Site icon Vistara News

Grammy Awards 2024: ಶಂಕರ್‌ ಮಹದೇವನ್‌ ‘ಶಕ್ತಿ ಬ್ಯಾಂಡ್‌’ಗೆ ಗ್ರ್ಯಾಮಿ ಪ್ರಶಸ್ತಿ ಗರಿ!

Shankar Mahadevan band Shakti bagged Grammy

ಬೆಂಗಳೂರು: ಶಂಕರ್ ಮಹದೇವನ್ (Shankar Mahadevan) ಮತ್ತು ಜಾಕಿರ್ ಹುಸೇನ್ (Zakir Hussain) ಅವರ ʻಬ್ಯಾಂಡ್ ಶಕ್ತಿʼ ಆಲ್ಬಂ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬ್ಯಾಂಡ್‌ ಶಕ್ತಿಯ ‘ದಿ ಮೂಮೆಂಟ್’‌ (This Moment) ಆಲ್ಬಂಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಈ ಗುಂಪಿನಲ್ಲಿ ಗಿಟಾರ್ ವಾದಕ ಜಾನ್ ಮೆಕ್ಲಾಫ್ಲಿನ್, ಗಾಯಕ ಶಂಕರ್ ಮಹದೇವನ್, ತಾಳವಾದ್ಯ ವಾದಕ ವಿ ಸೆಲ್ವಗಣೇಶ್ ಮತ್ತು ಪಿಟೀಲು ವಾದಕ ಗಣೇಶ್ ರಾಜಗೋಪಾಲನ್ ಕೂಡ ಇದ್ದಾರೆ.  ಮೂರು ಬಾರಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮ್ಯೂಸಿಕ್‌ ಪುರಸ್ಕಾರ ಗ್ರ್ಯಾಮಿ ಅವಾರ್ಡ್‌ ಗೆದ್ದಿರುವ ಸಂಗೀತ ನಿರ್ದೇಶಕ ಮತ್ತು ಪರಿಸರವಾದಿ ರಿಕ್ಕಿ ಕೇಜ್ (Ricky Kej) ಅವರು ಟೀಮ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತೀಯ ಸಂಗೀತ ಸಂಯೋಜಕ ಮತ್ತು ʻಗ್ರ್ಯಾಮಿʼ ವಿಜೇತ ರಿಕಿ ಕೇಜ್ ಅವರು ವೇದಿಕೆಯಲ್ಲಿ ಅಭಿನಂದಿಸಿದರು. ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಕೇಜ್, “ಶಕ್ತಿ ಗ್ರ್ಯಾಮಿಯನ್ನು ಗೆದ್ದಿದೆ!!! ಈ ಆಲ್ಬಂ ಮೂಲಕ 4 ಅದ್ಭುತ ಭಾರತೀಯ ಸಂಗೀತಗಾರರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ!!. ಭಾರತ ಎಲ್ಲ ದಿಕ್ಕುಗಳಲ್ಲಿಯೂ ಮಿಂಚುತ್ತಿದೆ. ಶಂಕರ್ ಮಹದೇವನ್, ಸೆಲ್ವಗಣೇಶ್ ವಿನಾಯಕ್, ಗಣೇಶ್ ರಾಜಗೋಪಾಲನ್, ಉಸ್ತಾದ್ ಜಾಕಿರ್ ಹುಸೇನ್. ಉಸ್ತಾದ್ ಜಾಕಿರ್ ಹುಸೇನ್ ಅವರು ಕಲಾತ್ಮಕ ಕೊಳಲು ವಾದಕ ರಾಕೇಶ್ ಚೌರಾಸಿಯಾ ಅವರೊಂದಿಗೆ ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದರು. ಬ್ರಿಲಿಯಂಟ್. ಇಂಡಿಯಾ ವಿನ್‌ ಗ್ರ್ಯಾಮಿʼಎಂದು ಬರೆದುಕೊಂಡಿದ್ದಾರೆ.

ಶಂಕರ್ ಮಹದೇವನ್ ಅವರು ಭಾಷಣದಲ್ಲಿ ಪತ್ನಿಯ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಶಂಕರ್ ಮಹದೇವನ್ ಮಾತನಾಡಿ ʻʻನನ್ನ ಕುಟುಂಬ, ಸ್ನೇಹಿತರು ಮತ್ತು ದೇವರಿಗೆ ಹಾಗೂ ಭಾರತಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಭಾರತದ ಬಗ್ಗೆ ನಮಗೆ ಹೆಮ್ಮೆ ಇದೆ. ನನ್ನ ಈ ಸಂಗೀತಕ್ಕೆ ಬೆನ್ನೆಲುಬಾಗಿರುವ ನನ್ನ ಹೆಂಡತಿಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆʼʼ ಎಂದು ಶಂಕರ್ ಹೇಳಿದರು.

ಇದನ್ನೂ ಓದಿ: ಮೋದಿ ಇರುವ ಸಿರಿಧಾನ್ಯಗಳ ಹಾಡು ಗ್ರ್ಯಾಮಿ ಅವಾರ್ಡ್‌ಗೆ ನಾಮಿನೇಟ್!

ಗ್ರ್ಯಾಮಿ ಎಂದರೇನು?

ಅಮೆರಿಕದ ರೆಕಾರ್ಡಿಂಗ್‌ ಅಕಾಡೆಮಿ ಎಂಬ ಸಂಸ್ಥೆ ಕಳೆದ 62 ವರ್ಷಗಳಿಂದ ಅತ್ಯುತ್ತಮ ಸಂಗೀತ ಸಾಧಕರಿಗೆ ನೀಡುತ್ತಾ ಬಂದಿರುವ ಪ್ರತಿಷ್ಠಿತ ಪ್ರಶಸ್ತಿಯಿದು. ಗ್ರಾಮೋಫೋನ್‌ ಅವಾರ್ಡ್ಸ್ ಎಂಬುದು ಪೂರ್ಣ ಹೆಸರು. ಈ ಬಾರಿ ಅಮೆರಿಕ ಗಾಯಕ ಮೈಲಿಸೈರಸ್‌ ಅವರಿಗೆ ಮೊದಲ ಗ್ರ್ಯಾಮಿ ಸಿಕ್ಕಿದೆ. ಫ್ಲವರ್ಸ್‌ ಆಲ್ಬಂಗೆ ಬೆಸ್ಟ್‌ ಪಾಪ್‌ ಸೋಲೊ ಪ್ರಶಸ್ತಿ ಲಭಿಸಿದೆ.

Exit mobile version