ಬೆಂಗಳೂರು: ಬಿಗ್ ಬಾಸ್ ಒಟಿಟಿ-2 (Bigg Boss OTT 2) ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ (Reality Show) ಸ್ಪರ್ಧಿಗಳು ಒಬ್ಬರಿಗೊಬ್ಬರು ಚುಂಬಿಸಿಕೊಳ್ಳುವುದು ಕಾಮನ್. ಆದರೆ, ಪ್ರಸಕ್ತ ನಡೆಯುತ್ತಿರುವ ಬಿಗ್ ಬಾಸ್ ಒಟಿಟಿ ಶೋನಲ್ಲಿ ನಡೆಸಲಾದ ಟಾಸ್ಕ್ ವೇಳೆ ಸ್ಪರ್ಧಿಗಳಿಬ್ಬರು ಪರಸ್ಪರ ಬರೋಬ್ಬರಿ 30 ಸೆಕೆಂಡ್ ಕಾಲ ಕಿಸ್ (Liplock Kiss) ಮಾಡಿದ ವಿಡಿಯೊ ಸಖತ್ ವೈರಲ್ ಆಗಿತ್ತು. ಬಿಗ್ ಬಾಸ್ ಒಟಿಟಿ 2 ಸೀಸನ್‌ನಲ್ಲಿ ಸ್ಪರ್ಧಿಗಳಾಗಿರುವ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಅವರು ಟಾಸ್ಕ್ ವೇಳೆ ಪರಸ್ಪರ ಕಿಸ್ಸಿಂಗ್ ಮಾಡಿದ್ದರು. ಚುಂಬನದ ಬಳಿಕ, ಇಬ್ಬರೂ ಸ್ಪರ್ಧಿಗಳು ಏನಾಯಿತು ಎಂಬುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸ್ಪರ್ಧಿ ಅವಿನಾಶ್ ಸಚ್‌ದೇವ್ ಅವರು, ‘ನಾನು ಜಡ್ ಹಡಿದ್ ಅವರು ಆಕಾಂಕ್ಷಾ ಪುರಿಗೆ ಕಿಸ್ ಮಾಡಬೇಕು ಎಂದು ಬಯಸುತ್ತೇನೆ’ ಎಂದು ಹೇಳಿದರು. ಒಂದು ಕ್ಷಣವೂ ಯೋಚಿಸದೆ, ಜಡ್ ಮತ್ತು ಆಕಾಂಕ್ಷಾ ಲಿಪ್ ಕಿಸ್ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 30 ಸೆಕೆಂಡ್‌ಗಳ ಕಾಲ ಈ ಜೋಡಿ ಕಿಸ್ ಮಾಡಿದೆ. ಇದಾದ ಬಳಿಕ ಆಕಾಂಕ್ಷಾ ಪುರಿ ಮಾತನಾಡಿ ʻʻಭಾರತೀಯ ಮಹಿಳಾ ಕಲಾವಿದೆಯಾಗಿ, ಕಿಸ್ ನನಗೆ ವಿಚಿತ್ರವಾದ ಭಾವನೆಯನ್ನು ಉಂಟುಮಾಡಿದೆ ಎಂದು ಜಡ್ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಜಡ್ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬಂದು ನನ್ನೊಂದಿಗೆ ಮಾತನಾಡುತ್ತಾನೆ ಎಂದು ನಾನು ನಿರೀಕ್ಷಿಸಿದ್ದೆ. ಇಲ್ಲಿ ಸಂವಹನವು ಮುಖ್ಯವಾಗಿತ್ತುʼʼ ಎಂದರು.
ಟಾಸ್ಕ್‌ಗಾಗಿ ಕಿಸ್ ನೆನಪಿಸಿಕೊಂಡ ಜಡ್ ಹಡಿದ್, “ನಾನು ಆಕಾಂಕ್ಷಾ ಪುರಿ ಅವರನ್ನು ಚುಂಬಿಸುವಾಗ ಅವರು ನಡುಗುತ್ತಿದ್ದರು. ಪರಸ್ಪರ ಪ್ರತಿಕ್ರಿಯಿಸುತ್ತಿರಲಿಲ್ಲʼʼ ಎಂದು ಹೇಳಿಕೊಂಡಿದ್ದಾರೆ. ʻʻಅವರು ನನ್ನನ್ನು ಹತ್ತಿರ ಬರುವಂತೆ ಸನ್ನೆ ಮೂಲಕ ಕೇಳುತ್ತಿದ್ದರು. ನನಗೆ ಇನ್ನೂ ಬೇಕು ಎಂಬರ್ಥದಲ್ಲಿ. ಆದರೆ ಆಗಲೇ ನಾನು ಆಸಕ್ತಿ ಕಳೆದುಕೊಂಡೆʼʼ ಎಂದಿದ್ದಾರೆ. ಆಕಾಂಕ್ಷಾ ಬ್ಯಾಡ್ ಕಿಸ್ಸರ್ ಎಂದು ಜಡ್ ಸ್ಪರ್ಧಿ ಅವಿನಾಶ್ ಸಚ್‌ದೇವ್ ಮುಂದೆ ಹೇಳಿದರು.
ಪ್ರಸಕ್ತ ಸೀಸನ್ ಆರಂಭವಾದಾಗಿನಿಂದಲೂ ಜಡ್ ಹದಿದ್ ಅವರು ಮತ್ತೊಬ್ಬ ಸ್ಪರ್ಧಿ ಆಕಾಂಕ್ಷಾ ಪುರಿ ಅವರ ಮೇಲೆ ಆಕರ್ಷಣೆ ಬೆಳೆಸಿಕೊಂಡಿರುವುದು ನೋಡುಗರ ಗಮನಕ್ಕೆ ಬಂದಿತ್ತು. ಈಗ ಟಾಸ್ಕ್ ವೇಳೆ, ಅವರಿಬ್ಬರೂ ಪರಸ್ಪರ ಕಿಸ್ಸಿಂಗ್ ಮಾಡಿರುವುದು, ಅವರಿಬ್ಬರ ನಡುವಿನ ಸಂಬಂಧಕ್ಕೆ ಮುದ್ರೆ ಬಿದ್ದಂತಾಗಿದೆ ಎಂದು ನೋಡುಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಕಿಸ್ಸಿಂಗ್ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.
ಜಡ್ ಹದಿದ್, ಆಕಾಂಕ್ಷಾ ಪುರಿ ಜತೆಗೆ ಪಾಲಕ್ ತಿವಾರಿ, ಜನ್ನತ್ ಜುಬೇರ್ ರೆಹಮಾನಿ, ಸುರಭಿ ಜ್ಯೋತಿ, ಅಂಜಲಿ ಅರೋರಾ, ಅಲಿಯಾ ಸಿದ್ದಿಕಿ ಸೇರಿ 12 ಸ್ಪರ್ಧಿಗಳು ಬಿಗ್ ಬಾಸ್ ಒಟಿಟಿ – 2ರಲ್ಲಿದ್ದಾರೆ. ಈ ರಿಯಾಲಿಟಿ ಶೋ ಜಿಯೋ ಸಿನಿಮಾ ಆ್ಯಪ್‌ನಲ್ಲಿ ಪ್ರಸಾರವಾಗುತ್ತಿದೆ.