ಬೆಂಗಳೂರು : ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) – ಇದು ಚಲನಚಿತ್ರಗಳು, ಟಿವಿ ಶೋಗಳು, ವಿಡಿಯೋ ಗೇಮ್‌ಗಳು, ನಟರು, ನಿರ್ದೇಶಕರು ಮತ್ತು ಇತರ ಚಲನಚಿತ್ರ ಉದ್ಯಮದ ವೃತ್ತಿಪರರ ಬಗ್ಗೆ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಒಳಗೊಂಡಿರುವ ಆನ್‌ಲೈನ್ ಡೇಟಾಬೇಸ್ ಆಗಿದೆ. IMDb ಇದುವರೆಗಿನ ವರ್ಷದ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು (IMDb top 10 films) ಬಿಡುಗಡೆ ಮಾಡಿದೆ.
(ಜ.1, 2022) ಮತ್ತು (ಜು. 5, 2022ರ) ನಡುವೆ ಬಿಡುಗಡೆಯಾದ ಶೀರ್ಷಿಕೆಗಳನ್ನು ಒಳಗೊಂಡಿದೆ. ಇದು IMDbನಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ಪಡೆದ ಚಲನಚಿತ್ರಗಳನ್ನು ಒಳಗೊಂಡಿದೆ.
ಇದನ್ನೂ ಓದಿ | Upcoming Kannada Movie | ಕನ್ನಡದ ಎಂಟು ಸಿನಿಮಾಗಳು ತೆರೆಗೆ: ಇದು ಸಿನಿ ರಸಿಕರ ವಾರ
1. ವಿಕ್ರಮ್ (Vikram): ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (8.6)
ಕಮಲ್ ಹಾಸನ್ ಅವರ ಹಿಟ್ ಸಿನಿಮಾ ವಿಕ್ರಮ್ ಜುಲೈ 8ಕ್ಕೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ವೀಕ್ಷಣೆಗೆ ಲಭ್ಯವಾಗಿತ್ತು.`’ವಿಕ್ರಮ್ʼ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಕೂಡ ಮಿಂಚಿದ್ದರು. ವಿಶ್ವಾದ್ಯಂತ 400 ಕೋಟಿ ರೂ. ಗಳಿಸಿತ್ತು.
2. ಕೆಜಿಎಫ್-2 (KGF Chapter 2) : ಅಮೇಜಾನ್ ಪ್ರೈಂ (8.5)
ನಿರ್ದೇಶಕ ಪ್ರಶಾಂತ್ ನೀಲ್ ಅವರ ಚಿತ್ರ ಕೆಜಿಎಫ್-2 ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸುದ್ದಿ ಮಾಡಿತ್ತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾದಲ್ಲಿ ಸಂಜಯ್ ದತ್ ಅಧೀರ ಪಾತ್ರದಲ್ಲಿ ಮಿಂಚಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ವಿಶ್ವಾದ್ಯಂತ ಬಿಡುಗಡೆಗೊಂಡಿತ್ತು. ಇದರ IMDb ರೇಟಿಂಗ್ 8.5 ಆಗಿದೆ.
3. ಕಾಶ್ಮೀರ್ ಫೈಲ್ಸ್ (The Kashmir Files) : ಜೀ5 (8.3)
ವಿವೇಕ್ ಅಗ್ನಿಹೋತ್ರ ನಿರ್ದೇಶನದಲ್ಲಿ ಬಂದ ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ದೇಶಾದ್ಯಂತ ಹವಾ ಕ್ರಿಯೇಟ್ ಮಾಡಿದ್ದಲ್ಲದೆ ಈ ಸಿನಿಮಾಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ತೆರಿಗೆ ವಿನಾಯಿತಿಯನ್ನೂ ಸಹ ನೀಡಿದ್ದರು. ನಾನಾ ದೇಶಗಳಲ್ಲಿ, ರಾಜ್ಯಗಳಲ್ಲಿ ಯಶಸ್ವಿ ಪ್ರದರ್ಶನವನ್ನೂ ಕಂಡಿತ್ತು. 1990ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂದೂಗಳ ಮಾರಣಹೋಮ ಆಧಾರಿತ ಸಿನಿಮಾವಾಗಿದ್ದು, ಕಾಶ್ಮೀರ ಪಂಡಿತರ ಹತ್ಯೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿದೆ. IMDb ರೇಟಿಂಗ್ 8.3 ಆಗಿದೆ.
4. ಹೃದಯಂ (Hridayam)- ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (8.1)
ವಿನೀತ್ ಶ್ರೀನಿವಾಸನ್ ಬರೆದು ನಿರ್ದೇಶಿಸಿರುವ ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ಪ್ರಣವ್ ಮೋಹನ್ ಲಾಲ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ದರ್ಶನಾ ರಾಜೇಂದ್ರನ್ ನಟಿಸಿದ್ದಾರೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಗಾಧವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಚಿತ್ರದ IMDb ರೇಟಿಂಗ್ 8.1 ಆಗಿದೆ.
5. RRR (ರೈಸ್ ರೋರ್ ರಿವೋಲ್ಟ್) RRR (Rise Roar Revolt) : ನೆಟ್‌ಫ್ಲಿಕ್ಸ್ (8.0)
ರಾಜಮೌಳಿಯವರ ಆರ್‌ಆರ್‌ಆರ್ ಸಿನಿಮಾ. ಇದು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಅವರಿಂದ ಪ್ರೇರಿತವಾದ ಕಾಲ್ಪನಿಕ ಕಥೆಯಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್ ಮತ್ತು ಅಲಿಸನ್ ಡೂಡಿ ಕೂಡ ನಟಿಸಿದ್ದಾರೆ. ಚಿತ್ರದ IMDb ರೇಟಿಂಗ್ 8.0 ಆಗಿದೆ.
