Miss World 2024: ವಿಶ್ವ ಸುಂದರಿ ಆಗಲು `ಕ್ರಿಸ್ಟಿನಾ ಪಿಸ್ಕೋವಾʼಗೆ ಕೇಳಿದ ಪ್ರಶ್ನೆ ಏನು? ಅವರ ಉತ್ತರ ಏನಾಗಿತ್ತು? - Vistara News

ಬಾಲಿವುಡ್

Miss World 2024: ವಿಶ್ವ ಸುಂದರಿ ಆಗಲು `ಕ್ರಿಸ್ಟಿನಾ ಪಿಸ್ಕೋವಾʼಗೆ ಕೇಳಿದ ಪ್ರಶ್ನೆ ಏನು? ಅವರ ಉತ್ತರ ಏನಾಗಿತ್ತು?

Miss World 2024: 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಜನರ ಮನಸ್ಸಿನಲ್ಲಿರುವ ಪ್ರಶ್ನೆ ಎಂದರೆ ವಿಶ್ವ ಸುಂದಿರಿಗೆ ಕೇಳಿದ ಪ್ರಶ್ನೆಗಳು ಯಾವುವು? ಅವರು ಉತ್ತರ ಕೊಟ್ಟಿದ್ದೇನು? ಎಂಬುದು. ತಿಳಿಯಲು ಮುಂದೆ ಓದಿ.

VISTARANEWS.COM


on

Miss World 2024 Krystyna Pyszková from Czech Republic becomes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ:  ಜೆಕ್ ಗಣರಾಜ್ಯ ದೇಶದ ಕ್ರಿಸ್ಟಿನಾ ಪಿಸ್ಕೋವಾ (Miss World 2024) (Krystyna Pyszkova) 2024ನೇ ಆವೃತ್ತಿಯ ವಿಶ್ವ ಸುಂದರಿ (Miss World 2024)ಯಾಗಿ ಹೊರಹೊಮ್ಮಿದ್ದಾರೆ. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌(Jio World Convention Centre in BKC, Mumbai)ನಲ್ಲಿ  ಶನಿವಾರ (ಮಾ.9) ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಜನರ ಮನಸ್ಸಿನಲ್ಲಿರುವ ಪ್ರಶ್ನೆ ಎಂದರೆ ವಿಶ್ವ ಸುಂದಿರಿಗೆ ಕೇಳಿದ ಪ್ರಶ್ನೆಗಳು ಯಾವುವು? ಅವರು ಉತ್ತರ ಕೊಟ್ಟಿದ್ದೇನು? ಎಂಬುದು. ತಿಳಿಯಲು ಮುಂದೆ ಓದಿ.

ಮಹಿಳೆಯರ ಆರೋಗ್ಯ

ಕೇವಲ ಸೌಂದರ್ಯದ ಮೇಲೆ ವಿಶ್ವ ಸುಂದರಿ ಪಟ್ಟ ನೀಡುವುದಿಲ್ಲ. ಅಲ್ಲಿ ಕೇಳಿದ ಪ್ರಶ್ನೆಗೆ ಅವರು ಯಾವ ರೀತಿ ಉತ್ತರಿಸಿದರು ಎಂಬುದು ಕೂಡ ಮುಖ್ಯವಾಗುತ್ತದೆ. ಮಹಿಳೆಯರ ಆರೋಗ್ಯ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಕ್ರಿಸ್ಟಿನಾ ಪಿಸ್ಕೋವಾ ಉತ್ತರ ನೀಡಿ ʻʻನಾವು ಎಂದಿಗೂ ಮರೆಯದ ವಿಚಾರ ಎಂದರೆ ಮಹಿಳೆಯರ ಮುಟ್ಟಿನ ಬಗ್ಗೆ. ಅನೇಕ ದೇಶಗಳಲ್ಲಿ ಮಹಿಳೆಯರು ಇನ್ನೂ ಈ ಬಗ್ಗೆ ಅವಮಾನವನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ಮಾತನಾಡಲು ಹೆದರುತ್ತಾರೆ. ಮಹಿಳೆಯರು ಅಗತ್ಯವಿರುವ ಮಾಹಿತಿಯನ್ನು ಪಡೆಯುತ್ತಿಲ್ಲ” ಎಂದರು.

ಇದನ್ನೂ ಓದಿ: Miss World 2024 Finale: ವಿಶ್ವ ಸುಂದರಿ ಕಿರೀಟ: ರೆಡ್‌ ಕಾರ್ಪೆಟ್‌ ಮೇಲೆ ಬಾಲಿವುಡ್‌ ಸೆಲೆಬ್ರಿಟಿಗಳು ಕಂಡದ್ದು ಹೀಗೆ!

ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು

ಮಿಸ್ ವರ್ಲ್ಡ್ 2024 ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ, ಮಾಜಿ ವಿಶ್ವ ಸುಂದರಿ ಮೇಘನ್ ಅವರು ಟಾಪ್ 4 ಸುಂದರಿಯರಿಗೆ ಪ್ರಶ್ನೆ ಕೇಳಿದ್ದರು. ಈ ನಾಲ್ವರಲ್ಲಿ ಸುಂದರವಾದ ಉತ್ತರವನ್ನು ನೀಡಿದ ಕ್ರಿಸ್ಟಿನಾ ಪಿಸ್ಕೊವಾ, ʻʻನೀವು ಚಿಕ್ಕವರಾಗಿದ್ದರೆ, ನಿಮಗೆ ಕೆಲವು ಕನಸುಗಳು ಬರುವುದು ಸಹಜ. ಆದರೆ ನೀವು ಬೆಳೆದಂತೆ ಆ ಕನಸುಗಳು ನಿಮಗೆ ತುಂಬಾ ಹತ್ತಿರವಾಗುತ್ತವೆ. ಕೆಲವೊಂದು ನಿಮ್ಮಿಂದ ದೂರವಾಗುತ್ತಲೇ ಇರುತ್ತವೆ. ಅದೇ ರೀತಿ, ನೀವು ಪೋಷಕರಾದಾಗ, ನಿಮ್ಮ ಮಗುವಿಗೆ ಅದೇ ಸಂಭವಿಸುತ್ತದೆ. ಈ ಸಮಯದಲ್ಲಿ, ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇಂದಿಗೂ ಅಂದರೆ 2024ರಲ್ಲಿ ಶಾಲೆಗೆ ಹೋಗಲಾಗದ ಸುಮಾರು 250 ಮಿಲಿಯನ್ ಮಕ್ಕಳು ಇದ್ದಾರೆ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನನ್ನ ಗುರಿಯಾಗಿದೆ. ನಾನು ಈ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ನಾನು ವಿಶ್ವ ಸುಂದರಿ ಗೆದ್ದರೂ ಅಥವಾ ಇಲ್ಲದೇ ಇದ್ದರೂ, ನಾನು ಯಾವಾಗಲೂ ಈ ಕೆಲಸಕ್ಕೆ ಸಪೋರ್ಟ್‌ ಮಾಡುತ್ತಲೇ ಇರುತ್ತೇನೆ, ಧನ್ಯವಾದಗಳುʼʼ ಎಂದರು. ಆ ಬಳಿಕ ಕ್ರಿಸ್ಟಿನಾ ಕಿರೀಟ ಮುಡಿಗೇರಿಸಿಕೊಂಡರು.

‘ಮಿಸ್ ವರ್ಲ್ಡ್’ ಗೆದ್ದ ನಂತರ ಕ್ರಿಸ್ಟಿನಾ ಮಾತನಾಡಿ ʻʻಈ ಕಿರೀಟ ನನಗಾಗಿ ಗೆದ್ದಿಲ್ಲ. ಈ ಕಿರೀಟ ದೇಶ ಮತ್ತು ನನ್ನ ಕುಟುಂಬವನ್ನು ಪ್ರತಿನಿಧಿಸಿದ್ದು ಮಾತ್ರವಲ್ಲದೆ, ನಾನು ಕೆಲಸ ಮಾಡುತ್ತಿರುವ ಹಲವಾರು ಮಕ್ಕಳನ್ನು ಪ್ರತಿನಿಧಿಸಿದೆʼʼ ಎಂದು ಹೇಳಿದರು.

ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ತಿಳಿಸಿದೆ.ಭವ್ಯ ಸಮಾರಂಭದಲ್ಲಿ ಕಳೆದ ಬಾರಿಯ ವಿಜೇತೆ ಪೋಲೆಂಡ್​ನ ಕರೋಲಿನಾ ಬಿಲಾವ್ಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು.

ಇದನ್ನೂ ಓದಿ: Miss World 2024: ಸಿನಿ ಶೆಟ್ಟಿಗೆ ವಿಶ್ವ ಸುಂದರಿ ಕಿರೀಟ ಜಸ್ಟ್‌ ಮಿಸ್‌

ಲೆಬನಾನ್ ನ ಯಾಸ್ಮಿನಾ ಜೈತೌನ್​​ ಮೊದಲ ರನ್ನರ್ ಅಪ್ ಆಗಿದ್ದಾರೆ. ಮಿಸ್ ವರ್ಲ್ಡ್ 2024 ರ ವಿಜೇತರನ್ನು ಬಹಿರಂಗಪಡಿಸುವ ಮೊದಲು ಅಂತಿಮ ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು. ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Anant Ambani: ಅನಂತ್ ಅಂಬಾನಿ ಕೊಟ್ಟ ಪ್ರೇಮ ಪತ್ರ ಪ್ರಿಂಟ್ ಆಗಿದ್ದ ಗೌನ್‌ನಲ್ಲಿ ಮಿಂಚಿದ ರಾಧಿಕಾ ಮರ್ಚಂಟ್‌!

