Site icon Vistara News

Best Films of 2022 | ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಭಾರತೀಯ ಚಿತ್ರಗಳು!

Best Films of 2022

ಬೆಂಗಳೂರು : ಭಾರತದಲ್ಲಿ ಅನೇಕ ವೈವಿಧ್ಯಮಯ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿವೆ. ಅದೇ ರೀತಿ ಭಾಷೆ ಯಾವುದೇ ಇರಲಿ, ಚಲನಚಿತ್ರಗಳ ಮೇಲಿನ ಪ್ರೀತಿ ಕೂಡ ಭಾರತೀಯರಲ್ಲಿ ಅಪಾರ. ಇದೀಗ 2022ರಲ್ಲಿ (Best Films of 2022) ಬಿಡುಗಡೆಯಾದ ಅತ್ಯುತ್ತಮ ಭಾರತೀಯ ಚಿತ್ರಗಳ ಹೆಸರು ರಿವೀಲ್‌ ಆಗಿದೆ.

ನ್ನ ಥನ್ ಕೇಸ್ ಕೊಡು (Nna Thaan Case Kodu)
ರತೀಶ್ ಬಾಲಕೃಷ್ಣನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂತೋಷ್ ಟಿ. ಕುರುವಿಲ್ಲ ನಿರ್ಮಿಸಿದ್ದಾರೆ ಮತ್ತು ಕುಂಚಕೋ ಬೋಬನ್ ಪ್ರೊಡಕ್ಷನ್ಸ್ ಮತ್ತು ಉದಯ ಪಿಕ್ಚರ್ಸ್ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಕುಂಚಾಕೊ ಬೋಬನ್ ಮತ್ತು ಗಾಯತ್ರಿ ಶಂಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಾನ್ ವಿನ್ಸೆಂಟ್ ಸಂಗೀತ ಸಂಯೋಜಿಸಿದ್ದಾರೆ. ಭ್ರಷ್ಟಾಚಾರ ಹಾಗೂ ಸಾಮಾನ್ಯ ಜನರು ಜೀವನದಲ್ಲಿ ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಆರ್‌ಆರ್‌ಆರ್‌ (RRR)
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ (RRR Movie) ಸಿನಿಮಾ ಉತ್ತಮ ಕಥಾವಸ್ತು, ಕ್ರೇಜಿ ಆ್ಯಕ್ಷನ್ ಸೀಕ್ವೆನ್ಸ್, ಅತ್ಯುತ್ತಮ ಪಾತ್ರವರ್ಗ ಹೊಂದಿದೆ. ಈ ಚಿತ್ರ ಗೋಲ್ಡನ್‌ ಗ್ಲೋಬ್‌ ಪುರಸ್ಕಾರದಲ್ಲೂ ಈಗಾಗಲೇ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ | IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?

ಗುಡ್ ಬೈ (Goodbye )
ಬಾಲಿವುಡ್ ಬಿಗ್ ಬಿ ಅಮಿತಾಭ್‌ ಬಚ್ಚನ್‌ ಮಗಳಾಗಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ “ಗುಡ್ ಬೈʼ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕುಟುಂಬದ ಬಾಂಧವ್ಯ ಮತ್ತು ತಂದೆ ಮಗಳ ಸಂಬಂಧದ ಕುರಿತು ಇರುವ ಸಿನಿಮಾವಾಗಿದೆ. ಈ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌, ರಶ್ಮಿಕಾ ಮಂದಣ್ಣ, ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ದಿ ಸ್ವಿಮ್ಮರ್ಸ್ (The Swimmers)
ಈ ಸಿನಿಮಾವನ್ನು ಸ್ಯಾಲಿ ಎಲ್ ಹುಸೇನಿ ನಿರ್ದೇಶಿಸಿದ್ದಾರೆ. ಈಜುಗಾರರು ಸಿರಿಯನ್ ನಿರಾಶ್ರಿತರಾದ ಇಬ್ಬರು ಸಹೋದರಿಯರ ಕಥೆ ಇದಾಗಿದ್ದು, ಈ ಚಿತ್ರವು ನಿರಾಶ್ರಿತರ ಸಮಸ್ಯೆಗಳು ಮತ್ತು ಯುದ್ಧಗಳಿಂದಾಗಿ ಜನರಿಗೆ ಉಂಟಾದ ಹಾನಿಯ ಬಗ್ಗೆ ಹೇಳುತ್ತದೆ. ನೆಟ್ ಪ್ಲೆಕ್ಸ್​ನಲ್ಲಿ ಈ ಸಿನಿಮಾ ವೀಕ್ಷಿಸಬಹುದು.

