Site icon Vistara News

Dhanush | ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಧನುಷ್‌

Dhanush

ಬೆಂಗಳೂರು: ತಮ್ಮ ನಟನೆಯ ಮೂಲಕ ಕೋಟ್ಯಂತರ ಜನರ ಮನ ಗೆದ್ದಿರುವ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಧನುಷ್‌ (Dhanush) ಅವರ ಜನುಮ ದಿನ ಇಂದು (ಗುರುವಾರ ಜು.28). ಕೇವಲ ತಮಿಳು ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ನಟನೆಯ ʻಅಸುರನ್ʼ (Asuran) ಸಿನಿಮಾಗೆ ಈಗಾಗಲೇ ರಾಷ್ಟ್ರೀಯ ಪ್ರಶಸ್ತಿ​ ಬಂದಿದೆ.

ಧನುಷ್‌ ಜು.28, 1983ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಇವರ ತಂದೆ ಕಸ್ತೂರಿ ರಾಜ್ ಮತ್ತು ತಾಯಿ ವಿಜಯಲಕ್ಷ್ಮೀ. ಇವರ ಪ್ರಥಮ ಚಿತ್ರ  Thulluvadho Ilamai 2002ರಲ್ಲಿ ತೆರೆ ಕಂಡಿತು. ಇವರು ‘ಆಡುಕಾಲಂ'(aadukalam) ಎಂಬ ಚಿತ್ರದಲ್ಲಿನ ನಟನೆಗೆ ಉತ್ತಮ ನಾಯಕ ನಟ ಪ್ರಶಸ್ತಿ ಪಡೆದಿದ್ದರು. ʻವೈ ದಿಸ್ ಕೊಲವರಿ ಡಿʼ ಎಂಬ ಹಾಡಿಗೆ ಅಂತಾರಾಷ್ಟ್ರೀಯ ಜನಪ್ರಿಯತೆ ದೊರಕಿದೆ. ೧೦ ಕೋಟಿಗಿಂತ ಹೆಚ್ಚು ಜನರು ಯೂಟ್ಯೂಬಿನಲ್ಲಿ ವೀಕ್ಷಿಸಿದ ಮೊದಲನೆಯ ಭಾರತೀಯ ವಿಡಿಯೊ ಇದಾಗಿದೆ.

ಇದನ್ನೂ ಓದಿ | Captain Miller Film | ಐತಿಹಾಸಿಕ ಕಥೆಯೊಂದಿಗೆ ಬರುತ್ತಿದ್ದಾರೆ ನಟ ಧನುಷ್‌: ಸೆಟ್ಟೇರಲಿದೆ ಕ್ಯಾಪ್ಟನ್ ಮಿಲ್ಲರ್

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರನ್ನು ವರಿಸಿದ ಇವರು ಇದೀಗ ವಿಚ್ಛೇದನ ಪಡೆದಿದ್ದಾರೆ.

ಸಿನಿಮಾ ರಂಗಕ್ಕೆ ಮಾಸ್‌ ಎಂಟ್ರಿ

ಧನುಷ್‌ ಅವರು thulluvatho ilamai ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ವರ ವೆಟ್ರಿಮರನ್ ಚಿತ್ರಕ್ಕೆ 58ನೇ ನ್ಯಾಷನಲ್ ಫಿಲ್ಮ್‌ ಅವಾರ್ಡ್ ಮತ್ತು ನ್ಯಾಷನಲ್ ಫಿಲ್ಮ್‌ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಲಭಿಸಿದೆ. ಇವರ ಸೇಡಂ, ಮಪ್ಪಿಲ್ಲಯ್ಯ, ಮತಕ್ಕಮ್ ಎನ್ನ, ತ್ರೀ ಚಿತ್ರದ ವೈ ದಿಸ್ ಕೊಲವರಿ ಡಿ ಹಾಡು ಹೆಸರನ್ನು ಮಾಡಿದೆ.