Anant Ambani: ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್‌ ಅವರ ಡ್ರೆಸ್‌ ಕೂಡ ಹೈಲೈಟ್‌ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್‌ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

VISTARANEWS.COM


on

Anant Ambani Love Letter Printed On Radhika Merchant Pre-Wedding Dress
Koo

ಬೆಂಗಳೂರು: ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚಂಟ್‌ ಅವರು ಯುರೋಪ್‌ನಲ್ಲಿ ಕ್ರೂಸ್‌ನಲ್ಲಿ ಅದ್ಧೂರಿಯಾಗಿ ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆ ಮಾಡಿದರು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಹೈಲೈಟ್‌ ಆಗಿದ್ದು ರಾಧಿಕಾ ಅವರ ವಿಭಿನ್ನವಾದ ಉಡುಪುಗಳು. 22ನೇ ವಯಸ್ಸಿನಲ್ಲಿದ್ದಾಗ ಗೆಳೆಯ ಅನಂತ್ ಅಂಬಾನಿ ಅವರು ಆಕೆಗಾಗಿ ಬರೆದ ಪ್ರೇಮಪತ್ರವನ್ನು ಈ ಗವನ್‌ನಲ್ಲಿ ಪ್ರಿಂಟ್ ಮಾಡಲಾಗಿದೆ. ಈ ಗೌನ್‌ ಧರಿಸಿ ಪೋಸ್‌ ಕೊಟ್ಟಿದ್ದಾರೆ ರಾಧಿಕಾ.

ರಾಧಿಕಾ ಈ ಕುರಿತು ಮಾತನಾಡಿ, “ಅನಂತ್‌ ನನ್ನ ಜನ್ಮದಿನದಂದು ಪ್ರೇಮ ಪತ್ರ ಬರೆದಿದ್ದರು. ಈ ಪ್ರೇಮ ಪತ್ರವನ್ನು ನಾನು ನನ್ನ ಮುಂದಿನ ಪೀಳಿಗೆಗೆ ತೋರಿಸಲು ಬಯಸುವೆ, ನಮ್ಮ ಪ್ರೀತಿ ಹೀಗಿತ್ತು ಎಂಬುದನ್ನು ನಾನು ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ತೋರಿಸಲು ಬಯಸುವೆʼʼ ಎಂದು ರಾಧಿಕಾ ಮರ್ಚೆಂಟ್ ಹೇಳಿದ್ದಾರೆ. ಪತ್ರದ ಪ್ರಿಂಟೆಡ್‌ ಉಡುಪಿನಲ್ಲಿ ಅಂದವಾಗಿ ಕಾಣುತ್ತಿದ್ದರು ರಾಧಿಕಾ.

ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್‌ ಅವರ ಡ್ರೆಸ್‌ ಕೂಡ ಹೈಲೈಟ್‌ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್‌ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

ಇದನ್ನೂ ಓದಿ: Kotee Movie: ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

ರಾಧಿಕಾ ಮರ್ಚಂಟ್‌ ಇಟಲಿಯ ಪೋರ್ಟೋಫಿನೋದಲ್ಲಿ ನಡೆದ ಆಚರಣೆಗಳಿಗಾಗಿ ಬಾರ್ಬಿಕೋರ್ ಟ್ರೆಂಡ್ ಧರಿಸಿದ್ದರು. ಈ ಉಡುಪನ್ನು ಯೆವ್ಸ್ ಸೇಂಟ್ ಲಾರೆಂಟ್ ವಿನ್ಯಾಸಗೊಳಿಸಿದ್ದಾರೆ. ವರದಿಯ ಪ್ರಕಾರ ರಾಧಿಕಾ ಅವರ ಆರ್ಕೈವಲ್ ಡಿಯೊರ್ ಉಡುಪನ್ನು ಸ್ಯಾನ್ ಫ್ರಾನ್ಸಿಸ್ಕೋದ ಕಸ್ಸಂದ್ರ ಕಾರ್ಪೆಂಟರ್ ಅವರಿಂದ ಪಡೆಯಲಾಗಿದೆ ಎನ್ನಲಾಗಿದೆ . ಇದು ಮೂಲತಃ ಜೀನಿ ಮ್ಯಾಗ್ನಿನ್ ಅವರದ್ದು ಎನ್ನಲಾಗಿದೆ.

ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್‌ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ. ರಾಧಿಕಾ ಅವರು ಈ ಸ್ಕರ್ಟ್‌ ಜತೆಗೆ ವಜ್ರದ ಉಂಗುರ, ಗುಲಾಬಿ ಬಣ್ಣದ ಹರ್ಮೆಸ್ ಮಿನಿ ಕೆಲ್ಲಿ ಬ್ಯಾಗ್ ಧರಿಸಿದ್ದರು. ಪೋನಿಟೇಲ್‌ಗೆ ರೇಷ್ಮೆಯ ಸ್ಕಾರ್ಫ್‌ ಧರಿಸಿದ್ದರು.

