Site icon Vistara News

Akshay Kumar: ಅಕ್ಷಯ್ ಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ?

Akshay Kumar

ಮುಂಬೈ: ಸಾಧನೆಯ ಹಾದಿ ಯಾವತ್ತೂ ಸುಲಭವಾಗಿರುವುದಿಲ್ಲ. ಇವತ್ತಿನ ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳು (super star) ಒಂದು ಕಾಲದಲ್ಲಿ ಬೀದಿ ಬದಿ ಮಲಗುತ್ತಿದ್ದರು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಸಿಕ್ಕಿದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಜೀವನ ನಿರ್ವಹಿಸುತ್ತಿದ್ದರು. ಆದರೆ ಈ ಎಲ್ಲ ಕಷ್ಟ, ಅನುಭವವೇ ಅವರನ್ನು ಇಂದು ಸೂಪರ್ ಸ್ಟಾರ್‌ಗಳನ್ನಾಗಿ ಮಾಡಿದೆ. ಇವರಲ್ಲಿ ಬಾಲಿವುಡ್ (bollywood) ಕಿಲಾಡಿ (khiladi), ಆ್ಯಕ್ಷನ್‌ ಕಿಂಗ್ (Action King) ಅಕ್ಷಯ್ ಕುಮಾರ್ (Akshay Kumar) ಕೂಡ ಒಬ್ಬರು.

ಇವತ್ತು ಬಾಲಿವುಡ್‌ನ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್ ಒಂದು ಕಾಲದಲ್ಲಿ 150 ರೂಪಾಯಿ ಸಂಭಾವನೆಯ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಕೇವಲ ಹದಿನೈದು ವರ್ಷ. ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಹುಡುಗನಾಗಿ ಸೇರಿಕೊಂಡಿದ್ದ ಅವರಿಗೆ ವಿಶ್ರಾಂತಿ ಎಂಬುದೇ ಇರಲಿಲ್ಲ. ಆಗ ಆ ಕೆಲಸದಿಂದ 150 ರೂಪಾಯಿ ಸಂಭಾವನೆ ಗಳಿಸಿದ್ದೆ. ಬಳಿಕ ಉತ್ತಮ ಅವಕಾಶಗಳಿಗಾಗಿ ಢಾಕಾ (dhaka) ಮತ್ತು ಬ್ಯಾಂಕಾಕ್‌ ಗೂ (Bangkok) ತೆರಳಿದ್ದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ರಿಲೀಸ್‌ ಡೇಟ್‌ ಅನೌನ್ಸ್‌!

ಎಲ್ಲಿ ಮೊದಲ ಉದ್ಯೋಗ ?

ಕಲ್ಕತ್ತಾದ ಟ್ರಾವೆಲ್ ಏಜೆನ್ಸಿಯಲ್ಲಿ ನಾನು ಕೆಲಸ ಮಾಡಿ ಮೊದಲ ಸಂಭಾವನೆಯನ್ನು ಪಡೆದಿದ್ದೇನೆ. ಆಗ ನನ್ನ ಸಂಬಳ 150 ರಿಂದ 200 ರೂ. ನಡುವೆ ಇತ್ತು. ಅದು 1984ರಲ್ಲಿ. ಆಗ ನನಗೆ ಸುಮಾರು 15-16 ವರ್ಷ ಆಗಿರಬಹುದು ಎಂದು ಅವರು ಹೇಳಿದ್ದಾರೆ.


ಸಣ್ಣ ವಯಸ್ಸಿಗೆ ಉದ್ಯೋಗಕ್ಕೆ ಸೇರಿಕೊಂಡಿದ್ದು ಯಾಕೆ ?

