ಮುಂಬೈ: ಜೆಕ್ ಗಣರಾಜ್ಯ ದೇಶದ ಕ್ರಿಸ್ಟಿನಾ ಪಿಸ್ಕೋವಾ (Miss World 2024) (Krystyna Pyszkova) 2024ನೇ ಆವೃತ್ತಿಯ ವಿಶ್ವ ಸುಂದರಿ (Miss World 2024)ಯಾಗಿ ಹೊರಹೊಮ್ಮಿದ್ದಾರೆ. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್(Jio World Convention Centre in BKC, Mumbai)ನಲ್ಲಿ ಶನಿವಾರ (ಮಾ.9) ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಜನರ ಮನಸ್ಸಿನಲ್ಲಿರುವ ಪ್ರಶ್ನೆ ಎಂದರೆ ವಿಶ್ವ ಸುಂದಿರಿಗೆ ಕೇಳಿದ ಪ್ರಶ್ನೆಗಳು ಯಾವುವು? ಅವರು ಉತ್ತರ ಕೊಟ್ಟಿದ್ದೇನು? ಎಂಬುದು. ತಿಳಿಯಲು ಮುಂದೆ ಓದಿ.
ಮಹಿಳೆಯರ ಆರೋಗ್ಯ
ಕೇವಲ ಸೌಂದರ್ಯದ ಮೇಲೆ ವಿಶ್ವ ಸುಂದರಿ ಪಟ್ಟ ನೀಡುವುದಿಲ್ಲ. ಅಲ್ಲಿ ಕೇಳಿದ ಪ್ರಶ್ನೆಗೆ ಅವರು ಯಾವ ರೀತಿ ಉತ್ತರಿಸಿದರು ಎಂಬುದು ಕೂಡ ಮುಖ್ಯವಾಗುತ್ತದೆ. ಮಹಿಳೆಯರ ಆರೋಗ್ಯ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಕ್ರಿಸ್ಟಿನಾ ಪಿಸ್ಕೋವಾ ಉತ್ತರ ನೀಡಿ ʻʻನಾವು ಎಂದಿಗೂ ಮರೆಯದ ವಿಚಾರ ಎಂದರೆ ಮಹಿಳೆಯರ ಮುಟ್ಟಿನ ಬಗ್ಗೆ. ಅನೇಕ ದೇಶಗಳಲ್ಲಿ ಮಹಿಳೆಯರು ಇನ್ನೂ ಈ ಬಗ್ಗೆ ಅವಮಾನವನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ಮಾತನಾಡಲು ಹೆದರುತ್ತಾರೆ. ಮಹಿಳೆಯರು ಅಗತ್ಯವಿರುವ ಮಾಹಿತಿಯನ್ನು ಪಡೆಯುತ್ತಿಲ್ಲ” ಎಂದರು.
ಇದನ್ನೂ ಓದಿ: Miss World 2024 Finale: ವಿಶ್ವ ಸುಂದರಿ ಕಿರೀಟ: ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ಸೆಲೆಬ್ರಿಟಿಗಳು ಕಂಡದ್ದು ಹೀಗೆ!