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

Continue Reading

ಬಾಲಿವುಡ್

Alia Bhatt: ಆಲಿಯಾ ಭಟ್ ಮತ್ತೊಂದು ಡೀಪ್‌ಫೇಕ್ ವೀಡಿಯೊ ವೈರಲ್‌; ಫ್ಯಾನ್ಸ್‌ ಕೆಂಡಾಮಂಡಲ!

Alia Bhatt: ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.

VISTARANEWS.COM


on

Alia Bhatt Fans A Deepfake Video Goes Viral Again
Koo

ಬೆಂಗಳೂರು: ಆಲಿಯಾ ಭಟ್ ಅವರ ಹೊಸ ಡೀಪ್‌ಫೇಕ್ ವೀಡಿಯೊ (Deepfake Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಆಲಿಯಾ ಫ್ಯಾನ್ಸ್‌ ಆಘಾತಕ್ಕೊಳಗಾಗಿದ್ದಾರೆ. “Sameeksha Avtr ಎಂಬ ಬಳಕೆದಾರರಿಂದ ಸಾಕಷ್ಟು ವಿಡಿಯೊಗಳು ಪೋಸ್ಟ್‌ ಆಗಿವೆ. ಡೀಪ್‌ಫೇಕ್ ಕ್ಲಿಪ್ ವೈರಲ್ ಆದ ಕೂಡಲೇ, ಆಲಿಯಾ ಭಟ್ ಅವರ ಅಭಿಮಾನಿಗಳು “ವಿಡಿಯೊ ನೋಡಿದ ಕೂಡಲೇ ನಾನು ಆಲಿಯಾ ಎಂದು ಭಾವಿಸಿದೆ. ಆದರೆ ಮತ್ತೆ ಎಚ್ಚರಿಕೆಯಿಂದ ನೋಡಿದ ಕೂಡಲೇ ಆಲಿಯಾ ಅಲ್ಲ ಎಂದು ತಿಳಿಯಿತು” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಇನ್ನೂ ಕೆಲವರು “AI ತುಂಬಾ ಅಪಾಯಕಾರಿ” ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಆಲಿಯಾ ಅವರ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮೇ ತಿಂಗಳಲ್ಲಿ, ಆಲಿಯಾ ಅವರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.

ಇದನ್ನೂ ಓದಿ: OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.  ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ 27-ಸೆಕೆಂಡ್ ವಿಡಿಯೊ ಕ್ಲಿಪ್‌ ತಯಾರಿಸಿಲಾಗಿತ್ತು. ಇದು ನಕಲಿ ವಿಡಿಯೊ ಎಂದು ವಕ್ತಾರರು ಹೇಳಿಕೆ ನೀಡಿದ್ದರು ವಿಡಿಯೊ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ. ‘ವೋಟ್ ಫಾರ್ ನ್ಯಾಯ್, ವೋಟ್ ಫಾರ್ ಕಾಂಗ್ರೆಸ್’ ಎಂಬುದು ಇತ್ತು. ಬಳಿಕ ಆಮೀರ್‌ ಈ ಬಗ್ಗೆ ಕೇಸ್‌ ಕೂಡ ದಾಖಲಿಸಿದ್ದರು.

ಇದಕ್ಕೂ ಮೊದಲು, ರಣವೀರ್ ಸಿಂಗ್ ಅವರ ಡೀಪ್‌ಫೇಕ್ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ನಟ ಸರ್ಕಾರವನ್ನು ಟೀಕಿಸಿರುವಂತೆ ವೈರಲ್‌ ಆಗಿತ್ತು.

Continue Reading

Latest

OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

OTT Release: ಈ ವಾರ ಕೂಡ ಒಟಿಟಿಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಹೌಸ್ ಆಫ್ ದಿ ಡ್ರ್ಯಾಗನ್, ಬ್ರಿಡ್ಜರ್ಟನ್, ದಿ ಬಾಯ್ಸ್, ಪ್ರಿಸ್ಯುಮಡ್ ಇನ್ನೊಸೆಂಟ್ ಹಾಗೂ ವಿದ್ಯಾಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಬಾಲಿವುಡ್ ಚಲನಚಿತ್ರ ದೋ ಔರ್ ದೋ ಪ್ಯಾರ್ ಕೂಡ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿವೆ. ಒಟ್ಟಾರೆ ಈ ವಾರ ಸಿನಿ ಪ್ರಿಯರಿಗೆ ಹಬ್ಬದೂಟವನ್ನು ಉಣಬಡಿಸಲಿದೆ.

