Akshay Kumar: ಅಕ್ಷಯ್ ಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ? - Vistara News

ಬಾಲಿವುಡ್

Akshay Kumar: ಅಕ್ಷಯ್ ಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ?

Akshay Kumar: ಇವತ್ತು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರ ಮೊದಲ ಸಂಬಳ ಎಷ್ಟು ಗೊತ್ತೇ, ಅವರು ಯಾವ ವಯಸ್ಸಿನಲ್ಲಿ ಕೆಲಸ ಪ್ರಾರಂಭಿಸಿದರು, ಎಲ್ಲಿ ಕೆಲಸ ಮಾಡಿದ್ದರು ಗೊತ್ತೇ?

VISTARANEWS.COM


on

Akshay Kumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಸಾಧನೆಯ ಹಾದಿ ಯಾವತ್ತೂ ಸುಲಭವಾಗಿರುವುದಿಲ್ಲ. ಇವತ್ತಿನ ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳು (super star) ಒಂದು ಕಾಲದಲ್ಲಿ ಬೀದಿ ಬದಿ ಮಲಗುತ್ತಿದ್ದರು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಸಿಕ್ಕಿದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಜೀವನ ನಿರ್ವಹಿಸುತ್ತಿದ್ದರು. ಆದರೆ ಈ ಎಲ್ಲ ಕಷ್ಟ, ಅನುಭವವೇ ಅವರನ್ನು ಇಂದು ಸೂಪರ್ ಸ್ಟಾರ್‌ಗಳನ್ನಾಗಿ ಮಾಡಿದೆ. ಇವರಲ್ಲಿ ಬಾಲಿವುಡ್ (bollywood) ಕಿಲಾಡಿ (khiladi), ಆ್ಯಕ್ಷನ್‌ ಕಿಂಗ್ (Action King) ಅಕ್ಷಯ್ ಕುಮಾರ್ (Akshay Kumar) ಕೂಡ ಒಬ್ಬರು.

ಇವತ್ತು ಬಾಲಿವುಡ್‌ನ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್ ಒಂದು ಕಾಲದಲ್ಲಿ 150 ರೂಪಾಯಿ ಸಂಭಾವನೆಯ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಕೇವಲ ಹದಿನೈದು ವರ್ಷ. ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಹುಡುಗನಾಗಿ ಸೇರಿಕೊಂಡಿದ್ದ ಅವರಿಗೆ ವಿಶ್ರಾಂತಿ ಎಂಬುದೇ ಇರಲಿಲ್ಲ. ಆಗ ಆ ಕೆಲಸದಿಂದ 150 ರೂಪಾಯಿ ಸಂಭಾವನೆ ಗಳಿಸಿದ್ದೆ. ಬಳಿಕ ಉತ್ತಮ ಅವಕಾಶಗಳಿಗಾಗಿ ಢಾಕಾ (dhaka) ಮತ್ತು ಬ್ಯಾಂಕಾಕ್‌ ಗೂ (Bangkok) ತೆರಳಿದ್ದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ರಿಲೀಸ್‌ ಡೇಟ್‌ ಅನೌನ್ಸ್‌!

ಎಲ್ಲಿ ಮೊದಲ ಉದ್ಯೋಗ ?

ಕಲ್ಕತ್ತಾದ ಟ್ರಾವೆಲ್ ಏಜೆನ್ಸಿಯಲ್ಲಿ ನಾನು ಕೆಲಸ ಮಾಡಿ ಮೊದಲ ಸಂಭಾವನೆಯನ್ನು ಪಡೆದಿದ್ದೇನೆ. ಆಗ ನನ್ನ ಸಂಬಳ 150 ರಿಂದ 200 ರೂ. ನಡುವೆ ಇತ್ತು. ಅದು 1984ರಲ್ಲಿ. ಆಗ ನನಗೆ ಸುಮಾರು 15-16 ವರ್ಷ ಆಗಿರಬಹುದು ಎಂದು ಅವರು ಹೇಳಿದ್ದಾರೆ.


