Site icon Vistara News

London Misal: ರವೀಂದ್ರನಾಥ್‌ ಠ್ಯಾಗೋರ್‌ ನಾಟಕ ಆಧಾರಿತ ಚಿತ್ರ

london misal ರವೀಂದ್ರನಾಥ್‌ ಠ್ಯಾಗೋರ್‌

ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಲಂಡನ್‌ ಮಿಸಳ್‌ (London Misal) ಎಂಬ ಹೊಸ ಚಿತ್ರದ ಪೋಸ್ಟರ್‌ ಮರಾಠಿಯಲ್ಲಿ ಪ್ರೇಕ್ಷಕರಿಗೆ ಪರಿಚಯವಾಗಿತ್ತು. ಮನುಷ್ಯಾಕೃತಿಯ ಹಿಂದೆ ಹುಡುಗಿಯ ಮುಖವನ್ನು ಮರೆ ಮಾಡಲಾಗಿದೆ. ಆಕೃತಿಯ ಮುಖದಲ್ಲಿರುವ ದಪ್ಪ ಮೀಸೆಯನ್ನು ಯುವತಿ ಹಿಡಿದಿದ್ದಾಳೆ. ಚಿತ್ರದ ಹೆಸರನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಆದರೆ ಅದರ ಮೇಲೆ ಒಂದು ಸಾಲು ಮಾತ್ರ ಬಹಳ ಜನರನ್ನು ಸೆಳೆದಿತ್ತು. ಅದುವೇ, ರವೀಂದ್ರನಾಥ್‌ ಠ್ಯಾಗೋರ್‌ ಅವರ ನಾಟಕದಿಂದ ಸ್ಪೂರ್ತಿ ಎಂದು.

ಠ್ಯಾಗೋರ್‌ ಅವರ ನಾಟಕದಿಂದ ಪ್ರೇರೇಪಿತವಾದ ಕಥೆಯನ್ನು ಹೆಣೆಯಲಾಗಿದೆ ಎಂದು ನಿರ್ದೇಶಕ ಜಲೀಂದರ್‌ ಕುಂಬಾರ್‌ ಹೇಳಿದ್ದಾರೆ. ಆದರೆ London Misalಗೆ ಸ್ಫೂರ್ತಿಯಾದ ನಾಟಕ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ.

1879ರಲ್ಲಿ ಲಂಡನ್ನಿನಲ್ಲಿ ಯುವ ಠ್ಯಾಗೋರ್‌

ರವೀಂದ್ರನಾಥ ಠ್ಯಾಗೋರರು ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಶಾಲಾ ಕಾಲೇಜು ದಿನಗಳನ್ನು ಇಂಗ್ಲೆಂಡ್‌ನಲ್ಲಿ ಕಳೆದಿದ್ದರು. ಅವರ ಸುಪ್ರಸಿದ್ಧ ಕವಿತೆಗಳ ಗುಚ್ಚ ಗೀತಾಂಜಲಿಯನ್ನು ಲಂಡನ್ನಿನಲ್ಲೆ ಅನುವಾದ ಮಾಡಿದ್ದರು. ಲಂಡನ್ನಿನಲ್ಲಿ ರವೀಂದ್ರರ ಅನೇಕ ಹೆಜ್ಜೆ ಗುರುತು, ನೆನಪುಗಳಿವೆ. ಆದರೆ ಇಂತಹದ್ದೇ ವಿಚಾರದಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂಬ ವಿಚಾರವನ್ನು ಲಂಡನ್‌ ಮಿಸಳ್‌ ಪೋಸ್ಟರ್‌ನಲ್ಲಿ ರಹಸ್ಯವಾಗಿಯೇ ಇಡಲಾಗಿದೆ. ಮಿಸಳ್‌ ಎಂದರೆ ಮರಾಠಿಯಲ್ಲಿ ಮಿಶ್ರಣ ಎಂದರ್ಥ. ಈ ಚಿತ್ರದ ಮೂಲಕ ನಿರ್ದೇಶಕ ಏನನ್ನು ಮಿಶ್ರಣ ಮಾಡಲು ಹೊರಟಿದ್ದಾರೆ ಎನ್ನುವುದನ್ನು ರಹಸ್ಯದಲ್ಲಿಯೇ ಇಟ್ಟಿದ್ದಾರೆ. ಜನರಿಗೆ ಕ್ಯೂರಾಸಿಟಿಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ : ಪೋಷಕರೇ ನಿರ್ಮಿಸಿರುವ  ಸಿನಿಮಾ ʼSelfie ಮಮ್ಮಿGoogle ಡ್ಯಾಡಿʼ

ಹೆಸರಲ್ಲಿಯೇ ಇರುವ ಹಾಗೇ ಚಿತ್ರವನ್ನು ಲಂಡನ್‌ನಲ್ಲಿ ಶೂಟಿಂಗ್‌ ಮಾಡಲಾಗುತ್ತಿದೆ. ಜೂನ್‌ನಲ್ಲಿ ಲಂಡನ್‌ನಲ್ಲಿ ಶೂಟಿಂಗ್‌ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ಚಲನಚಿತ್ರದಲ್ಲಿ ಹತ್ತಕ್ಕಿಂತಲೂ ಹೆಚ್ಚಿನ ಪಾತ್ರಗಳಿವೆ. ಇವುಗಳೆಲ್ಲವೂ ಒಂದಕ್ಕಿಂದ ಒಂದು ವಿಭಿನ್ನವಾಗಿರುವ ಹಾಗೂ ವಿಶಿಷ್ಠವಾಗಿರುವ ಪಾತ್ರಗಳು. ಇವುಗಳನ್ನು ಸರಿದೂಗಿಸಿಕೊಂಡು ಚಿತ್ರೀಕರಣ ನಡೆಸುವುದು ಸವಾಲಿನ ಕೆಲಸವೇ ಆಗಿದೆ ಎಂದು ಚಿತ್ರ ತಂಡ ಹೇಳಿದೆ.

ಆದರೆ ಮುಖ್ಯಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಸೇರಿ ಅನೇಕ ಕುತೂಹಲಗಳು ಮೂಡಿವೆ. ಈ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಡದೆ ಕ್ಯೂರಿಯಾಸಿಟಿಯನ್ನು ಉಳಿಸಿದೆ.

Exit mobile version