VISTARANEWS.COM


on

OTT Release
Koo

ಮುಂಬೈ : ಪ್ರತಿವಾರ ಒಟಿಟಿಯಲ್ಲಿ ಸಾಕಷ್ಟು ಸೂಪರ ಹಿಟ್ ಶೋಗಳು ರಿಲೀಸ್ ಆಗುತ್ತಿರುತ್ತವೆ. ಈ ಮೂಲಕ ಒಟಿಟಿ ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಹಾಗಾಗಿ ಈ ವಾರವೂ ಕೂಡ ಒಟಿಟಿ(OTT Release)ಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಕೆಲವು ಬಾಲಿವುಡ್ ಚಲನಚಿತ್ರಗಳೂ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅವುಗಳ ವಿವರ ಇಲ್ಲಿದೆ.

ಹೌಸ್ ಆಫ್ ದಿ ಡ್ರ್ಯಾಗನ್ (ಸೀಸನ್ 2)

ಎಚ್‌ಬಿಓನ ಸೀರಿಸ್ ʼಹೌಸ್ ಆಫ್ ದಿ ಡ್ರ್ಯಾಗನ್ʼ ಸೀಸನ್ 2 ಜೂನ್ 16ರಂದು ಹೊಸ ಸಂಘರ್ಷ, ಸೇಡು ತೀರಿಸಿಕೊಳ್ಳುವ ಹೊಸ ಕಥಾವಸ್ತುಗಳೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ. ಜಾರ್ಜ್ ಆರ್ ಆರ್ ಮಾರ್ಟಿನ್ ಅವರ ʼಫೈರ್ ಆ್ಯಂಡ್ ಬ್ಲಡ್ʼ ಆಧರಿಸಿದ ಈ ಸರಣಿಯು ರಾಜ ಕುಟುಂಬದ ಕಥೆಯನ್ನು ಒಳಗೊಂಡಿದೆ. ರಾಜ ಕುಟುಂಬ ಅಧಿಕಾರದ ಸಂಘರ್ಷ, ಒಳಸಂಚು, ಕೌಟುಂಬಿಕ ಶತ್ರುತ್ವವನ್ನು ಇದರಲ್ಲಿ ಕಾಣಬಹುದು.
ಇದು ಜೂನ್ 16ರಂದು ಜಿಯೋ ಸಿನಿಮಾದಲ್ಲಿ ಬೆಳಗ್ಗೆ 6.30ರಿಂದ ಲಭ್ಯವಾಗಲಿದೆ.

ಬ್ರಿಡ್ಜರ್ಟನ್(ಸೀಸನ್ 3, ಭಾಗ 2)

ಇದರಲ್ಲಿ ಕಾಲಿನ್ ಮತ್ತು ಪೆನೆಲೋಪ್ ಅವರ ಪ್ರಣಯವನ್ನು ಪ್ರೇಕ್ಷಕರು ಕಣ್ತುಂಬಿಸಿಕೊಳ್ಳಬಹುದು. ಇದು ರೀಜೆನ್ಸಿ ಯುಗದ ಪ್ರಣಯ ಸರಣಿಯು ಜೂಲಿಯಾ ಕ್ವಿನ್ ಅವರ ಪುಸ್ತಕಗಳನ್ನು ಆಧರಿಸಿದೆ. ಪ್ರತಿಯೊಂದು ದೃಶ್ಯ ಬ್ರಿಡ್ಜರ್ಟನ್ ಕುಟುಂಬದ ಒಡಹುಟ್ಟಿದವರ ಮೇಲೆ ಕೇಂದ್ರೀಕರಿಸುತ್ತದೆ. ಮೂರನೇ ಸೀಸನ್‌ನಲ್ಲಿ ಪೆನೆಲೋಪ್ ಲೇಡಿ ವಿಸ್ಲ್ ಡೌನ್‌ನ ರಹಸ್ಯ ಗುರುತಿನಿಂದಾಗಿ ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾಳೆ. ಅವಳ ಸತ್ಯ ಬಯಲಾಗುವುದೋ? ಅಥವಾ ಅವಳು ಸುಖವಾಗಿ ಬದುಕುವಳೋ? ಎಂಬುದನ್ನು ನೋಡಬೇಕು. ಇದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