6. ಅ ಥರ್ಸ್‌ಡೇ (A Thursday) : ಡಿಸ್ನಿ (7.8)
ನಾಯಕಿ ಶಿಶುವಿಹಾರದ ಮಕ್ಕಳನ್ನು ಒತ್ತೆಯಾಳಾಗಿ ಇರಿಸುತ್ತಾಳೆ ಮತ್ತು ವ್ಯವಸ್ಥೆಯಿಂದ ತನ್ನ ಬೇಡಿಕೆಗಳನ್ನು ಪೂರೈಸಲು 16 ಮುಗ್ಧ ಜೀವಗಳನ್ನು ಅಪಾಯಕ್ಕೆ ತಳ್ಳುತ್ತಾಳೆ. ಚಿತ್ರದ ನಾಯಕಿ ನಟಿ ಯಾಮಿ ಗೌತಮ್. ಬೆಹ್ಜಾದ್ ಖಂಬಾಟಾ ನಿರ್ದೇಶಿಸಿದ ಮತ್ತು ರೋನಿ ಸ್ಕ್ರೂವಾಲಾ ನಿರ್ಮಿಸಿದ ಅ ಥರ್ಸ್‌ಡೇ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೊಂಡಿತ್ತು. ಚಿತ್ರದ IMDb ರೇಟಿಂಗ್ 7.8 ಆಗಿದೆ.
7. ಝುಂಡ್ (Jhund)- ಜೀ5 (7.4)
ನಾಗರಾಜ ಮಂಜುಳೆ ಅವರ ಕುರಿತ ಸಿನಿಮಾವಾಗಿದೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸ್ಲಂ ಸಾಕರ್ ಚಳವಳಿಯ ಪ್ರವರ್ತಕರಾದ ನಾಗ್ಪುರ ಮೂಲದ ಕ್ರೀಡಾ ಶಿಕ್ಷಕ ವಿಜಯ್ ಬರ್ಸೆ ಪಾತ್ರವನ್ನು ಹೊಂದಿದ್ದಾರೆ. ಇದರಲ್ಲಿ ಸೈರಾಟ್‌ನಲ್ಲಿದ್ದ ಕಾಶ್ ಥೋಸರ್ ಮತ್ತು ರಿಂಕು ರಾಜ್‌ಗುರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ IMDb ರೇಟಿಂಗ್ 7.4 ಆಗಿದೆ.
8. ರನ್‌ವೇ 34 (Runway 34)- ಅಮೆಜಾನ್ ಪ್ರೈಮ್ ವಿಡಿಯೊ (7.2)
ಅಜಯ್ ದೇವಗನ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ರನ್‌ವೇ 34 ನ್ಯಾಯಾಲಯ ರೂಮಿನ ನಾಟಕವಾಗಿದೆ. ಚಿತ್ರದ IMDb ರೇಟಿಂಗ್ 7.2 ಆಗಿದೆ.
9. ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi)- ನೆಟ್‌ಫ್ಲಿಕ್ಸ್ (7.0)
ಹುಸೇನ್ ಜೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಈ ಐತಿಹಾಸಿಕ ಚಿತ್ರಕ್ಕೆ ಸ್ಫೂರ್ತಿಯಾಗಿದೆ. ಸ್ತ್ರೀವಾದಿ ದೃಷ್ಟಿಕೋನದಿಂದ ಲೈಂಗಿಕ ಕಾರ್ಯಕರ್ತೆಯರ ರಹಸ್ಯ ಪ್ರಪಂಚದ ಮುಂದೆ ತೆರೆದಿಡುವ ಹಾಗೂ ಲೈಂಗಿಕ ವ್ಯಾಪಾರವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬ ವಿವಾದಗಳಿಗೆ ಇನ್ನಷ್ಟು ಪುಷ್ಟಿ ನೀಡಿದ ಚಿತ್ರ ಇದಾಗಿದೆ. ಚಿತ್ರದ IMDb ರೇಟಿಂಗ್ 7.0 ಆಗಿದೆ.
10. ಸಾಮ್ರಾಟ್ ಪೃಥ್ವಿರಾಜ್ (Samrat Prithviraj)- ಅಮೆಜಾನ್ ಪ್ರೈಮ್ ವಿಡಿಯೊ (7.0)
ಪೃಥ್ವಿರಾಜ್ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆ ಕಾಣ್ತಾ ಇರೋದು ಇನ್ನೂ ವಿಶೇಷ. 1991ರಲ್ಲಿ ಕಿರುತೆರೆಯಲ್ಲಿ ಬಂದ ಚಾಣಕ್ಯ ಧಾರಾವಾಹಿಯನ್ನು ನಿರ್ದೇಶಿಸಿದ ಖ್ಯಾತಿಯ ಚಂದ್ರ ಪ್ರಕಾಶ್ ದ್ವೀವೇದಿ ಈ ಚಿತ್ರದಲ್ಲಿ ಬರಹಗಾರ ಹಾಗೂ ನಿರ್ದೇಶಕರಾಗಿದ್ದಾರೆ. ಇದನ್ನು ಯಶ್ ರಾಜ್ ಫಿಲ್ಮಸ್ ನಿರ್ಮಾಣ ಮಾಡಿದ್ದು, ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ ನಟಿಸಲಿದ್ದಾರೆ. ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ ನಟಿಸಲಿದ್ದಾರೆ.