ಒಬ್ಬ ವ್ಯಕ್ತಿಯು ಶಿಕ್ಷಣವನ್ನು ಪಡೆಯದೆ ಇದ್ದಾಗ ಇದ್ದಾಗ ಅವನು ಖಂಡಿತವಾಗಿಯೂ ದುಡಿಯಲು ಹೊರಡುತ್ತಾನೆ. ಕಷ್ಟಪಟ್ಟು ಶ್ರಮಿಸುತ್ತಾನೆ ಮತ್ತು ಏನನ್ನಾದರೂ ಸಾಧನೆ ಮಾಡುತ್ತಾನೆ. ನನಗೆ ಮೊದಲು ಸಿಕ್ಕಿದ್ದು ಇದೊಂದೇ ಕೆಲಸ ಎಂದಿದ್ದಾರೆ ಅಕ್ಷಯ್.

ಹೊಟೇಲ್ ಕೆಲಸ, ಆಭರಣ ಮಾರಾಟ

ಬಳಿಕ ಢಾಕಾಗೆ ಹೋಗಿದ್ದೆ. ಅಲ್ಲಿ ಒಂದು ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ. ಆನಂತರ ಬ್ಯಾಂಕಾಕ್ ಗೂ ಹೋಗಿದ್ದೆ. ಬಳಿಕ ದೆಹಲಿಗೆ ಬಂದೆ. ದೆಹಲಿ, ಮುಂಬಯಿಯಲ್ಲಿ ಕೃತಕ ಆಭರಣಗಳನ್ನು ಮಾರಾಟ ಮಾಡುತ್ತಿದ್ದೆ. 20 ಸಾವಿರಕ್ಕೆ ಚಿನ್ನಾಭರಣ ಖರೀದಿ ಮಾಡಿ 24 ಸಾವಿರಕ್ಕೆ ಮಾರುತ್ತಿದ್ದೆ ಎಂದು ತಿಳಿಸಿದ್ದಾರೆ.

ಅದೃಷ್ಟ ಬದಲಾಯಿಸಿದ ನಟರಾಜ್ ಸ್ಟುಡಿಯೋ ಭೇಟಿ

ನಟರಾಜ್ ಸ್ಟುಡಿಯೋಗೆ ಭೇಟಿ ನೀಡಿದ ಮೇಲೆ ತಮ್ಮ ಅದೃಷ್ಟ ಬದಲಾಯಿತು ಎಂದು ಹೇಳುವ ಅಕ್ಷಯ್, ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿ ಮೇಕಪ್ ಕಲಾವಿದರೊಬ್ಬರು ಅವರನ್ನು ಸಂಪರ್ಕಿಸಿದರು. ಅವರೇ ಹೀರೊ ಆಗುವ ಅವಕಾಶವನ್ನು ನೀಡಿದರು. ಅಕ್ಷಯ್ ಆ ಬಳಿಕ ಮೊದಲ ಮೂರು ಚೆಕ್‌ಗಳನ್ನು ಸ್ವೀಕರಿಸಿದರು. ಮೊದಲ ಚಿತ್ರಕ್ಕೆ 5000, ಎರಡನೆಯದಕ್ಕೆ 50,000 ಮತ್ತು ಮೂರನೆಯದಕ್ಕೆ 1.5 ಲಕ್ಷ ರೂಪಾಯಿಗಳಾಗಿತ್ತು.

ದೆಹಲಿಯಲ್ಲಿ ಹರಿ ಓಂ ಭಾಟಿಯಾ ಮತ್ತು ಅರುಣಾ ಭಾಟಿಯಾ ದಂಪತಿಯ ಮಗನಾಗಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ್ದ ಅಕ್ಷಯ್ ಸೇನಾಧಿಕಾರಿಯಾಗಿದ್ದರು. ಹೀಗಾಗಿ ಅಕ್ಷಯ್ ಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ದೆಹಲಿಯ ಚಾಂದಿನಿ ಚೌಕ್‌ನಲ್ಲಿ ವಾಸವಾಗಿದ್ದ ಅವರು ಬಳಿಕ ಮುಂಬೈಗೆ ತೆರಳಿದರು. 1991ರಲ್ಲಿ ತೆರೆಕಂಡ ಸೌಗಂಧ್ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

Exit mobile version