ದೋ ಔರ್ ದೋ ಪ್ಯಾರ್

ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡ ವಿದ್ಯಾ ಬಾಲನ್ ಅವರ ರೊಮ್ಯಾಂಟಿಕ್ ಕಾಮಿಡಿ ಇದೀಗ ಒಟಿಟಿಯಲ್ಲಿ ಕಾಣಿಸಿಕೊಂಡಿದೆ. ʼದೋ ಔರ್ ದೋ ಪ್ಯಾರ್‌ʼನಲ್ಲಿ ಕಾವ್ಯ ಮತ್ತು ಅನಿಯ ಪಾತ್ರದಲ್ಲಿ ವಿದ್ಯಾ ಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ್ದಾರೆ. ಊಟಿ ಪ್ರವಾಸದ ನಂತರ ವಿವಾಹೇತರ ಸಂಬಂಧದಲ್ಲಿ ತೊಡಗಿಕೊಂಡಿದ್ದರೂ ಸಹ ಪರಸ್ಪರ ಪ್ರೀತಿಸುವ ವಿವಾಹಿತ ದಂಪತಿಗಳಂತೆ ಇವರಿಬ್ಬರು ನಟಿಸುತ್ತಾರೆ. ಇದನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ದಿ ಬಾಯ್ಸ್ (ಸೀಸನ್ 4)

ವಿಡಂಬನಾತ್ಮಕ ಸೂಪರ್ ಹೀರೋ ಸರಣಿಯ ʼದಿ ಬಾಯ್ಸ್ʼ ಸೀಸನ್ 4ರ ಮೊದಲ ಮೂರು ಸಂಚಿಕೆಗಳನ್ನು ಗುರುವಾರ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ. ಕಾರ್ಲ್ ಅರ್ಬನ್, ಜ್ಯಾಕ್ ಕ್ವೈಡ್, ಆಂಟೋನಿ ಸ್ಟಾರ್, ಜೆನ್ಸಿ ಟಿ ಉಷರ್, ಎರಿನ್ ಮೊರಿಯಾರ್ಟಿ ಮತ್ತು ಚೇಸ್ ಕ್ರಾಫೋರ್ಡ್ ಹಿಂದಿನ ಪಾತ್ರವರ್ಗದವರಾದರೆ ವ್ಯಾಲೋರಿ ಕರಿ ಮತ್ತು ಸುಸಾನ್ ಹೇವಾರ್ಡ್ ಇಬ್ಬರು ಹೊಸ ಸೂಪರ್ ಹೀರೋಗಳಾಗಿದ್ದಾರೆ. ಇದನ್ನು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ಇದನ್ನೂ ಓದಿ: Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!

ಪ್ರಿಸ್ಯುಮಡ್ ಇನ್ನೊಸೆಂಟ್ (Presumed Innocent)

ಜೇಕ್ ಗಿಲೆನ್ ಹಾಲ್ ʼಪ್ರಿಸ್ಯುಮಡ್ ಇನ್ನೊಸೆಂಟ್‌ʼನಲ್ಲಿ ಕೊಲೆ ಪ್ರಕರಣದಲ್ಲಿನ ಪ್ರಾಸಿಕ್ಯೂಟರ್ ಆಗಿ ನಟಿಸಿದ್ದಾರೆ. ಇದು ಸ್ಕಾಟ್ ಟುರೊವ್ ಅವರ ಕಾದಂಬರಿ ಆಧರಿಸಿದೆ. ನಿಜ ಜೀವನದಲ್ಲಿ ಜೇಕ್‌ನ ಸಹೋದರಿ ಮ್ಯಾಗಿಯನ್ನು ಮದುವೆಯಾಗಿರುವ ಪೀಟರ್ ಸರ್ಸ್ ಗಾರ್ಡ್, ಗಿಲೆನ್ ಹಾಲ್‌ನ ನ್ಯಾಯಾಲಯದಲ್ಲಿ ಎದುರಾಳಿಯಾಗಿ ನಟಿಸಿದ್ದಾರೆ. ಇದನ್ನು ಆಪಲ್ ಟಿವಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

Continue Reading

ಬಾಲಿವುಡ್

Ajay Devgn: ʻಪುಷ್ಪ’ನಿಗೆ ಹೆದರಿದ ‘ಸಿಂಗಂ’; ಅಜಯ್ ದೇವಗನ್ ಸಿನಿಮಾ ರಿಲೀಸ್​ ಪೋಸ್ಟ್‌ಪೋನ್‌?

Ajay Devgn: ಅಜಯ್‌ ದೇವಗನ್‌ ಹೊಸ ಪೋಸ್ಟರ್‌ ಹಂಚಿಕೊಂಡು ಚಿತ್ರ ರಿಲೀಸ್‌ ಡೇಟ್‌ ಮುಂದೂಡಲಾಗಿದೆ ಎಂದು ಘೋಷಿಸಿದ್ದಾರೆ. ಪೋಸ್ಟರ್‌ನಲ್ಲಿ ಚಿತ್ರದ ಶೀರ್ಷಿಕೆ ಮತ್ತು ಅದರಲ್ಲಿ ನಟಿಸಿರುವ ನಟರ ಹೆಸರುಗಳಿವೆ. ಅಜಯ್‌ ಅವರ ಮುಂಬರುವ ‘ಔರಾನ್ ಮೇ ಕಹಾನ್ ದಮ್ ಥಾ’ ಡ್ರೈಲರ್‌ ಬಿಡುಗಡೆಯ ಸಂದರ್ಭದಲ್ಲಿ, ಅಜಯ್ ದೇವಗನ್ ‘ಸಿಂಗಮ್ ಎಗೇನ್’ ಬಿಡುಗಡೆ ಬಗ್ಗೆ ಅಪ್‌ಡೇಟ್ ಕೇಳಿದಾಗ, “ನಮಗೆ ಇನ್ನೂ ಈ ಬಗ್ಗೆ ಖಚಿತವಾಗಿಲ್ಲ ಏಕೆಂದರೆ ಸಿನಿಮಾ ಕೆಲಸ ಇನ್ನೂ ನಡೆಯುತ್ತಿದೆ. ಅದು ಪೂರ್ಣಗೊಂಡಿಲ್ಲ. ಸ್ವಲ್ಪ ಚಿತ್ರೀಕರಣ ಇನ್ನೂ ಉಳಿದಿದೆʼʼಎಂದಿದ್ದರು.

