Site icon Vistara News

Crazy Fellow : ಡಿಂಪಲ್‌ ಹೀರೋ ಈಗ ‘ಕ್ರೇಜಿ ಫೆಲೋ’

Adi saikumar

ಬೆಂಗಳೂರು : ಆದಿ ಸಾಯಿಕುಮಾರ್‌ ತುಂಬಾ ದಿನಗಳ ನಂತರ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಯುವಕರನ್ನು ಹೆಚ್ಚಾಗಿ ಸೆಳೆಯೋ ಆದಿ ಹೆಣ್ಣು ಮಕ್ಕಳ ಡಿಂಪಲ್‌ ಹೀರೋ. ʼಜೋಡಿʼ ಸಿನಿಮಾದ ಮೂಲಕ ಎಲ್ಲರನ್ನು ಸೆಳೆದಿದ್ದ, ಆದಿ ಸಾಯಿಕುಮಾರ್‌ ಮತ್ತೆ ಬಣ್ಣವನ್ನು ಹಚ್ಚಲಿದ್ದಾರೆ.

ಹೌದು , ಶೀರ್ಷಿಕೆಯೇ ತುಂಬಾ ಅಟ್ರ್ಯಾಕ್ಟಿವ್‌ ಆಗಿದ್ದು, ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಹಾಗಾದರೆ ಸಿನಿಮಾ ಯಾವುದು ಅಂತೀರಾ? ಅದುವೇ ʼಕ್ರೇಜಿ ಫೆಲೋʼ . ಹೌದು ಈ ಚಿತ್ರದ ಪೋಸ್ಟರ್‌ ನೋಡುವಾಗಲೇ ಮತ್ತೆ ಯುವಕ ಯುವತಿಯರನ್ನ ಆದಿ ಸಾಯಿಕುಮಾರ್‌ ಅವರು ಸೆಳೆಯೋದರಲ್ಲಿ ಸಂಶಯವೇ ಇಲ್ಲ.

ಕೆಕೆ ರಾಧಾ ಸಿನಿಮಾಗೆ ಬಂಡವಾಳ ಹೂಡಿದ್ದು, ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ. ದಿಗಂಗನಾ ಸೂರ್ಯವಂಶಿ ಮತ್ತು ಮಿರ್ನಾ ಮೆನನ್ ಈ ರೊಮ್ಯಾಂಟಿಕ್ ಎಂಟರ್‌ಟೈನರ್‌ನಲ್ಲಿ ನಾಯಕಿಯರಾಗಿದ್ದು, ಹಾಸ್ಯನಟ ಸಪ್ತಗಿರಿ, ನರ ಶ್ರೀನಿವಾಸ್, ಅನೀಶ್ ಕುರುವಿಲ್ಲಾ, ವಿನೋದಿನಿ ವೈದ್ಯನಾಥನ್, ರವಿ ಪ್ರಕಾಶ್ ಮತ್ತು ಇತರರು ಚಿತ್ರದಲ್ಲಿ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಚಿತ್ರವನ್ನು ಫಣಿ ಕೃಷ್ಣ ಸಿರಿಕಿ ನಿರ್ದೇಶಿಸುತ್ತಿದ್ದು, ಆರ್‌ಆರ್ ಧ್ರುವನ್ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅತಿಥಿ ದೇವೋಭವ’, ‘ಜಂಗಲ್’, ‘ಕಿರಾತಕ’, ‘ಸಿಎಸ್‌ಐ ಸನಾತನ’, ‘ಅಮರನ್ ಇನ್ ಸಿಟಿ: ಅಧ್ಯಾಯ 1ʼ ಮತ್ತು ‘ಕಪ್ಪು’ ಮೂಲಕ ಸಿನಿಮಾದಲ್ಲಿ ಖ್ಯಾತಿ ಪಡೆದ ಆದಿ ಸಾಯಿಕುಮಾರ್‌ ಈ ಸಿನಿಮಾ ಹೇಗೆ ಬರಲಿದೆ ಎಂಬುದು ಕಾದು ನೋಡಬೇಕಿದೆ.

Exit mobile version