ಸಣ್ಣ ವಯಸ್ಸಿಗೆ ಉದ್ಯೋಗಕ್ಕೆ ಸೇರಿಕೊಂಡಿದ್ದು ಯಾಕೆ ?

ಒಬ್ಬ ವ್ಯಕ್ತಿಯು ಶಿಕ್ಷಣವನ್ನು ಪಡೆಯದೆ ಇದ್ದಾಗ ಇದ್ದಾಗ ಅವನು ಖಂಡಿತವಾಗಿಯೂ ದುಡಿಯಲು ಹೊರಡುತ್ತಾನೆ. ಕಷ್ಟಪಟ್ಟು ಶ್ರಮಿಸುತ್ತಾನೆ ಮತ್ತು ಏನನ್ನಾದರೂ ಸಾಧನೆ ಮಾಡುತ್ತಾನೆ. ನನಗೆ ಮೊದಲು ಸಿಕ್ಕಿದ್ದು ಇದೊಂದೇ ಕೆಲಸ ಎಂದಿದ್ದಾರೆ ಅಕ್ಷಯ್.

ಹೊಟೇಲ್ ಕೆಲಸ, ಆಭರಣ ಮಾರಾಟ

ಬಳಿಕ ಢಾಕಾಗೆ ಹೋಗಿದ್ದೆ. ಅಲ್ಲಿ ಒಂದು ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ. ಆನಂತರ ಬ್ಯಾಂಕಾಕ್ ಗೂ ಹೋಗಿದ್ದೆ. ಬಳಿಕ ದೆಹಲಿಗೆ ಬಂದೆ. ದೆಹಲಿ, ಮುಂಬಯಿಯಲ್ಲಿ ಕೃತಕ ಆಭರಣಗಳನ್ನು ಮಾರಾಟ ಮಾಡುತ್ತಿದ್ದೆ. 20 ಸಾವಿರಕ್ಕೆ ಚಿನ್ನಾಭರಣ ಖರೀದಿ ಮಾಡಿ 24 ಸಾವಿರಕ್ಕೆ ಮಾರುತ್ತಿದ್ದೆ ಎಂದು ತಿಳಿಸಿದ್ದಾರೆ.

ಅದೃಷ್ಟ ಬದಲಾಯಿಸಿದ ನಟರಾಜ್ ಸ್ಟುಡಿಯೋ ಭೇಟಿ

ನಟರಾಜ್ ಸ್ಟುಡಿಯೋಗೆ ಭೇಟಿ ನೀಡಿದ ಮೇಲೆ ತಮ್ಮ ಅದೃಷ್ಟ ಬದಲಾಯಿತು ಎಂದು ಹೇಳುವ ಅಕ್ಷಯ್, ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿ ಮೇಕಪ್ ಕಲಾವಿದರೊಬ್ಬರು ಅವರನ್ನು ಸಂಪರ್ಕಿಸಿದರು. ಅವರೇ ಹೀರೊ ಆಗುವ ಅವಕಾಶವನ್ನು ನೀಡಿದರು. ಅಕ್ಷಯ್ ಆ ಬಳಿಕ ಮೊದಲ ಮೂರು ಚೆಕ್‌ಗಳನ್ನು ಸ್ವೀಕರಿಸಿದರು. ಮೊದಲ ಚಿತ್ರಕ್ಕೆ 5000, ಎರಡನೆಯದಕ್ಕೆ 50,000 ಮತ್ತು ಮೂರನೆಯದಕ್ಕೆ 1.5 ಲಕ್ಷ ರೂಪಾಯಿಗಳಾಗಿತ್ತು.

ದೆಹಲಿಯಲ್ಲಿ ಹರಿ ಓಂ ಭಾಟಿಯಾ ಮತ್ತು ಅರುಣಾ ಭಾಟಿಯಾ ದಂಪತಿಯ ಮಗನಾಗಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ್ದ ಅಕ್ಷಯ್ ಸೇನಾಧಿಕಾರಿಯಾಗಿದ್ದರು. ಹೀಗಾಗಿ ಅಕ್ಷಯ್ ಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ದೆಹಲಿಯ ಚಾಂದಿನಿ ಚೌಕ್‌ನಲ್ಲಿ ವಾಸವಾಗಿದ್ದ ಅವರು ಬಳಿಕ ಮುಂಬೈಗೆ ತೆರಳಿದರು. 1991ರಲ್ಲಿ ತೆರೆಕಂಡ ಸೌಗಂಧ್ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Anant Ambani Wedding: ಪಾದ ಸ್ಪರ್ಶಿಸಲು ಬಂದ ರಜನಿಯನ್ನು ಬಿಗಿದಪ್ಪಿಕೊಂಡ ಅಮಿತಾಭ್ ಬಚ್ಚನ್!

