ಮುಂಬೈ: ಇನ್ನೇನು 20 ದಿನದಲ್ಲಿ ಮುಕ್ತಾಯವಾಗಲಿರುವ ಈ ವರ್ಷದಲ್ಲಿ ಅತಿ ಹೆಚ್ಚು ಗೂಗಲ್ನಲ್ಲಿ ಹುಡುಕಾಟಕ್ಕೆ (most googled celeb) ಒಳಗಾದವರ ಪಟ್ಟಿಯನ್ನು ಗೂಗಲ್ ಇಂಡಿಯಾ (Google India) ಬಿಡುಗಡೆ ಮಾಡಿದೆ(Year in Search). ಭಾರತದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿ ನಟಿ ಕಿಯಾರಾ ಅಡ್ವಾಣಿಯಾಗಿದ್ದಾರೆ(Kiara advani)! ಕಿಯಾರಾ ಅವರ ಪತಿ ಸಿದ್ಧಾರ್ಥ ಮಲ್ಹೋತ್ರಾ (Sidharth Malhotra) ಅವರು ಇದೇ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಅಂದರೆ ಗಂಡ-ಹೆಂಡತಿ ಇಬ್ಬರು ಗೂಗಲ್ ಸರ್ಚ್ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ-ಸಿದ್ಧಾರ್ಥ ಅವರು ಈ ವರ್ಷದ ಆರಂಭ, ಫೆಬ್ರವರಿಯಲ್ಲಿ ಮದುವೆಯಾಗಿದ್ದಾರೆ. ಇನ್ನು ಕ್ರಿಕೆಟ್ನ ಪ್ರಿನ್ಸ್ ಎಂದು ಕರೆಯಿಸಿಕೊಳ್ಳುತ್ತಿರುವ ಶುಭಮನ್ ಗಿಲ್ (Shubman Gill) ಅವರು ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ, ಕರ್ನಾಟಕ ಮೂಲಕ ನ್ಯೂಜಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ (Rachin Ravindra) ಇದ್ದಾರೆ.
ಹಾಗೆ ನೋಡಿದರೆ, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗರೇ ಇದ್ದಾರೆ. ಭಾರತದಲ್ಲಿ ಐಸಿಸಿ ವರ್ಲ್ಡ್ ಕಪ್ ನಡೆದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗರು ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಈ ಕ್ರಿಕೆಟಿಗರ ಪಟ್ಟಿಯಲ್ಲಿ ಈಗಾಗಲೇ ಹೇಳಿದಂತೆ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ.
ಒಟ್ಟಾರ ಈ ಪಟ್ಟಿಯಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ 2ರಲ್ಲಿ ಭಾಗವಹಿಸಿದ ನಂತರ ಖ್ಯಾತಿಗೆ ಏರಿದರು. ಅವರು ಐದನೇ ಸ್ಥಾನದದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶದ ಹೊರತಾಗಿಯೂ, ಎಲ್ವಿಶ್ ವಿಜೇತರಾಗಿ ಹೊರಹೊಮ್ಮಿದರು. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದ ಬಳಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಬಗ್ಗೆ ಅವರು ಇತ್ತೀಚೆಗೆ ವಿವಾದವನ್ನು ಎದುರಿಸಿದ್ದರು.
ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿಗಳು
- ಕಿಯಾರಾ ಆಡ್ವಾಣಿ, ನಟಿ
- ಶುಭಮನ್ ಗಿಲ್, ಕ್ರಿಕೆಟಿಗ
- ರಚಿನ್ ರವೀಂದ್ರ, ಕ್ರಿಕೆಟಿಗ
- ಮೊಹಮ್ಮದ್ ಶಮಿ, ಕ್ರಿಕೆಟಿಗ
- ಎಲ್ವಿಶ್ ಯಾದವ್, ಯುಟ್ಯೂಬರ್
- ಸಿದ್ಧಾರ್ಥ ಮಲ್ಹೋತ್ರಾ, ನಟ
- ಗ್ಲೇನ್ ಮ್ಯಾಕ್ಸ್ವೆಲ್, ಆಸ್ಟ್ರೇಲಿಯನ್ ಕ್ರಿಕೆಟಿಗ
- ಡೇವಿಡ್ ಬೆಕ್ಹ್ಯಾಮ್, ಮಾಜಿ ಫುಟ್ಬಾಲರ್, ಇಂಗ್ಲೆಂಡ್
- ಸೂರ್ಯಕುಮಾರ್ ಯಾದವ್, ಕ್ರಿಕೆಟಿಗ
- ಟ್ರಾವಿಸ್ ಹೆಡ್, ಆಸ್ಟ್ರೇಲಿಯನ್ ಕ್ರಿಕೆಟಿಗ
ಈ ಸುದ್ದಿಯನ್ನೂ ಓದಿ: Year in Search: ಈ ವರ್ಷ ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾ, ವೆಬ್ ಸೀರೀಸ್ ಯಾವುವು?