VISTARANEWS.COM


on

Ajay Devgn Singham Again postponed release on Diwali 2024
Koo

ಬೆಂಗಳೂರು: ರೋಹಿತ್ ಶೆಟ್ಟಿ ನಿರ್ದೇಶನ, ಅಜಯ್‌ ದೇವಗನ್‌ ((Ajay Devgn) ) ನಟನೆಯ ‘ಸಿಂಗಂ ಅಗೇನ್‘ ರಿಲೀಸ್‌ ಡೇಟ್‌ ಮುಂದೂಡಲಾಗಿದೆ. 2024ರ ದೀಪಾವಳಿ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಈ ಹಿಂದೆ ಸಿನಿಮಾ ಅಗಸ್ಟ್‌ 15ರಂದು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಚಿತ್ರದ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್‌ ಆಗಿದೆ ಎಂದು ಸ್ವತಃ ಅಜಯ್ ದೇವಗನ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಸೇರಿದಂತೆ ಹಲವು ನಟರನ್ನು ಒಳಗೊಂಡು ಸಿನಿಮಾ ಇದಾಗಿದೆ. ಈ ಸಮಯದಲ್ಲಿ ಅಲ್ಲು ಅರ್ಜನ್​ ಅಭಿನಯದ, ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೆ ಹೆದರಿದ ಸಿಂಗಂ ಚಿತ್ರ ರಿಲೀಸ್ ಡೇಟ್​ ಮುಂದಕ್ಕೆ ಹಾಕಿದೆ.

ಇತ್ತೀಚೆಗೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಸಿಂಗಂ ಎಗೇನ್‌ನ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಕರೀನಾ ಫಸ್ಟ್ ಲುಕ್ ಹೊರಬಂದಿತ್ತು. ಇದೇ ಸಿನಿಮಾದಲ್ಲಿ ಅರ್ಜುನ್​ ಕಪೂರ್​ ಕೂಡ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇರುವುದರಿಂದ ಸಹಜವಾಗಿಯೇ ಹೈಪ್​ ಸೃಷ್ಟಿ ಆಗಿದೆ.

ಅಜಯ್‌ ದೇವಗನ್‌ ಹೊಸ ಪೋಸ್ಟರ್‌ ಹಂಚಿಕೊಂಡು ಚಿತ್ರ ರಿಲೀಸ್‌ ಡೇಟ್‌ ಮುಂದೂಡಲಾಗಿದೆ ಎಂದು ಘೋಷಿಸಿದ್ದಾರೆ. ಪೋಸ್ಟರ್‌ನಲ್ಲಿ ಚಿತ್ರದ ಶೀರ್ಷಿಕೆ ಮತ್ತು ಅದರಲ್ಲಿ ನಟಿಸಿರುವ ನಟರ ಹೆಸರುಗಳಿವೆ. ಅಜಯ್‌ ಅವರ ಮುಂಬರುವ ‘ಔರಾನ್ ಮೇ ಕಹಾನ್ ದಮ್ ಥಾ’ ಟ್ರೈಲರ್‌ ಬಿಡುಗಡೆಯ ಸಂದರ್ಭದಲ್ಲಿ, ಅಜಯ್ ದೇವಗನ್ ‘ಸಿಂಗಮ್ ಎಗೇನ್’ ಬಿಡುಗಡೆ ಬಗ್ಗೆ ಅಪ್‌ಡೇಟ್ ಕೇಳಿದ್ದಾರೆ “ನಮಗೆ ಇನ್ನೂ ಈ ಬಗ್ಗೆ ಖಚಿತವಾಗಿಲ್ಲ ಏಕೆಂದರೆ ಸಿನಿಮಾ ಕೆಲಸ ಇನ್ನೂ ನಡೆಯುತ್ತಿದೆ. ಅದು ಪೂರ್ಣಗೊಂಡಿಲ್ಲ. ಸ್ವಲ್ಪ ಚಿತ್ರೀಕರಣ ಇನ್ನೂ ಉಳಿದಿದೆʼʼಎಂದಿದ್ದರು.

