Site icon Vistara News

Bigg Boss Kannada | ದೊಡ್ಡ ಮನೆಯಲ್ಲಿ ನಂದಿನಿಯನ್ನು ಜಸ್ವಂತ್‌ Ignore ಮಾಡಿದ್ದೇಕೆ?

Bigg Boss Kannada

ಬೆಂಗಳೂರು: ಕಂಡರೂ ಕಾಣದಂತೆ ದೂರವಿದ್ದು Ignore ಮಾಡಿದ್ದಕ್ಕೆ ಜಸ್ವಂತ್‌ ಬೋಪಣ್ಣ ಮೇಲೆ ನಂದಿನಿ ಮುನಿಸಿಕೊಂಡಿದ್ದಾರೆ. ಹಿಂದಿ ಭಾಷೆಯ ಖ್ಯಾತ ರಿಯಾಲಿಟಿ ಶೋ ರೋಡಿಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಜಸ್ವಂತ್‌ ಬೋಪಣ್ಣ ಹಾಗೂ ನಂದಿನಿ ಜೋಡಿ, ಈಗ ಕನ್ನಡದ ಬಿಗ್‌ಬಾಸ್‌ ಒಟಿಟಿ (Bigg Boss Kannada) ಶೋನಲ್ಲಿಯೂ ಮೋಡಿ ಮಾಡುತ್ತಿದ್ದಾರೆ.

ನಂದಿನಿ- ಬೋಪಣ್ಣ ಇಬ್ಬರು ಹಳೆಯ ಪರಿಚಿತರೇ ಆಗಿದ್ದು, ಬಿಗ್‌ಬಾಸ್‌ ಮನೆಯಲ್ಲಿ ನಂದಿನಿ ತಮ್ಮ ಬೇಸರವನ್ನು ಹೇಳಿಕೊಂಡಿದ್ದಾರೆ. ಜಸ್ವಂತ್‌ ಕಡೆಗಣಿಸುತ್ತಿರುವುದಕ್ಕೆ ನಂದಿನಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಜಸ್ವಂತ್‌, “ಬೇಜಾರು ಆಗಿದ್ದರೆ ಬಂದು ಮಾತಾಡಬೇಕು ಅಲ್ವಾ” ಎಂದು ಸಮಾಧಾನಪಡಿಸಿದ್ದಾರೆ.

ಗಾರ್ಡನಿಂಗ್‌ನಲ್ಲಿ ಕುಳಿತಕೊಂಡಾಗ ಈ ಜೋಡಿ ಮಧ್ಯೆ ಈ ಮಾತುಗಳು ಬಂದಿವೆ. ಆ ವೇಳೆ ನಂದಿನಿ, “ಏನೇ ಆದರೂ ನೀನು ನನ್ನ ಜತೆಗೆ ಇರುತ್ತೀಯಾ ಅಲ್ವಾ.” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಂದಿನಿ ಕೈ ಹಿಡಿದ ಜಸ್ವಂತ್‌ ಪ್ರೀತಿಯ ಮುತ್ತು ಕೊಟ್ಟು ಅಪ್ಪಿಕೊಂಡು ಸಂತೈಸಿದ್ದಾರೆ. ಎದುರಿಗೆ ಸಿಕ್ಕಾಗ, ನೋಡಿದಾಗ ಮಾತಾಡಿಸೋಕೆ ಏನು ಕಷ್ಟ? ಎಂದು ಕೂಡ ನಂದಿನಿ ಪ್ರಶ್ನೆ ಮಾಡಿದ್ದು, ಅದಕ್ಕೆ ಜಸ್ವಂತ್‌ ಹಾಗೆ ಮಾಡುವುದಿಲ್ಲ ಎಂದು ಸಂತೈಸಿದ್ದಾರೆ.

ಇದನ್ನೂ ಓದಿ | Bigg Boss Kannada | ಕಾಲೇಜಲ್ಲಿ ಹುಡುಗಿಗೆ ಲವ್‌ ಲೆಟರ್‌ ಕೊಟ್ಟಿದ್ರು ರಾಕೇಶ್‌ ಅಡಿಗ! ಹುಡುಗಿ ಏನಾದ್ಲು?

Exit mobile version