ಗಾರ್ಗಿ (Gargi)
ಪಟ್ಟಿಯಲ್ಲಿರುವ ಮತ್ತೊಂದು ಚಿತ್ರವೆಂದರೆ ಸಾಯಿ ಪಲ್ಲವಿ ಅಭಿನಯದ ಗಾರ್ಗಿ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರವು ಕೋರ್ಟ್ ಕಥಾ ಹಂದರವನ್ನು ಹೊಂದಿದೆ. ಈ ಚಿತ್ರವು ಸೋನಿ ಲೈವ್ ನಲ್ಲಿ ಲಭ್ಯವಿದೆ. ಕೋರ್ಟ್‌ ರೂಮ್‌ ಡ್ರಾಮಾ ಮತ್ತು ಅಪ್ಪ ಮಗಳ ಬಾಂಧವ್ಯ ಕುರಿತಾಗಿ ಇರುವ ಸಿನಿಮಾ ಇದಾಗಿದೆ. ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋವಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. ಸಾಯಿ ಪಲ್ಲವಿ ಜತೆಗೆ ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

ರೋಷಕ್(Rorschach)
ಈ ಪಟ್ಟಿಯಲ್ಲಿರುವ ಮಲಯಾಳಂ ಚಿತ್ರ ಮಮ್ಮುಟ್ಟಿ ಅಭಿನಯದ ರೋಷಕ್. ನಿಜಾಮ್ ಬಶೀರ್ ನಿರ್ದೇಶನದ ಈ ಚಿತ್ರವನ್ನು ಈ ವರ್ಷದ ಬೆಸ್ಟ್ ಕಾಮಿಡಿ ಸಿನಿಮಾ ಎಂದೇ ಹೇಳಬಹುದು. ಈ ಸಿನಿಮಾ ಸಸ್ಪೆನ್ಸ್, ಎಮೋಷನಲ್ ಒಳಗೊಂಡಿರುವ ಚಿತ್ರವಾಗಿದೆ.

ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi)
ಹುಸೇನ್ ಜೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಈ ಐತಿಹಾಸಿಕ ಚಿತ್ರಕ್ಕೆ ಸ್ಫೂರ್ತಿಯಾಗಿದೆ. ಸ್ತ್ರೀವಾದಿ ದೃಷ್ಟಿಕೋನದಿಂದ ಲೈಂಗಿಕ ಕಾರ್ಯಕರ್ತೆಯರ ರಹಸ್ಯ ಪ್ರಪಂಚದ ಮುಂದೆ ತೆರೆದಿಡುವ ಹಾಗೂ ಲೈಂಗಿಕ ವ್ಯಾಪಾರವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬ ವಿವಾದಗಳಿಗೆ ಇನ್ನಷ್ಟು ಪುಷ್ಟಿ ನೀಡಿದ ಚಿತ್ರ ಇದಾಗಿದೆ.

ಇದನ್ನೂ ಓದಿ | Upcoming Film | ಸೌತ್‌ ಸಿನಿಮಾ ಅಬ್ಬರ; ಈ ವಾರ ತೆರೆಕಾಣಲಿರುವ ಸಿನಿಪಟ್ಟಿ ಇಲ್ಲಿದೆ

Exit mobile version