Anant Ambani Wedding: ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಸಮಾರಂಭದ ಹಲವು ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ.

VISTARANEWS.COM


on

Anant Ambani Wedding Rajinikanth tries to touch Amitabh Bachchan feet
Koo

ಬೆಂಗಳೂರು: ಹಿರಿಯ ನಟರಾದ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ರಜನಿಕಾಂತ್ (Rajinikanth ) ಶನಿವಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಸಮಾರಂಭದ ಹಲವು ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಅಮಿತಾಭ್‌ ಅವರನ್ನು ಕಂಡೊಡನೆ ರಜನಿಕಾಂತ್‌ ಅವರು, ಬಚ್ಚನ್‌ ಅವರ ಪಾದಗಳಿಗೆ ನಮಸ್ಕರಿಸಲು ಮುಂದಾಗಿದ್ದರು. ಈ ವೇಳೆ ಅಮಿತಾಭ್‌ ಅವರು ಪಾದಗಳನ್ನು ಸ್ಪರ್ಶಿಸಲು ಬಿಡದೆ ಅಪ್ಪಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆದ ಪ್‌ನಲ್ಲಿ, ಇಬ್ಬರೂ ಪರಸ್ಪರ ಶುಭಾಶಯ ಕೋರಿದ್ದಾರೆ. ಅಮಿತಾಭ್ ಕೈ ಚಾಚುತ್ತಿದ್ದಂತೆ, ರಜನಿಕಾಂತ್ ಅವರು, ಬಚ್ಚನ್‌ ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು. ಅಮಿತಾಭ್ ಶೀಘ್ರವಾಗಿ ರಜನಿ ಅವರ ಕೈಗಳನ್ನು ಹಿಡಿದು ಬಳಿಕ ಅಪ್ಪಿಕೊಂಡರು. ಇಬ್ಬರೂ ಪರಸ್ಪರ ಕೈಕುಲುಕಿದರು. ಸ್ವಲ್ಪ ಸಮಯ ಮಾತನಾಡಿದರು. ಈ ಕಾರ್ಯಕ್ರಮಕ್ಕಾಗಿ ಅಮಿತಾಭ್‌ ಅವರು ಬಣ್ಣಬಣ್ಣದ ಶೇರ್ವಾನಿ ಮತ್ತು ಶಾಲು ಧರಿಸಿದ್ದರು. ರಜನಿಕಾಂತ್ ಅವರು ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: IPL 2024 : ಶಾರುಖ್​ ಮಾಲೀಕತ್ವದ ಕೆಕೆಆರ್ ವಿರುದ್ಧ ಎಸ್​ಆರ್​ಎಚ್​ ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಮಿತಾಭ್ ಬಚ್ಚನ್​​

ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಇವರಿಬ್ಬರು ಪ್ರೀತಿ ಮತ್ತು ಗೌರವಕ್ಕೆ ಅರ್ಹರು” ಎಂದು ಕಮೆಂಟ್‌ ಮಾಡಿದ್ದಾರೆ. “ಎಷ್ಟು ವಿನಮ್ರ ಮಹಾನ್ ವ್ಯಕ್ತಿಗಳು” ಎಂದು ಮತ್ತೊಬ್ಬರು ಬರೆದಿದ್ದಾರೆ. ʻತುಂಬಾ ಡೌನ್ ಟು ಅರ್ಥ್” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ನಟ ರಜನಿಕಾಂತ್​ ಅವರು ಕುಟುಂಬ ಸಮೇತರಾಗಿ ಅನಂತ್​ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ (Anant Ambani Wedding) ಡ್ಯಾನ್ಸ್​ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ರಜನಿಕಾಂತ್​ ಅವರ ಡ್ಯಾನ್ಸ್​ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಹಾಲಿವುಡ್​ ಸೆಲೆಬ್ರಿಟಿಗಳು, ಬಾಲಿವುಡ್​ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ.ಜನಿಕಾಂತ್​ ಅವರು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

