Site icon Vistara News

Bigg Boss Tamil 7: ಶುರುವಾಯ್ತು ತಮಿಳು ಬಿಗ್‌ ಬಾಸ್‌; ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಔಟ್‌!

Bigg Boss Tamil 7 Meet confirmed contestants

ಈಗಾಗಲೇ ಕನ್ನಡ ಬಿಗ್‌ ಬಾಸ್‌ ಪ್ರಸಾರದ ದಿನಾಂಕವನ್ನು ವಾಹಿನಿ ರಿವೀಲ್‌ ಮಾಡಿದೆ. ಹಿಂದಿ ಬಿಗ್​ಬಾಸ್ ಟಿವಿ ಆವೃತ್ತಿಯ (Bigg Boss 17) ಹೊಸ ಸೀಸನ್ ಘೋಷಣೆ ಮಾಡಲಾಗಿದೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು.ಇದೀಗ ಬಿಗ್ ಬಾಸ್ ತಮಿಳು (Bigg Boss Tamil 7) ಏಳನೇ ಆವೃತ್ತಿಯು ಅಕ್ಟೋಬರ್ 1 ರಂದು ಶುರುವಾಗಿದೆ. ಕಾರ್ಯಕ್ರಮದ ತಮಿಳು ಆವೃತ್ತಿಯನ್ನು ಕಮಲ್ ಹಾಸನ್ ಅವರು ಹೋಸ್ಟ್ ಮಾಡಿದ್ದಾರೆ. ಅವರು ಮೊದಲ ಸೀಸನ್‌ನಿಂದ ಕಾರ್ಯಕ್ರಮದ ಭಾಗವಾಗಿದ್ದಾರೆ. ತಮಿಳು ಸೀಸನ್‌ ಅಲ್ಲಿ ಈ ಬಾರಿಯ ಸ್ಪರ್ಧಿಗಳ ಲಿಸ್ಟ್‌ ಇಲ್ಲಿದೆ.

ಕೂಲ್ ಸುರೇಶ್

ಕೂಲ್ ಸುರೇಶ್ ತಮಿಳು ನಟ ಮತ್ತು ಹಾಸ್ಯನಟ, ʻಪಡಿತಾವುದನ್ ಕಿಳಿತು ವಿಡವುಮ್ʼ ಮತ್ತು ʻಚಿತಿರಮೆ ಸೊಲ್ಲಡಿʼ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕಾಖ ಕಾಖ(Kaakha Kaakha) ಮತ್ತು ತಿರುಡಾ ತಿರುಡಿ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀಸನ್‌ ಫಸ್ಟ್‌ ಕ್ಯಾಪ್ಟನ್‌ ಆಗಿ ಆಯ್ಕೆಯಾದರು.

ಇದನ್ನೂ ಓದಿ: Dhanush Movies: ಇನ್ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಲ್ಲ ಎಂದ ನಟ ಧನುಷ್‌!

ಪೂರ್ಣಿಮಾ ರವಿ

ನಟಿ ಪೂರ್ಣಿಮಾ ರವಿ ಅವರು ನಯನತಾರಾ ಅವರ ಮುಂಬರುವ 75 ನೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಹೊಸ ಆರಂಭ ಮತ್ತು ನನ್ನ ವೃತ್ತಿಜೀವನದಲ್ಲಿ ಮಹತ್ವದ ತಿರುವು ಎಂದರು.

ರವೀನಾ ದಾಹಾ

ವಿಷ್ಣು ವಿಶಾಲ್ ಮತ್ತು ಅಮಲಾ ಪೌಲ್ ಅಭಿನಯದ ʻರಾತ್ಸಾಸನ್ʼ ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ ರವೀನಾ ದಹಾ. ಪಿಜ್ಜಾ 3, ಎನಿಮಿ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೋಪ್ ಮೌನ ರಾಗಂ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರದೀಪ್ ಆಂಟೋನಿ

ಪ್ರದೀಪ್ ಆಂಟೋನಿ; ʻಅರುವಿ, ದಾದಾ ಮತ್ತು ವಾಹ್ಲ್ʼ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ತಮಿಳಿನ ಬಿಗ್ ಬಾಸ್ ಮೂರನೇ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು.

ರ‍್ಯಾಪರ್‌ ನಿಕ್ಸೆನ್

ರ‍್ಯಾಪರ್‌ ನಿಕ್ಸೆನ್, ಗೀತರಚನೆಕಾರ, ಮತ್ತು ಪ್ರದರ್ಶಕ. 2018 ರ ಚಿತ್ರ ತಿಮಿರು ಪುಡಿಚವನ್‌ನಲ್ಲಿ ವಿಜಯ್ ಆಂಟೋನಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಮುಗೆನ್ ರಾವ್ ಅವರ ಆಲ್ಬಂನಲ್ಲಿ ನಿಕ್ಸೆನ್ ಕಾಣಿಸಿಕೊಂಡಿದ್ದಾರೆ.

