Site icon Vistara News

Oscars 2023: ಕ್ಲಾಸಿಕ್‌ ಕಪ್ಪು ಗೌನ್‌ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

dp1

ಲಾಸ್ ಏಂಜಲೀಸ್:‌ ಪ್ರತಿಷ್ಠಿತ ಅಕಾಡೆಮಿ (ಆಸ್ಕರ್‌) ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯ ಮೇಲೆ ಭಾರತೀಯ ನಟಿ ದೀಪಿಕ ಪಡುಕೋಣೆ ಪ್ರಶಸ್ತಿ ಪ್ರದಾನ ಮಾಡುವವರಾಗಿ ಇತಿಹಾಸ ಸೃಷ್ಟಿಸಿದರು. ಕ್ಲಾಸಿಕ್‌ ಕಪ್ಪು ಗೌನ್‌ನಲ್ಲಿ ದೀಪಿಕಾ ಮಿಂಚಿದ್ದಾರೆ.

ದೀಪಿಕಾ ಆಸ್ಕರ್‌ ಪ್ರದಾನ ಮಾಡುತ್ತಿರುವ ಮೂರನೇ ಭಾರತೀಯ ವ್ಯಕ್ತಿ. ಈ ಹಿಂದೆ ಪರ್ಸಿಸ್‌ ಖಂಬಾಟಾ ಮತ್ತು ಪ್ರಿಯಾಂಕ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಿದ್ದರು.

ಆಸ್ಕರ್‌ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಇನ್‌ಸ್ಟಗ್ರಾಮ್‌ನಲ್ಲಿ ತಮ್ಮ ಕ್ಲಾಸಿಕ್‌ ಕಪ್ಪು ಗೌನ್‌ನ ಲುಕ್‌ ಅನ್ನು ದೀಪಿಕಾ ರಿವೀಲ್‌ ಮಾಡಿದರು. ಸ್ಲೀವ್‌ಲೆಸ್‌ ಕಪ್ಪು ಗೌನ್‌ ಹಾಗೂ ಹಳದಿ ಪೆಂಡೆಂಟ್‌ ಹೊಂದಿದ ನೆಕ್‌ಲೇಸ್‌ ಅನ್ನು ಧರಿಸಿ ಅವರು ಮಿಂಚಿದರು.

Exit mobile version