Site icon Vistara News

Bairagee Movie | ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಹ್ಯಾಟ್ರಿಕ್‌ ಹೀರೋ: ರಾರಾಜಿಸುತ್ತಿದೆ ಶಿವಣ್ಣನ ಕಟೌಟ್‌

Bairagi Movie

ಬೆಂಗಳೂರು : ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಹಾಗೂ ಡಾಲಿ ಧನಂಜಯ್‌ ನಟನೆಯ ಬಹುನಿರೀಕ್ಷೆಯ ಸಿನಿಮಾ ಬೈರಾಗಿ (Bairagee Movie) ಶುಕ್ರವಾರ (ಜು.1) ರಾಜ್ಯಾದ್ಯಂತ ಬಿಡುಗಡೆ ಕಂಡಿದೆ. ಅಪ್ಪು ಅಗಲಿದ ನಂತರ ಶಿವಣ್ಣನ ಮೊದಲ ಸಿನಿಮಾ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಟ್ಟಿದೆ.

ಶಿವಣ್ಣನ ಕಟೌಟ್‌ಗಳು ಬೆಂಗಳೂರು ಹಾಗೂ ಚಾಮರಾಜನಗರದಲ್ಲಿ ರಾರಾಜಿಸುತ್ತಿದ್ದು, ಚಾಮರಾಜನಗರ ಭ್ರಮರಾಂಬ ಥಿಯೇಟರ್‌ನಲ್ಲಿ ಬೆಳಗ್ಗೆ 7 ಗಂಟೆಗೆ ಫ್ಯಾನ್ಸ್‌ ಶೋ ಶುರುವಾಗಿದೆ. ಇನ್ನೂ ವಿಶೇಷ ಅಂದರೆ ತ್ರಿವೇಣಿ, ಶ್ರೀನಿವಾಸ ಗೌಡನ ಪಾಳ್ಯ, ವಿರೇಶ್‌ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ | Vedha Movie | ಹ್ಯಾಟ್ರಿಕ್‌ ಹೀರೊ 125ನೇ ಚಿತ್ರದ ಮೋಷನ್‌ ಪೋಸ್ಟರ್‌ ರಿವೀಲ್‌

ಮೈಸೂರಿನ ಮಾಲ್‌ ಆಫ್‌ ಮೈಸೂರು ಮಾಲ್‌ನಲ್ಲಿ ಸಂಜೆ 7:05ಕ್ಕೆ ಶಿವಣ್ಣ ಸಿನಿಮಾ ನೋಡಲಿದ್ದಾರೆ. ಟಗರು ನಂತರ ಶಿವಣ್ಣ – ಡಾಲಿ ಧನಂಜಯ್‌ ಕಾಂಬಿನೇಷನ್‌ನಲ್ಲಿ ಬೈರಾಗಿ ಬರುತ್ತಿರುವುದರಿಂದ ಅಭಿಮಾನಿಗಳು ಖುಷಿ ಆಗಿದ್ದಾರೆ. 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಾಂಧಿನಗರದ ಪ್ರಮುಖ ಚಿತ್ರಮಂದಿರವಾದ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾಗೆ ಅಬ್ಬರದ ಸ್ವಾಗತ ಸಿಕ್ಕಿದೆ.

ಶುಕ್ರವಾರ (ಜು.1) ಬೆಳಗ್ಗೆಯೇ ಸುಮಾರು 25 ಕೇಂದ್ರಗಳಲ್ಲಿ ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಸಿನಿಮಾದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌, ಅಂಜಲಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇದನ್ನೂ ಓದಿ | Bairagi | 400 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಬೈರಾಗಿ : ಶಿವಣ್ಣ ಫ್ಯಾನ್ಸ್‌ ಫುಲ್‌ ಖುಷ್‌

Exit mobile version