ಈ ಸೂಪರ್​ ಸ್ಟಾರ್​ಗಳ ಜೊತೆ ಅನಂತ್​ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಮದುವೆಯಲ್ಲಿ ತಾರಾ ಮೆರುಗು ತುಂಬಿದೆ.‘ತಲೈವಾ’ ರಜನಿಕಾಂತ್​ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್​ ಅಂಬಾನಿಯ ಮದುವೆಗೆ ಬಂದಿದ್ದಾರೆ.

ಶುಭ್ ಆಶೀರ್ವಾದ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಜಾನ್ವಿ ಕಪೂರ್, ಐಶ್ವರ್ಯ ರೈ, ರಣಬೀರ್ ಕಪೂರ್, ಆಲಿಯಾ ಭಟ್, ಸಾರಾ ಅಲಿ ಖಾನ್, ಸಂಜಯ್ ದತ್, ಅಜಯ್ ದೇವಗನ್, ಹೇಮಾ ಮಾಲಿನಿ ಕೂಡ ಭಾಗವಹಿಸಿದ್ದರು. ಶನಯಾ ಕಪೂರ್, ದಿಶಾ ಪಟಾನಿ, ಖುಷಿ ಕಪೂರ್, ಸಚಿನ್ ತೆಂಡೂಲ್ಕರ್ ಮತ್ತು ಸಾನಿಯಾ ಮಿರ್ಜಾ ಸೇರಿದಂತೆ ಅತಿಥಿಗಳು ಸಮಾರಂಭಕ್ಕೆ ಆಗಮಿಸಿದ್ದರು. ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ, ವಿಧು ವಿನೋದ್ ಚೋಪ್ರಾ, ವೆಂಕಟೇಶ್ ದಗ್ಗುಬಾಟಿ, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಕೂಡ ಕಾಣಿಸಿಕೊಂಡರು. ವಿದ್ಯಾ ಬಾಲನ್ ಮತ್ತು ದಂಪತಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಸಹ ಹಾಜರಿದ್ದರು.

Continue Reading

ಬಾಲಿವುಡ್

Rohit Sharma: ರೋಹಿತ್ ಶರ್ಮಾ ಮಾಜಿ ಗೆಳತಿ ಮಾಡೆಲ್‌, ನಟಿ ಈಗ ಸನ್ಯಾಸಿನಿ!

Rohit Sharma : ನಟನೆಯಲ್ಲಿ ಆಸಕ್ತಿ ಹೊಂದಿದ್ದ ಆಕೆ ಬ್ರಿಟನ್ ತೊರೆದು ಭಾರತಕ್ಕೆ ಬಂದರು. 2008 ರಲ್ಲಿ, ‘ಕ್ಯಾಶ್ ಮತ್ತು ಕರಿ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಳಿಕ ‘ಸಿಕ್ಸ್ ಎಕ್’ ಹಾಗೂ ‘ಅಕ್ಸರ್- 2’ ಚಿತ್ರಗಳಲ್ಲಿ ನಟಿಸಿದರು. 2013 ರಲ್ಲಿ, FHM ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಆಕೆಯ ಹೆಸರು ಇತ್ತು.

