Site icon Vistara News

Jailer Movie: ಸಿಕ್ಕಾಪಟ್ಟೆ ವೈರಲ್‌ ಆಯ್ತು ಜಪಾನ್ ರಾಯಭಾರಿಯ ʻಕಾವಾಲಾʼ ಸ್ಟೆಪ್ಸ್‌!

Japanese ambassador

ಬೆಂಗಳೂರು: ದಕ್ಷಿಣ ಭಾರತದ ಕೆಲವು ಹಿಟ್‌ ಸಾಂಗ್‌ಗಳನ್ನು ರೀಲ್ಸ್‌ ಮಾಡುತ್ತಿರುವುದು ಇದೇನು ಮೊದಲೇನಲ್ಲ. ಪುಷ್ಪ ಚಿತ್ರದ ʻಊ ಅಂಟಾವ ಮಾವ..’ ಹಾಡು ಸೂಪರ್ ಹಿಟ್ ಆಯಿತು. ಇದೀಗ ಜೈಲರ್‌ ಸಿನಿಮಾದ (Jailer Movie) ʻಕಾವಾಲಾʼ ಸಾಂಗ್‌ನ ಸರದಿ. ವಿದೇಶಿಗರ ಅದೆಷ್ಟೋ ರೀಲ್ಸ್‌ಗಳು ವೈರಲ್‌ ಆಗುತ್ತಿವೆ. ಈಗ ಭಾರತದ ಜಪಾನ್ ರಾಯಭಾರಿ ಹಿರೋಷಿ ಸುಜುಕಿ (Hiroshi Suzuki ) ‘ಕಾವಾಲಾ..’ ಹಾಡಿಗೆ (kavala dance video) ಸ್ಟೆಪ್ ಹಾಕಿದ್ದಾರೆ. ಜಪಾನ್ ಯೂಟ್ಯೂಬರ್ ಮಯೋ ಸಾನ್ ( YouTuber Mayo San ) ಜತೆ ಹಿರೋಷಿ ಅವರು ಕೊಲಾಬರೇಷನ್ ಮಾಡಿಕೊಂಡಿದ್ದಾರೆ. ‘ಜಪಾನ್ ಯೂಟ್ಯೂಬರ್ ಮಯೋ ಸ್ಯಾನ್ ಜತೆ ಕಾವಾಲಾ ