಯಲ್ಲಿ ಹೋಗುತ್ತಿರುವುದು, ಬಂಗಾರದ ಜಿಂಕೆ, ಸೀತೆ ಲಕ್ಷಣ ರೇಖೆಯನ್ನು ದಾಟುತ್ತಿರುವುದು, ರಾಮಸೇತು ಸಿದ್ಧಗೊಂಡಿರುವುದು, ಅಶೋಕಾ ವಾಟಿಕದಲ್ಲಿ ಹನುಮಾನ್‌ ಸೀತೆಗೆ ಉಂಗುರವನ್ನು ನೀಡುತ್ತಿರುವುದು ಹಾಗೂ ಕೊನೆಯಲ್ಲಿ ರಾಮನ ಪಟ್ಟಾಭಿಷೇಕದ ಚಿತ್ರಣಗಳು ಸುಂದರವಾಗಿ ಆಕರ್ಷಕವಾಗಿ ಮೂಡಿಸಲಾಗಿದೆ.

ಇದನ್ನೂ ಓದಿ: Star Saree Fashion: ಏನಿದು ನಟಿ ಶ್ರೀಲೀಲಾ ಧರಿಸಿ ಮಿಂಚಿದ ಆಕರ್ಷಕ ಕಟ್ ವರ್ಕ್ ಸೀರೆ?

ಯೂನಿಕ್‌ ಮೈಸೂರು ಸಿಲ್ಕ್‌ ಸೀರೆ

ಆಕಾಶ ನೀಲಿಯ ಬಣ್ಣದ ಸೀರೆಯನ್ನು ಆಯ್ಕೆ ಮಾಡಿರುವುದು ಉಲ್ಲಾಸದ ಸಂಕೇತ ಹಾಗೂ ಈ ವರ್ಣದ ಸೀರೆಯನ್ನು ಯಾರೂ ಕೂಡ ಧರಿಸುವುದು ಕಡಿಮೆ. ಕಲಾತ್ಮಕವಾಗಿರುವ ರಾಮಾಯಣದ ಮಿನಿಯೇಚರ್‌ ಪೇಟಿಂಗ್‌ ಹೊಂದಿರುವುದು ಯೂನಿಕ್‌ ಸೀರೆ ಎಂಸೆನಿಸಿಕೊಳ್ಳುತ್ತದೆ ಎಂದು ಸೆಲೆಬ್ರೆಟಿ ಸ್ಟೈಲಿಸ್ಟ್ ಆಮಿ ಪಟೇಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಟಿ ಆಲಿಯಾ ಭಟ್‌ ಕೂಡ ಈ ಸೀರೆಯನ್ನು ಇತರೇ ಆಕ್ಸೆಸರೀಸ್‌ಗಳೊಂದಿಗೆ ಧರಿಸಿರುವುದು ಮತ್ತಷ್ಟು ಆಕರ್ಷಕವಾಗಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version