VISTARANEWS.COM


on

Rohit Sharma ex Sofia Hayat became nun
Koo

ಬೆಂಗಳೂರು: 2000ರ ದಶಕದಲ್ಲಿ, ಹಲವಾರು ಯುರೋಪಿಯನ್ ಮಾಡೆಲ್‌ಗಳು ಮತ್ತು ಡ್ಯಾನ್ಸರ್‌ಗಳು ಭಾರತಕ್ಕೆ ಬಂದರು. ಪೋಷಕ ನಟಿಯರಾಗಿ ಅಥವಾ ಐಟಂ ಗರ್ಲ್‌ಗಳಾಗಿ ಚಲನಚಿತ್ರೋದ್ಯಮದಲ್ಲಿ ಜನಪ್ರಿಯರಾದರು. ಯಾನಾ ಗುಪ್ತಾರಿಂದ ನೆಗರ್ ಖಾನ್ ವರೆಗೆ ಅನೇಕರು ಪ್ರೇಕ್ಷಕರನ್ನು ರಂಜಿಸಿದರು. ಈ ಪಟ್ಟಿಯಲ್ಲಿ ಸೋಫಿಯಾ ಹಯಾತ್ ಹೆಸರು ಕೂಡ ಇದೆ. ಮೊದಲು ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದರು. ನಂತರ ಇಬ್ಬರು ದೊಡ್ಡ ಕ್ರಿಕೆಟ್ ತಾರೆಗಳೊಂದಿಗೆ ಡೇಟಿಂಗ್ ಮಾಡಿದರು. ಬಾಲಿವುಡ್ ನಟಿ ಸೋಫಿಯಾ ಹಯಾತ್ (Sofia Hayat) ಮದುವೆಯಾದ ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.. ನಿರೂಪಕಿಯಾಗಿ, ನಟಿಯಾಗಿ, ಗಾಯಕಿಯಾಗಿ ಆಕೆ ಹೆಸರು ಮಾಡಿದ್ದರು. ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಜೊತೆಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಆದರೀಗ ನಟಿ ಸೋಫಿಯಾ ಹಯಾತ್ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಸೋಫಿಯಾ ಹಯಾತ್ ಬ್ರಿಟನ್‌ನ ಸಂಪ್ರದಾಯವಾದಿ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಭಾರತೀಯ ಮತ್ತು ಪಾಕಿಸ್ತಾನಿ ಪರಂಪರೆಯಲ್ಲಿ, ಸೋಫಿಯಾ ತನ್ನ ಹದಿಹರೆಯದಲ್ಲಿ ಬಲವಂತದಲ್ಲಿ ಮದುವೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ನಟನೆಯಲ್ಲಿ ಆಸಕ್ತಿ ಹೊಂದಿದ್ದ ಆಕೆ ಬ್ರಿಟನ್ ತೊರೆದು ಭಾರತಕ್ಕೆ ಬಂದರು. 2008 ರಲ್ಲಿ, ‘ಕ್ಯಾಶ್ ಮತ್ತು ಕರಿ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಳಿಕ ‘ಸಿಕ್ಸ್ ಎಕ್’ ಹಾಗೂ ‘ಅಕ್ಸರ್- 2’ ಚಿತ್ರಗಳಲ್ಲಿ ನಟಿಸಿದರು. 2013 ರಲ್ಲಿ, FHM ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಆಕೆಯ ಹೆಸರು ಇತ್ತು. 2017ರಲ್ಲಿ ರೊಮೇನಿಯನ್ ಉದ್ಯಮಿಯನ್ನು ಮದುವೆಯಾದ ಸೋಫಿಯಾ ಒಂದು ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.

ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

ಸೋಫಿಯಾ ಬ್ರಿಟನ್ ಮತ್ತು ಭಾರತದಲ್ಲಿನ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡರು, ವಿಶೇಷವಾಗಿ ಬಿಗ್ ಬಾಸ್ (2013) ನ ಏಳನೇ ಸೀಸನ್‌ನಲ್ಲಿ ಕಾಣಿಸಿಕೊಂಡರು. ಸೋಫಿಯಾ ಬಿಗ್ ಬಾಸ್ ಮನೆಯಲ್ಲಿದ್ದ ನಂತರ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳೂ ಆದವು. ಮತ್ತು ಆ ಸಮಯದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಸಹ ಸಂಬಂಧ ಹೊಂದಿದ್ದರು ಎಂದು ವರದಿಯಾಗಿತ್ತು. 2017ರಲ್ಲಿ ರೊಮೇನಿಯನ್ ಉದ್ಯಮಿಯನ್ನು ಮದುವೆಯಾದ ಸೋಫಿಯಾ ಒಂದು ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.