Miss World Czech Republic – Krystyna Pyszková Question and Answer round
— MissMiss (@MissMiss1546642) March 9, 2024
Miss World 2024 Final #MissWorld #71MW #MissWorld71 #BWAP #BeautywithaPurpose #India #incredibleindia pic.twitter.com/d2lH8j80ja
ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು
ಮಿಸ್ ವರ್ಲ್ಡ್ 2024 ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ, ಮಾಜಿ ವಿಶ್ವ ಸುಂದರಿ ಮೇಘನ್ ಅವರು ಟಾಪ್ 4 ಸುಂದರಿಯರಿಗೆ ಪ್ರಶ್ನೆ ಕೇಳಿದ್ದರು. ಈ ನಾಲ್ವರಲ್ಲಿ ಸುಂದರವಾದ ಉತ್ತರವನ್ನು ನೀಡಿದ ಕ್ರಿಸ್ಟಿನಾ ಪಿಸ್ಕೊವಾ, ʻʻನೀವು ಚಿಕ್ಕವರಾಗಿದ್ದರೆ, ನಿಮಗೆ ಕೆಲವು ಕನಸುಗಳು ಬರುವುದು ಸಹಜ. ಆದರೆ ನೀವು ಬೆಳೆದಂತೆ ಆ ಕನಸುಗಳು ನಿಮಗೆ ತುಂಬಾ ಹತ್ತಿರವಾಗುತ್ತವೆ. ಕೆಲವೊಂದು ನಿಮ್ಮಿಂದ ದೂರವಾಗುತ್ತಲೇ ಇರುತ್ತವೆ. ಅದೇ ರೀತಿ, ನೀವು ಪೋಷಕರಾದಾಗ, ನಿಮ್ಮ ಮಗುವಿಗೆ ಅದೇ ಸಂಭವಿಸುತ್ತದೆ. ಈ ಸಮಯದಲ್ಲಿ, ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇಂದಿಗೂ ಅಂದರೆ 2024ರಲ್ಲಿ ಶಾಲೆಗೆ ಹೋಗಲಾಗದ ಸುಮಾರು 250 ಮಿಲಿಯನ್ ಮಕ್ಕಳು ಇದ್ದಾರೆ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನನ್ನ ಗುರಿಯಾಗಿದೆ. ನಾನು ಈ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ನಾನು ವಿಶ್ವ ಸುಂದರಿ ಗೆದ್ದರೂ ಅಥವಾ ಇಲ್ಲದೇ ಇದ್ದರೂ, ನಾನು ಯಾವಾಗಲೂ ಈ ಕೆಲಸಕ್ಕೆ ಸಪೋರ್ಟ್ ಮಾಡುತ್ತಲೇ ಇರುತ್ತೇನೆ, ಧನ್ಯವಾದಗಳುʼʼ ಎಂದರು. ಆ ಬಳಿಕ ಕ್ರಿಸ್ಟಿನಾ ಕಿರೀಟ ಮುಡಿಗೇರಿಸಿಕೊಂಡರು.
Miss World 2024
— Abhay( मोदी परिवार ) (@AstuteGaba) March 9, 2024
Krystyna Pyszkova from Czech Republic crowned Miss World 2024
Besting 111 of her fellow titleholders from across the globe, Krystyna Pyszková of the Czech Republic was crowned Miss World 2024 on Saturday in Mumbai, India, where the international pageant was held… pic.twitter.com/o9m5m26iLC
‘ಮಿಸ್ ವರ್ಲ್ಡ್’ ಗೆದ್ದ ನಂತರ ಕ್ರಿಸ್ಟಿನಾ ಮಾತನಾಡಿ ʻʻಈ ಕಿರೀಟ ನನಗಾಗಿ ಗೆದ್ದಿಲ್ಲ. ಈ ಕಿರೀಟ ದೇಶ ಮತ್ತು ನನ್ನ ಕುಟುಂಬವನ್ನು ಪ್ರತಿನಿಧಿಸಿದ್ದು ಮಾತ್ರವಲ್ಲದೆ, ನಾನು ಕೆಲಸ ಮಾಡುತ್ತಿರುವ ಹಲವಾರು ಮಕ್ಕಳನ್ನು ಪ್ರತಿನಿಧಿಸಿದೆʼʼ ಎಂದು ಹೇಳಿದರು.
ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ತಿಳಿಸಿದೆ.ಭವ್ಯ ಸಮಾರಂಭದಲ್ಲಿ ಕಳೆದ ಬಾರಿಯ ವಿಜೇತೆ ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು.
ಇದನ್ನೂ ಓದಿ: Miss World 2024: ಸಿನಿ ಶೆಟ್ಟಿಗೆ ವಿಶ್ವ ಸುಂದರಿ ಕಿರೀಟ ಜಸ್ಟ್ ಮಿಸ್
Miss World 2024
— Abhay( मोदी परिवार ) (@AstuteGaba) March 10, 2024
71st Miss World Final Q&A Round Top 4#MissWorld2024 #mumbai #MissWorld pic.twitter.com/wyJMKlGPMC
ಲೆಬನಾನ್ ನ ಯಾಸ್ಮಿನಾ ಜೈತೌನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಮಿಸ್ ವರ್ಲ್ಡ್ 2024 ರ ವಿಜೇತರನ್ನು ಬಹಿರಂಗಪಡಿಸುವ ಮೊದಲು ಅಂತಿಮ ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು. ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.