ಬೆಂಗಳೂರು : ಈ ವರ್ಷ ಹಲವು ಚಿತ್ರಗಳು ತೆರೆ ಕಾಣಲಿದ್ದು, ಬಾಕ್ಸ್ ಆಫಿಸ್‌ನಲ್ಲಿ ಯಾವುದು ಹೆಚ್ಚು ಗುಲ್ಲೆಬ್ಬಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್, ಅಡವಿ ಶೇಷ್ ನಟಿಸಿರುವ ಮೇಜರ್ ಮತ್ತು ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾಗಳು ಜೂನ್ 3 ರಂದು ತೆರೆ ಕಾಣುತ್ತಿವೆ. ಯಾವುದನ್ನು ನೋಡಬೇಕು, ಯಾವುದನ್ನು ಬಿಡಬೇಕು ಎಂಬ ಕನಪ್ಯೂಸ್‌ನಲ್ಲಿ ಫ್ಯಾನ್‌ಗಳಿದ್ದಾರೆ ಇದ್ದಾರೆ.
ಪೃಥ್ವಿರಾಜ್ ಸಿನಿಮಾ ಹಿಂದಿ ಸಿನಿಮಾವಾಗಿದ್ದು, ತೆಲಗು ಮತ್ತು ತಮಿಳಿನಲ್ಲಿಯೂ ರಿಲೀಸ್ ಆಗುತ್ತಿದೆ. ಮೇಜರ್ ಸಿನಿಮಾ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲಗುವಿನಲ್ಲಿ ತೆರೆ ಕಾಣುತ್ತಿದೆ. ವಿಕ್ರಮ್ ಕೂಡ ಹಿಂದಿ ಮತ್ತು ತಮಿಳಿನಲ್ಲಿ ತೆರೆ ಕಾಣುತ್ತಿದ್ದು, ಎಲ್ಲವೂ ಒಂದೇ ದಿನ ಎಲ್ಲಾ ಭಾಷೆಗಳಲ್ಲಿ ಒಂದೇ ಬಾರಿಗೆ ರಿಲೀಸ್ ಆದರೆ ಬಾಕ್ಸ್ ಆಫಿಸ್‌ನಲ್ಲಿ ಜಿದ್ದಾಜಿದ್ದಿ ಆಗುತ್ತದೆಯೇ ಎಂಬ ಸಂಶಯಗಳು ಮೂಡುತ್ತಿದೆ.
ಇದನ್ನೂ ಓದಿ | ಬಿಡುಗಡೆ ಆಯಿತು ಪೃಥ್ವಿರಾಜ್ ಟ್ರೇಲರ್, ಮಿಂಚಿದರು ಅಕ್ಷಯ್, ಮಾನುಷಿ ಛಿಲ್ಲರ್
ಈ ಹಿಂದೆ ಅಕ್ಷಯ್ ಕುಮಾರ್ ಸಂವಾದ ಒಂದರಲ್ಲಿ ಮಾತನಾಡುತ್ತ, ʼಪ್ರತಿಯೊಬ್ಬರು ಚಲಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಸಂತಸದ ವಿಷಯ. ಯಾರೊಬ್ಬರ ಚಿತ್ರಗಳನ್ನು ತೆರೆ ಕಾಣುವುದನ್ನು ತಡೆಯಲು ಸಾದ್ಯವಿಲ್ಲ. ಪ್ರತೀ ಚಿತ್ರದ ಹಿಂದೆ ಬ್ಯುಸಿನೆಸ್ ಇದ್ದೇ ಇರುತ್ತದೆ. ಯಾರೂ ಒಂದಾಗಿ ಇರಲು ಸಾಧ್ಯವಿಲ್ಲ. ಆದರೆ ಅಶಾದಾಯಕವಾಗಿ ಕಲಿಯಬೇಕಷ್ಟೆʼ ಎಂದಿದ್ದರು.
ಅಡವಿ ಕೂಡ ಕಾರ್ಯಕ್ರಮವೊಂದರಲ್ಲಿ ಬಾಕ್ಸ್ ಆಫೀಸ್ ಕುರಿತು ಮಾತನಾಡಿದ್ದರು. ʼಪ್ರಾಯೋಗಿಕವಾಗಿ ಹೇಳುವುದಾದರೆ, ತೆಲುಗಿನಲ್ಲಿ ನಮ್ಮದು ದೊಡ್ಡ ಚಿತ್ರ, ತಮಿಳಿನಲ್ಲಿ ವಿಕ್ರಮ್ ಮತ್ತು ಹಿಂದಿಯಲ್ಲಿ ಪೃಥ್ವಿರಾಜ್ ಅತಿದೊಡ್ಡ ಚಿತ್ರ, ಆದರೆ ಸಮುದ್ರದಲ್ಲಿ ದೊಡ್ಡ ಮೀನುಗಳಿದ್ದರೂ ನಾವು ಗೋಲ್ಡ್ ಫಿಷ್” ಎಂದು ನಟ ಹೇಳಿದ್ದರು.
ಎಲ್ಲಾ ಸಿನಿಮಾಗಳ ಟ್ರೈಲರ್ ನೋಡುವಾಗ ತೆಲುಗು ಮತ್ತು ತಮಿಳು ಚಲನಚಿತ್ರೋದ್ಯಮದ ತಾರೆಗಳನ್ನು ಒಳಗೊಂಡಿವೆ. ಇದೀಗ ಸಖತ್ ಕುತೂಹಲ ಇದ್ದು, ಬಾಕ್ಸ್ ಆಪೀಸ್ ರೇಸ್‌ನಲ್ಲಿ ಯಾವುದು ಗೆಲ್ಲುತ್ತದೆ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ | Major : ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ ಟ್ರೈಲರ್ ಔಟ್