2016 ರಲ್ಲಿ, ತನ್ನ ಬಿಗ್ ಬಾಸ್ ಅವಧಿಯ ಮೂರು ವರ್ಷಗಳ ನಂತರ, ಸೋಫಿಯಾ ಗ್ಲಾಮರ್ ಜಗತ್ತನ್ನು ತ್ಯಜಿಸಿ ತಾನು ಸನ್ಯಾಸಿನಿಯಾಗಿದ್ದೇನೆ ಎಂದು ಘೋಷಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ತನ್ನನ್ನು ತಾಯಿ ಸೋಫಿಯಾ ಎಂದು ಕರೆದುಕೊಳ್ಳುವ ಮಾಜಿ ನಟಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಜೂನ್ 2016 ರಲ್ಲಿ, ಹಯಾತ್ ಇದ್ದಕ್ಕಿದ್ದಂತೆ ತಾನು ಆಧ್ಯಾತ್ಮಿಕತೆಯನ್ನು ಸ್ವೀಕರಿಸಿದ್ದೇನೆ ಮತ್ತು ಸನ್ಯಾಸಿನಿಯಾಗಿದ್ದೇನೆ ಎಂದು ಘೋಷಿಸಿದ್ದರು. ಗಯಾ ಸೋಫಿಯಾ ಮದರ್ ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದರು.

Continue Reading

ಬಾಲಿವುಡ್

Anant Ambani Wedding:  ಅಂಬಾನಿ ಮದುವೆಯ ವಿವಾಹದಲ್ಲಿ ಸಿನಿ ತಾರೆಯರು ಮಿಂಚಿದ್ದು ಹೀಗೆ!

Anant Ambani Wedding:  ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ.

VISTARANEWS.COM


on

Anant Ambani Wedding bollywood and south india film stars
Koo

ಬೆಂಗಳೂರು: ಅನಂತ್‌ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

ಅನಂತ -ರಾಧಿಕಾ ಮದುವೆಗೆ ಗಾಯಕಿ ಆಶಾ ಭೋಂಸ್ಲೆ ಆಗಮಿಸಿದ್ದರು.

ಕಾಲಿವುಡ್‌ ನಟ ಜ್ಯೋತಿಕಾ ಹಾಗೂ ಸೂರ್ಯ ಅವರು ಮಿಂಚಿದ್ದು ಹೀಗೆ.

ರೆಡ್‌ ಕಾರ್ಪೆಟ್‌ ಮೇಲೆ ಬಾಲಿವುಡ್ ಬೆಡಗಿ ರೇಖಾ ಕಂಡದ್ದು ಹೀಗೆ

ಅಂತಾರಾಷ್ಟ್ರೀಯ ಸೆನ್ಸೇಷನ್ ಲೂಯಿಸ್ ಫೋನ್ಸಿ ಅನಂತ್ ರಾಧಿಕಾ ಲಗ್ನದಲ್ಲಿ ತಮ್ಮ ಅಭಿನಯದ ಮೂಲಕ ಅತಿಥಿಗಳನ್ನು ಬೆರಗುಗೊಳಿಸಿದರು.

ಇದನ್ನೂ ಓದಿ: Anant Ambani Wedding:  ಅನಂತ್‌ ಅಂಬಾನಿ ಮದುವೆಯಲ್ಲಿ ಯುವಕರೂ ನಾಚುವಂತೆ ಸ್ಟೆಪ್ಸ್‌ ಹಾಕಿದ ರಜನಿಕಾಂತ್‌!

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಭಾರತೀಯ ಉಡುಪಿನಲ್ಲಿ ಮಿಂಚಿದ್ದರು.

ಅನಂತ್-ರಾಧಿಕಾ ಲಗ್ನದಲ್ಲಿ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ಅಮಿತಾಬ್ ಮತ್ತು ಜಯಾ ಬಚ್ಚನ್, ಸಚಿನ್ ತೆಂಡೂಲ್ಕರ್ ಮತ್ತು ಆದಿತ್ಯ ಠಾಕ್ರೆ ಅವರೊಂದಿಗೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸಂತೋಷ ಹಂಚಿಕೊಂಡಿದ್ದು ಹೀಗೆ.

ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್ ಗ್ಲಾಮರ್ ಆಗಿ ಕಂಡಿದ್ದಾರೆ.

5 ಸಾವಿರ ಕೋಟಿ ರೂ. ಖರ್ಚು

ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್‌-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.

Continue Reading

ಬಾಲಿವುಡ್

Anant Ambani Wedding: ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದ ಮದುಮಗ: ಯಾರಪ್ಪ ಅದು ಡಿಸೈನರ್? ಎಂದ ನೆಟ್ಟಿಗರು!

Anant Ambani Wedding:ಅನಂತ್ ಅಂಬಾನಿ ಮದುವೆಯಲ್ಲಿ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದಿರುವುದು ನೋಡುಗರ ಅಚ್ಚರಿಗೆ ಕಾರಣವಾಗಿದೆ. ಅನಂತ್ ಅಂಬಾನಿ ಡಿಸೈನರ್ ಗಳಿಗೆ ಇದು ಯಾಕೆ ಗಮನಕ್ಕೆ ಬಂದಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

VISTARANEWS.COM


on

Anant Ambani Wedding ditches jootis for sports shoes for his wedding
Koo

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೊ, ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನಂತ್ ಅಂಬಾನಿ ಮದುವೆಯಲ್ಲಿ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದಿರುವುದು ನೋಡುಗರ ಅಚ್ಚರಿಗೆ ಕಾರಣವಾಗಿದೆ.

ಸಾಮಾನ್ಯವಾಗಿ ಶೇರ್ವಾನಿಗೆ ಮ್ಯಾಚಿಂಗ್ ರಾಯಲ್ ಶೂ ಅಥವಾ ಕೋಲ್ಹಾಪುರಿ ಚಪ್ಪಲ್ ಸಹ ಧರಿಸಲಾಗುತ್ತದೆ. ಕೆಲವರು ಲೂಫರ್ ಮಾದರಿಯ ಶೂ ಧರಿಸೋದು ಕೆಲದಿನಗಳಿಂದ ಟ್ರೆಂಡ್ ಆಗುತ್ತಿದೆ. ಆದರೆ ಅನಂತ್ ಅಂಬಾನಿ ಮದುವೆಯಲ್ಲಿ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದಿರುವುದು ನೋಡುಗರ ಅಚ್ಚರಿಗೆ ಕಾರಣವಾಗಿದೆ. ಅನಂತ್ ಅಂಬಾನಿ ಡಿಸೈನರ್ ಗಳಿಗೆ ಇದು ಯಾಕೆ ಗಮನಕ್ಕೆ ಬಂದಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಮದುವೆಗೂ ಮುನ್ನ ಎಲ್ಲರೂ ನೀಲಿಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು.

ಬನಾರಸಿ ರೇಷ್ಮೆ, ಕಾಂಚಿವರಂ ಸೇರಿದಂತೆ ದೇಸಿ ಹ್ಯಾಂಡ್‌ಲೂಮ್‌ನಿಂದ ಸಿದ್ಧಗೊಂಡ ಬಂಗಾರದ ದಾರದಿಂದಲೇ ನೇಯ್ದ ಸಿಲ್ಕ್‌ ಸೀರೆಗಳು ಸೀರೆಗಳು ನೀತಾ ಅಂಬಾನಿಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ ಎಂದರೂ ಅತಿಶಯೋಕ್ತಿಯಾಗದು.

