Site icon Vistara News

Akshay Kumar: ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ನಟ; ರಕ್ಷಿಸಿದ ʻಕಿಲಾಡಿʼ ಅಕ್ಷಯ್​​ ಕುಮಾರ್ !

Akshay Kumar Rushes To Save Actor Who Faints Mid-Air During A Stunt

ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ತಮ್ಮ ಬಹುಮುಖ ಅಭಿನಯದಿಂದ ಹಿಂದಿ ಮನರಂಜನಾ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. `ಕಿಲಾಡಿ ಕುಮಾರ್’ ಎಂದು ಕರೆಯಲ್ಪಡುವ ಅವರು ಆಗಾಗ ತಮ್ಮ ಆಕ್ಷನ್ ಸೀಕ್ವೆನ್ಸ್‌ಗಳ ಮೂಲಕ ಮನ್ನೆಲೆಗೆ ಬರುತ್ತಾರೆ. ಮಾತ್ರವಲ್ಲ ದೇಹ ದಂಡಿಸಿ ವರ್ಕೌಟ್‌ ಮಾಡುತ್ತಾರೆ. ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು ಇದೆ. ಪ್ರಸ್ತುತ ʻಸರ್ಫಿರಾʼ ಸಿನಿಮಾದ ಯಶಸ್ಸನ್ನು ಆನಂದಿಸುತ್ತಿರುವ ನಟನ ಹಳೆಯ ವಿಡಿಯೊವೊಂದು ವೈರಲ್‌ ಆಗುತ್ತಿದೆ. ಅಭಿಮಾನಿಗಳು ನಟನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ನಟನನ್ನು ಅಕ್ಷಯ್‌ ಕುಮಾರ್‌ ರಕ್ಷಿಸಿದ್ದಾರೆ.

ಈಗ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಕಪಿಲ್ ಶರ್ಮಾ ಅವರ ಹಳೆಯ ಕಾಮಿಡಿ ಚಾಟ್ ಶೋನ ಚಿತ್ರೀಕರಣದ ಸಮಯದಲ್ಲಿ ಮೂರ್ಛೆ ಹೋದ ನಟನ ಕಡೆಗೆ ಅಕ್ಷಯ್ ಧಾವಿಸುತ್ತಿರುವುದನ್ನು ಕಾಣಬಹುದು. ಕಪಿಲ್ ಶರ್ಮಾ ಅವರ ಹಳೆಯ ಕಾಮಿಡಿ ಚಾಟ್ ಶೋ ವೇಳೆ ಹಾಸ್ಯನಟ ಪರಿತೋಷ್ ತ್ರಿಪಾಠಿ ಅವರು ಏಕಾಏಕಿ ಮೂರ್ಛೆ ಹೋದರು. ಅಲಿ ಅಸ್ಗರ್ ಮತ್ತು ಪ್ಯಾರಿತೋಷ್ ಹಗ್ಗಕ್ಕೆ ನೇತಾಡುವ ದೃಶ್ಯ ನಿಭಾಯಿಸುತ್ತಿದ್ದರು. ಆ ಕ್ಷಣಕ್ಕೆ ಪರಿತೋಷ್ ತ್ರಿಪಾಠಿ ಮೂರ್ಛೆ ಹೋಗುತ್ತಿರುವಾಗ ಪಕ್ಕದಲ್ಲಿ ಇದ್ದ ಅಲಿ ಅಸ್ಗರ್ ತನ್ನ ಕಾಲುಗಳಿಂದ ಪಾರಿತೋಷ್‌ರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಪಾರಿತೋಷ್‌ರನ್ನು ನಿಭಾಯಿಸಲು ಆಗಲೇ ಇಲ್ಲ. ಅದೇ ಕ್ಷಣಕ್ಕೆ ಚಿತ್ರೀಕರಣ ಮಾಡುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪರಿತೋಷ್‌ಗೆ ಸಹಾಯ ಮಾಡಲು ಓಡಿ ಬಂದು ಮೂರ್ಛೆ ಹೋದ ನಟನನ್ನು ಹಿಡಿದುಕೊಂಡಿದ್ದಾರೆ. ಅಕ್ಷಯ್ ಮತ್ತು ಉಳಿದ ಸಿಬ್ಬಂದಿ ಕೂಡ ನಟ ಬೀಳದಂತೆ ರಕ್ಷಿಸಲು ಧಾವಿಸಿದ್ದಾರೆ. ಇದೀಗ ಅಕ್ಷಯ್‌ ಕುಮಾರ್‌ ಅವರ ಸಮಯಪ್ರಜ್ಞೆಗೆ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಒಬ್ಬರು ಹೀಗೆ ಬರೆದಿದ್ದಾರೆ, “ತರಬೇತಿ ಪಡೆಯದ ಜನರು ಸರಿಯಾದ ಸುರಕ್ಷತಾ ಸಿಬ್ಬಂದಿ ಇಲ್ಲದೆ ಪ್ರದರ್ಶನವನ್ನು ಮಾಡಬಾರದುʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಕಿಲಾಡಿ ಕುಮಾರನ ಮೇಲೆ ಗೌರವ ಹೆಚ್ಚಾಯಿತುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Akshay Kumar:  ಅಕ್ಷಯ್ ಕುಮಾರ್‌ಗೆ ಕೋವಿಡ್‌ ಪಾಸಿಟಿವ್; ಅನಂತ್ ಅಂಬಾನಿ ಮದುವೆಗೆ ಗೈರು!

ಸಿನಿಮಾ ವಿಚಾರಕ್ಕೆ ಬಂದರೆ ಸರ್ಫಿರಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಅಕ್ಷಯ್ ಕುಮಾರ್ ಅವರು ಸಿಂಘಮ್ ಅಗೇನ್, ಖೇಲ್ ಖೇಲ್ ಮೇ, ಜಾಲಿ LLB 3, ಸ್ಕೈ ಫೋರ್ಸ್, ಹೇರಾ ಫೆರಿ 3, ಕಣ್ಣಪ್ಪ , ವೆಲ್‌ಕಮ್ ಟು ದಿ ಜಂಗಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಮಂಜ್ರೇಕರ್ ನಿರ್ದೇಶನದ ʻವೇದತ್ ಮರಾಠೆ ವೀರ್ ದೌಡ್ಲೆ ಸಾತ್ʼ ಮೂಲಕ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ನಿಭಾಯಿಸಲಿದ್ದಾರೆ.

Exit mobile version