Site icon Vistara News

Rocking Star Yash | ಮಗಳು ಐರಾ ಹೆಸರಿನ ನಿರ್ಮಾಣ ಸಂಸ್ಥೆಗೆ ಯಶ್‌ ಹೀರೊ ಆಗಲಿದ್ದಾರಾ?

Rocking Star Yash

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Rocking Star Yash) ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಮಕ್ಕಳ ಕುರಿತಾಗಿ ಪೋಸ್ಟ್‌ ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ಯಶ್‌ ಅವರ ಮಗಳು ಐರಾ ನಿರ್ಮಾಪಕಿ ಆಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ನಿರ್ಮಾಣ ಆಗಲಿದ್ದು, ಯಶ್‌ ಆ ಸಂಸ್ಥೆಯ ಬ್ಯಾನರ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಕೆಜಿಎಫ್‌ ಸಿನಿಮಾ ಸಕ್ಸೆಸ್‌ ಆದ ಬಳಿಕ ಯಶ್‌ ಅವರು ಯಾವ ಸಿನಿಮಾ ಮಾಡಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಮೊದಲು ನರ್ತನ್ ಜತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಸದ್ಯ ಆ ಸಿನಿಮಾ ಆಗುವುದಿಲ್ಲ ಎನ್ನುವ ಸುದ್ದಿ ಸಿಕ್ಕಿದೆ. ನರ್ತನ್ ಕೂಡ ಮತ್ತೊಂದು ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನನ್ನದೇ: ರಾಕಿಂಗ್‌ ಸ್ಟಾರ್‌ ಯಶ್‌!

ಇದೀಗ ಯಶ್‌ ಸಿನಿಮಾಗೆ ಅವರ ಮಗಳೇ ನಿರ್ಮಾಪಕಿಯಾಗುತ್ತಿದ್ದು, ಸಂಸ್ಥೆಗೆ ಬೇಕಿರುವ ಕೆಲಸಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿಯ ಬೆನ್ನಲ್ಲೇ ಕೆಜಿಎಫ್ 3 ಸಿನಿಮಾ ವಿಷಯ ಹೊರ ಬಂದಿತ್ತು.

ಇದನ್ನೂ ಓದಿ | Star Hairstyle | ಫ್ಯಾಷನ್‌ ಪ್ರಿಯರನ್ನು ಸೆಳೆಯುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಡ್ರೆಡ್‌ಲಾಕ್‌ ನ್ಯೂ ಹೇರ್‌ಸ್ಟೈಲ್‌

Exit mobile version