ಇದನ್ನೂ ಓದಿ: Anant Ambani Wedding: ಅಂಬಾನಿ ಪುತ್ರನ ಮದುವೆಯಲ್ಲಿ ಹಾರ್ದಿಕ್‌ ಪಾಂಡ್ಯ-ಅನನ್ಯಾ ಪಾಂಡೆ ಮಸ್ತ್‌ ಡಾನ್ಸ್‌! ವಿಡಿಯೋ ಇದೆ

ನೀತಾ ಅಂಬಾನಿಯ ಮಗಳು ಇಶಾ ಈ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಧರಿಸಿದ್ದ ಒಂದೊಂದು ಲೆಹೆಂಗಾ ಕೂಡ ಒಂದೊಂದು ಕಥೆಯನ್ನೇ ಹೇಳಿವೆ. ಅಡಿಯಿಂದ ಮುಡಿಯವರೆಗೂ ಧರಿಸಿದ ವಜ್ರ-ವೈಢೂರ್ಯದ ಆಕ್ಸೆಸರೀಸ್‌ಗಳು ಫ್ಯಾಷನ್‌ ಲೋಕ ಮಾತ್ರವಲ್ಲ, ಜ್ಯುವೆಲರಿ ಲೋಕದಲ್ಲೂ ಸಂಚಲ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇನ್ನು, ಶ್ಲೋಕ ಅಂಬಾನಿ ಕೂಡ ಇದರಿಂದ ಹೊರತಾಗಿಲ್ಲ! ಇಲ್ಲಿ ಗಮನಿಸಬೇಕಾದ್ದು ಒಂದೇ ಒಬ್ಬರಿಗಿಂತ ಒಬ್ಬರದು ವಿಭಿನ್ನ ವಿನ್ಯಾಸ ಒಳಗೊಂಡಿದ್ದವು.

ಸದ್ಯ ಅಂಬಾನಿ ಫ್ಯಾಮಿಲಿಯ ಬಹುತೇಕ ಎಲ್ಲಾ ಪುರುಷರು ನಾನಾ ವೆರೈಟಿ ಬಂದ್ಗಾಲ ಇಲ್ಲವೇ ಗೋಲ್ಡನ್‌ ಶೇಡ್‌ ಮಿಕ್ಸ್ ಕುರ್ತಾ ಸ್ಟೈಲಿಂಗ್‌ಗೆ ಸೈ ಎಂದಿದ್ದು, ಪ್ರತಿ ಕಾರ್ಯಕ್ರಮಕ್ಕೆ ತಕ್ಕಂತೆ ಡಿಸೈನ್‌ ಬದಲಿಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಔಟ್‌ಫಿಟ್‌ಗಳು ಎಲ್ಲರನ್ನು ಸಮ್ಮೋಹನಗೊಳಿಸುತ್ತಿವೆ ಎನ್ನುತ್ತಾರೆ ಪ್ಯಾಷನ್‌ ವಿಮಶರ್ಕರು.

ಗಣ್ಯರ ದಂಡೇ ಉಪಸ್ಥಿತಿ

ಅನಂತ್‌ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

5 ಸಾವಿರ ಕೋಟಿ ರೂ. ಖರ್ಚು

ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್‌-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.

Continue Reading
Advertisement
Bhavana Ramanna hoovu foundation Varna Spardhe Bharathanatya Competition
ಸಿನಿಮಾ9 mins ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ21 mins ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ22 mins ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Chandan Shetty talk about Nivedita other marriage
ಸ್ಯಾಂಡಲ್ ವುಡ್38 mins ago

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Valmiki Corporation Scam
ಕರ್ನಾಟಕ50 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Donald Trump Assassination Bid
ವಿದೇಶ51 mins ago

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

karnataka Rain
ಮಳೆ53 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

Chandan Shetty Nivedita come together holding hands after the divorce
ಸ್ಯಾಂಡಲ್ ವುಡ್1 hour ago

Chandan Shetty: ಡಿವೋರ್ಸ್‌ ಬಳಿಕ ಚಂದನ್‌-ನಿವೇದಿತಾ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಬಂದಿದ್ದೇಕೆ?

Donald Trump Assassination Bid
ವಿದೇಶ2 hours ago

Donald Trump Assassination Bid: ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ; ಇದು ಯಾರ ಕೃತ್ಯ?

Valmiki Corporation Scam
ಕರ್ನಾಟಕ2 hours ago

Valmiki Corporation Scam: ತಲೆಮರೆಸಿಕೊಂಡಿದ್ದ ಶಾಸಕ ದದ್ದಲ್ ರಾಯಚೂರಿನಲ್ಲಿ ಪ್ರತ್ಯಕ್ಷ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ53 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ18 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ24 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