ಇದನ್ನೂ ಓದಿ: Ajay Devgn: ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗ್ತಾ ಇದೆ ಅಜಯ್‌ ದೇವಗನ್‌ ʻಶೈತಾನ್ʼ ಸಿನಿಮಾ

ಒಂದು ಮೂಲದ ಪ್ರಕಾರ ‘ಸಿಂಗಂ ಅಗೇನ್​’ ಸಿನಿಮಾದ ರಿಲೀಸ್ ಡೇಟ್​ ಮುಂದೂಡಿಕೆ ಆಗಲು ‘ಪುಷ್ಪ 2’ ತಂಡದ ಪೈಪೋಟಿ ಕಾರಣ ಎನ್ನಲಾಗಿದೆ. ಈ ಮುಂಚೆ ಚಿತ್ರತಂಡ ದೀಪಿಕಾ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳಿಸಿತ್ತು. ಶಕ್ತಿ ಶೆಟ್ಟಿ ಪಾತ್ರದ ಹೆಸರು.

ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್‌ ಲುಕ್‌ ಕೊಟ್ಟಿದ್ದಾರೆ ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡವು. ನಟ-ಪತಿ ರಣವೀರ್ ಸಿಂಗ್, ಕೂಡ ದೀಪಿಕಾ ಲುಕ್‌ಗೆ ಹೊಗಳಿದ್ದಾರೆ. ಈ ಹಿಂದೆ ವರದಿಯೊಂದು ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿತ್ತು. ಮೂಲ ಪ್ರಕಾರ, “ದೀಪಿಕಾ ಪಡುಕೋಣೆ ರೋಹಿತ್ ಶೆಟ್ಟಿಯವರ ಸಿಂಗಂ ಅಗೇನ್ ಚಿತ್ರಕ್ಕಾಗಿ ಉತ್ಸುಕರಾಗಿದ್ದಾರೆ. ಅವರು ರೋಹಿತ್ ಶೆಟ್ಟಿ ಯೂನಿವರ್ಸ್‌ನ ಮೊದಲ ಮಹಿಳಾ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಾಹಸಮಯ ಭಾಗಕ್ಕಾಗಿ ಈಗಾಗಲೇ ಪೂರ್ವಸಿದ್ಧತೆ ಪ್ರಾರಂಭಿಸಿದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

Continue Reading
Advertisement
World Blood Donor Day Awareness Jatha in Bengaluru
ಕರ್ನಾಟಕ42 seconds ago

World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

World Blood Donor Day
ಆರೋಗ್ಯ14 mins ago

World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

actor Darshan
ಬೆಂಗಳೂರು14 mins ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Money Guide
ಮನಿ-ಗೈಡ್20 mins ago

Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

Anant Ambani Love Letter Printed On Radhika Merchant Pre-Wedding Dress
ಬಾಲಿವುಡ್27 mins ago

Anant Ambani: ಅನಂತ್ ಅಂಬಾನಿ ಕೊಟ್ಟ ಪ್ರೇಮ ಪತ್ರ ಪ್ರಿಂಟ್ ಆಗಿದ್ದ ಗೌನ್‌ನಲ್ಲಿ ಮಿಂಚಿದ ರಾಧಿಕಾ ಮರ್ಚಂಟ್‌!

E. Tukaram
ಕರ್ನಾಟಕ35 mins ago

E. Tukaram: ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಈ. ತುಕಾರಾಂ

INDW vs SAW
ಕ್ರೀಡೆ42 mins ago

INDW vs SAW: ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ ಮಹಿಳಾ ತಂಡ; ಕನ್ನಡದಲ್ಲೇ ತಂಡದ ಸಿದ್ಧತೆ ವಿವರಿಸಿದ ಶ್ರೇಯಾಂಕಾ

Actor Darshan
ಸಿನಿಮಾ47 mins ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

Pawan Kalyan Fan Narendra cut hairs after Five Years
ಟಾಲಿವುಡ್55 mins ago

Pawan Kalyan: ಪವನ್‌ ಕಲ್ಯಾಣ್‌ ಗೆದ್ದ ಬಳಿಕ ತಲೆಗೂದಲಿಗೆ ಕತ್ತರಿ ಹಾಕಿದ ಡೈ ಹಾರ್ಡ್​ ಫ್ಯಾನ್!

Arun Somanna
ಕರ್ನಾಟಕ1 hour ago

Arun Somanna: ವಂಚನೆ, ಜೀವ ಬೆದರಿಕೆ; ಕೇಂದ್ರ ಸಚಿವ ಸೋಮಣ್ಣ ಪುತ್ರನ ಮೇಲೆ ಎಫ್‌ಐಆ‌ರ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