Site icon Vistara News

ಇಂದು ಅಪ್ಪು ಪುಣ್ಯ ಸ್ಮರಣೆ, ಪುನೀತ್‌ಗೆ ಗೀತ ನಮನ

Gandhada Gudi

ಬೆಂಗಳೂರು: ಅಗಲಿದ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ʼಪುಣ್ಯ ಸ್ಮರಣೆʼ ಕಾರ್ಯಕ್ರಮ ಶುಕ್ರವಾರ ರಾತ್ರಿ ಆರಂಭಗೊಂಡಿದ್ದು, ಇವತ್ತಿಡೀ ನಡೆಯಲಿದೆ. ಲಕ್ಷಾಂತರ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು, ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್ ವತಿಯಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಶುಕ್ರವಾರ ರಾತ್ರಿ 12 ಗಂಟೆಯಿಂದ ಆರಂಭವಾದ ಗೀತ ನಮನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು, ಇಂದು ರಾತ್ರಿ 12 ಗಂಟೆಯವರೆಗೆ ನಡೆಯಲಿದೆ. ಬೆಟ್ಟದ ಹೂ ಚಿತ್ರದ ತಾಯಿ ಶಾರದೆ ಗೀತೆಯ ಮೂಲಕ ಶಮಿತಾ ಮಲ್ನಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಧ್ಯರಾತ್ರಿ 12ರಿಂದ 3ರ ವರೆಗೆ ಅರುಣ್ ಹಾಗೂ ತಂಡದಿಂದ, 3ರಿಂದ ಬೆಳಿಗ್ಗೆ 5ರ ವರೆಗೆ ಉಷಾ ಕೋಕಿಲ ಹಾಗೂ ತಂಡದಿಂದ, 5.30ರಿಂದ 6.30ರ ತನಕ ಆನೂರು ಅನಂತ ಕೃಷ್ಣ ಶರ್ಮ ವತಿಯಿಂದ ಲಯ ಲಾವಣ್ಯ ಸಂಗೀತ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 7ರಿಂದ 8 ಜೋಟ್ಸಾನಾ ಶ್ರೀಕಾಂತ್ ತಂಡದಿಂದ ವಯೋಲಿನ್ ವಾದನ, 8.30ರಿಂದ 10.30 ಸುದರ್ಶನ್ ಮತ್ತು ತಂಡದಿಂದ ಚಲನಚಿತ್ರ ಗೀತೆಗಳು, 11ರಿಂದ ಮಧ್ಯಾಹ್ನ 1ರ ವರೆಗೆ ಸುಗಮ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 1ರಿಂದ 4ರ ತನಕ ವೇಣುಗೋಪಾಲ್ ವೆಂಕಿ ತಂಡದಿಂದ ಚಲನಚಿತ್ರ ಗೀತೆ, 4.30ರಿಂದ 5.30ರವರೆಗೆ ವೀಣಾ ವಾರುಣಿ ತಂಡದ ವತಿಯಿಂದ ಚಲನಚಿತ್ರ ಗೀತೆ, ಸಂಜೆ 6ರಿಂದ 6.45ರ ತನಕ Banglore string ensemble ವತಿಯಿಂದ ಸಂಗೀತ ಸಂಜೆ, 7.15ರಿಂದ 8.30ರ ತನಕ ಅಪ್ಪುಗೆ ಮಜಾ ಟಾಕೀಸ್‌ನ ರೆಮೋ ತಂಡದ ವತಿಯಿಂದ ಫೀಮೇಲ್ ಬ್ಯಾಂಡ್ ಟ್ರಿಬ್ಯುಟ್, ರಾತ್ರಿ 9ರಿಂದ 12ರ ತನಕ ಸಾಧುಕೋಕಿಲ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಈಗಾಗಲೇ ಪ್ರಕೃತಿಯ ಮಡಿಲಲ್ಲಿ ಅಪ್ಪು ಎಂಬ ಥೀಮ್‌ನಡಿಯಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಹಾಗೂ ರಕ್ತದಾನ ಶಿಬಿರವನ್ನು ಕೂಡ ಆಯೋಜನೆ ಮಾಡಲಾಗಿದೆ. ಲಕ್ಷಾಂತರ ಮಂದಿ ಅಭಿಮಾನಿಗಳು ಸಮಾಧಿ ಬಳಿ ಆಗಮಿಸುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಬಳಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.

ಇದನ್ನೂ ಓದಿ | Puneeth Parva | ಕಾಣದಂತೆ ಮಾಯವಾದನು ಹಾಡು, ಅಪ್ಪು ವಿನಮ್ರತೆ ತುಂಬ ಇಷ್ಟ, ಇನ್ಫಿ ಸುಧಾಮೂರ್ತಿ ಸ್ಮರಣೆ

Exit mobile version