ಹಾಲಿವುಡ್‌ನಲ್ಲಿ ಧನುಷ್‌

ಹಾಲಿವುಡ್‌ನಲ್ಲಿ ‘ಕ್ಯಾಪ್ಟನ್ ಅಮೆರಿಕ’, ‘ಅವೆಂಜರ್ಸ್‌’ ಸರಣಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ರುಸ್ಸೋ ಬ್ರದರ್ಸ್ (ಆಂಟನಿ ರುಸ್ಸೋ-ಜೋಸೆಫ್‌ ರುಸ್ಸೋ) ಈಗ ‘ದಿ ಗ್ರೇ ಮ್ಯಾನ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ನಟ ಧನುಷ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಜುಲೈ 22ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿತ್ತು.

ಕಾಲಿವುಡ್‌ ಅಲ್ಲದೆ ಹಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಧನುಷ್‌ ಮುಂಬರುವ ಚಿತ್ರ ಐತಿಹಾಸಿಕ ಕಥಾ ಹಂದರವನ್ನು ಹೊಂದಿರುವ ‘ಕ್ಯಾಪ್ಟನ್ ಮಿಲ್ಲರ್’ (Captain Miller Film) ಮೂಲಕ ತೆರೆ ಮೇಲೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಅರುಣ್‌ ಮಾಥೇಶ್ವರನ್‌ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರ 1930 ಮತ್ತು 40ರ ದಶಕದ ಮದ್ರಾಸ್‌ ಪ್ರೆಸಿಡೆನ್ಸಿ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣ, ನಾಗೂರನ್ ಅವರ ಸಂಕಲನ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ. ಸತ್ಯಜ್ಯೋತಿ ಫಿಲ್ಮ್ಸ್‌ನ ಸೆಂಧಿಲ್‌ ತ್ಯಾಗರಾಜನ್‌ ಮತ್ತು ಅರ್ಜುನ್‌ ತ್ಯಾಗರಾಜನ್‌ ನಿರ್ಮಿಸಿರುವ ಕ್ಯಾಪ್ಟನ್‌ ಮಿಲ್ಲರ್‌ 2023ರಲ್ಲಿ ತೆರೆ ಕಾಣಲಿದೆ.

ಹುಟ್ಟು ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ಪೋಸ್ಟರ್‌ ರಿವೀಲ್‌ ಆಗಿದ್ದು, ಈಗಾಗಲೇ ಅವರ ಮುಂಬರುವ ಚಿತ್ರ “ವಾತಿʼ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಗುರುವಾರ (ಜು.28) ಟೀಸರ್‌ ಬಿಡುಗಡೆ ಆಗಲಿದೆ.

ಚಿತ್ರದ ನಿರ್ಮಾಪಕ ವೆಂಕಿ ಅಟ್ಲೂರಿ ಮಾತನಾಡಿ “ಈ ಚಿತ್ರದಲ್ಲಿ ಧನುಷ್ ಉಪನ್ಯಾಸಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಶಿಕ್ಷಣ ವ್ಯವಸ್ಥೆಯ ಸುತ್ತ ಸುತ್ತುತ್ತದೆ‌. ಇದು ಏಕಕಾಲದಲ್ಲಿ ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ಜಿ ವಿ ಪ್ರಕಾಶ್ ಅವರ ಸಂಗೀತ ಮತ್ತು ಯುವರಾಜ್ ಅವರ ಛಾಯಾಗ್ರಹಣವು ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ.” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Chandramukhi-2 | ಸೂಪರ್‌ ಸ್ಟಾರ್‌ ರಜನಿಕಾಂತ್‌ ಆಶೀರ್ವಾದದೊಂದಿಗೆ ಚಂದ್ರಮುಖಿ-2 ಶೂಟಿಂಗ್‌ ಕಿಕ್‌ ಸ್ಟಾರ್ಟ್‌

Exit mobile version