ನವದೆಹಲಿ : ಮುಂಬಯಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕತೆಯನ್ನು ಆಧರಿಸಿದ ʼಮೇಜರ್ʼ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್‌ನಲ್ಲಿ ಉಗ್ರರು ದಾಳಿ ನಡೆಸಿದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ದುರ್ಘಟನೆಯಲ್ಲಿ ಉಗ್ರರನ್ನು ತಡೆಯಲು ಹೋರಾಡಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ವಿವರಗಳನ್ನೇ ಇಟ್ಟುಕೊಂಡು ‘ಮೇಜರ್’ ಸಿನಿಮಾ ಬರುತ್ತಿದ್ದು, ಇದೀಗ ಟ್ರೈಲರ್ ರಿಲೀಸ್ ಆಗಿದೆ.
ಈ ಸಿನಿಮಾದ ಟ್ರೈಲರ್‌ಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಸಲ್ಮಾನ್ ಖಾನ್ ಹಿಂದಿಯಲ್ಲಿ ಮತ್ತು ಪೃಥ್ವಿರಾಜ್ ಮಲಯಾಳಂನಲ್ಲಿ ರಿಲೀಸ್ ಮಾಡಿದ್ರೆ, ಹೈದರಾಬಾದ್‌ನಲ್ಲಿ ನಡೆದ ಟ್ರೈಲರ್ ಗ್ರಾಂಡ್ ಇವೆಂಟ್‌ನಲ್ಲಿ ತೆಲುಗು ಟ್ರೈಲರನ್ನು ಮಹೇಶ್ ಬಾಬು ರಿಲೀಸ್ ಮಾಡಿದ್ದಾರೆ. ಅಂದ ಹಾಗೆ ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರಕ್ಕೆ ಬಣ್ಣ ಹಚ್ಚುತ್ತಾ ಇರೋರು ನಟ ಅಡವಿ ಶೇಷ್ ಅನ್ನೋದು ವಿಶೇಷ.
ಇದನ್ನೂ ಓದಿ : ʼದೇವರ ಪುತ್ರಿʼ ಬಾಲಿವುಡ್ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ
ʼಟ್ರೇಲರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ವಿವಿಧ ಹಂತಗಳ ಚಿತ್ರಣಗಳನ್ನು ನೀಡುತ್ತದೆ. ಪ್ರೇಕ್ಷಕರಿಗೆ ಅವರ ಸ್ಪೂರ್ತಿದಾಯಕ ಜೀವನ ಪ್ರಯಾಣದ ಹೇಳಲಾಗದ ಅಧ್ಯಾಯಗಳ ಆಳವಾದ ಒಳನೋಟವನ್ನು ಸಿನಿಮಾ ನೀಡುತ್ತದೆʼ ಎಂದು ನಟ ಸಲ್ಮಾನ್ ಖಾನ್ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಹೇಳಿದ್ದಾರೆ.
ಟ್ರೈಲರ್ ಸಂದೀಪ್ ಉನ್ನಿಕೃಷ್ಣನ್ ಬದುಕಿನ ಕ್ಷಣಗಳು ಹಾಗೂ ದುರದೃಷ್ಟಕರ ಭಯೋತ್ಪಾದನಾ ದಾಳಿಯ ಹಿಂದಿನ ಕಥೆಯನ್ನು ಬಿಚ್ಚಿಡುವಂತೆ ಇದ್ದು, ಅವರ ಸಾಹಸಕ್ಕೆ ಗೌರವ ಸಲ್ಲಿಸುಂತೆ ಚಿತ್ರಿತವಾಗಿದೆ. ಮೇಜರ್ ಸಿನಿಮಾ ಚಿತ್ರೀಕರಣ 120 ದಿನಗಳು ತೆಗೆದುಕೊಂಡಿದ್ದು, 75ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಿಂದೆ ಜುಲೈ 2021 ರಲ್ಲಿ ರಿಲೀಸ್ ಮಾಡಲು ಚಿತ್ರತಂಡ ಡಿಸೈಡ್ ಮಾಡಿತ್ತು. ಕಾರಣಾಂತರದಿಂದ ತಡವಾಗಿದ್ದು ಇದೀಗ ಮೂರು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿ ಜನರನ್ನು ರಂಜಿಸಲಿವೆ.
ಕಳೆದ ಡಿಸೆಂಬರ್ 17ರಂದು ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಆಗಿತ್ತು. ತೆಲುಗು, ಹಿಂದಿ ಹಾಗೂ ಮಲೆಯಾಳಂ ಮೂರು ಭಾಷೆಗಳಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸಂದೀಪ್ ಅವರ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ, ಅವರ ತಂದೆ-ತಾಯಿಯ ಅನುಮತಿ ಪಡೆದುಕೊಂಡು ಬಯೋಪಿಕ್ ಮಾಡಲು ಅಡವಿ ಶೇಷ್ ನಿರ್ಧರಿಸಿದರು. ತೆರೆಮೇಲೆ ಸಂದೀಪ್ ರೀತಿಯೇ ಕಾಣಲು ಅವರು ತುಂಬ ಶ್ರಮ ಕೂಡ ಪಟ್ಟಿದ್ದಾರೆ.
ಇದೇ ಜೂನ್ 3 ರಂದು ಚಿತ್ರ ಮೂರು ಭಾಷೆಗಳಲ್ಲಿ ಬಿಡುಗೊಡೆಗೊಳ್ಳುತ್ತಿದೆ. ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್, ಜಿ. ಮಹೇಶ್ ಬಾಬು ಎಂಟರ್‌ಟೈನ್‌ಮೆಂಟ್ ಮತ್ತು ಎ+ಎಸ್ ಮೂವೀಸ್ ಪ್ರೊಡಕ್ಷನ್ ಅಡಿಯಲ್ಲಿ ಮೇಜರ್ ಸಿನಿಮಾವನ್ನು ಶಶಿ ಕಿರಣ್ ಟಿಕ್ಕಾ ನಿರ್ದೇಶಿಸಿದ್ದಾರೆ. ಸಾಯಿ ಮಂಜ್ರೇಕರ್, ಸೋಭಿತಾ ಧೂಳಿಪಾಲ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : KGF Chapter – 3 ಬರುತ್ತಾ?: ಹಿಂಟ್ ಕೊಟ್ಟ ರಾಕಿ ಭಾಯ್