ವಿನುಷಾ ದೇವಿ

ವಿನುಷಾ ದೇವಿ ಅವರು ತಮಿಳು ಭಾರತಿ ಕಣ್ಣಮ್ಮ ಧಾರಾವಾಹಿ ಮೂಲಕ ಹೆಸರುವಾಸಿಯಾಗಿದ್ದಾರೆ.

ಮಣಿ ಚಂದ್ರ

ಮಣಿ ಚಂದ್ರ ಅವರು ಡ್ಯಾನ್ಸರ್‌, ಜೋಡಿ ನಂ. 1 ಮೂಲಕ ಹೆಸರುವಾಸಿಯಾಗಿದ್ದಾರೆ. ಜತೆಗೆ ಕಿಂಗ್ಸ್ ಆಫ್ ಡ್ಯಾನ್ಸ್, ಮತ್ತು ಮಾನದ ಮಾಯಿಲಾದ ಶೋನಲ್ಲಿ ಸೆಮಿಫೈನಲಿಸ್ಟ್ ಆಗಿದ್ದಾರೆ.


ಅಕ್ಷಯ ಉದಯಕುಮಾರ್

ಅಕ್ಷಯ ಅವರು ಡ್ಯಾನ್ಸರ್‌. ತಮಿಳು ಚಿತ್ರ ಲವ್ ಟುಡೇ ಮತ್ತು ಮಲಯಾಳಂ ಚಿತ್ರ ಸಿದ್ದಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೋವಿಕಾ ವಿಜಯಕುಮಾರ್

ಜೋವಿಕಾ ವಿಜಯಕುಮಾರ್ ನಟಿ ವನಿತಾ ವಿಜಯಕುಮಾರ್ ಅವರ ಪುತ್ರಿ. ಯೂಟ್ಯೂಬರ್ ಹಾಗೂ ತಾಯಿಯ ಅಡುಗೆ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡರು.

ಐಶು ಎಡಿಎಸ್

ಐಶು ಎಡಿಎಸ್ ಡ್ಯಾನ್ಸ್ ವಿಸ್ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಸಹೋದರ ಆಮಿರ್ ಎಡಿಎಸ್ ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿದ್ದರು.

ವಿಷ್ಣು ವಿಜಯ್

ತಮಿಳಿನ ಬಿಗ್ ಬಾಸ್ ಏಳನೇ ಸೀಸನ್‌ನಲ್ಲಿ ನಟ ವಿಷ್ಣು ವಿಜಯ್ ಸ್ಪರ್ಧಿಯಾಗಿದ್ದಾರೆ. ಸೋಪ್ ಒಪೆರಾ, ಆಫೀಸ್, ಸತ್ಯ 1 ಮತ್ತು 2ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಮಾಯಾ ಕೃಷ್ಣನ್

ಮಾಯಾ ಕೃಷ್ಣನ್ 2022ರ ಕಮಲ್ ಹಾಸನ್ ಚಿತ್ರ ವಿಕ್ರಂನಲ್ಲಿನ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರು ಬಹು ನಿರೀಕ್ಷಿತ ಚಿತ್ರ ಧ್ರುವ ನಚ್ಚತಿರಂನ ಭಾಗವಾಗಿದ್ದಾರೆ ಮತ್ತು ಮುಂಬರುವ ಚಿತ್ರ ಲಿಯೋದಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಸರವಣನ್ ನಟ ಮತ್ತು ಯೂಟ್ಯೂಬರ್ ಆಗಿದ್ದು, ಪಾಂಡಿಯನ್ ಸ್ಟೋರ್ಸ್ ಶೋನಲ್ಲಿನ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಯುಗೇಂದ್ರನ್ ವಾಸುದೇವನ್ ಗಾಯಕ ಮತ್ತು ನಟ. ಯುಗೇಂದ್ರನ್ ವಾಸುದೇವನ್, ಯುದ್ಧ ಸೇ ಮತ್ತು ರಾಜಾಧಿ ರಾಜ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಐದು ಚಿತ್ರಗಳಿಗೆ ಸಂಗೀತ ಕೂಡ ಮಾಡಿದ್ದಾರೆ.

ವಿಚಿತ್ರಾ

ವಿತ್ ಕೋಮಾಲಿ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿರುವ ನಟಿ ವಿಚಿತ್ರಾ ಅವರು ಬಿಗ್ ಬಾಸ್ ತಮಿಳು ಸೀಸನ್ ಏಳರಲ್ಲಿ ಮುಂದಿನ ಸ್ಪರ್ಧಿಯಾಗಿದ್ದಾರೆ. ಸುಯಂವರಂ, ಮುಂತಾದ ಚಿತ್ರಗಳಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಬಾವ ಚೆಲ್ಲದೊರೈ

ಬರಹಗಾರ, ನಟ ಮತ್ತು ಕಥೆಗಾರ. ಅವರು ಜೋಕರ್, ಸೈಕೋ, ಜೈ ಭೀಮ್, ಮಾಣಿ ಮತ್ತು ಹೆಚ್ಚಿನ ಚಿತ್ರಗಳ ಭಾಗವಾಗಿದ್ದಾರೆ.

Exit mobile version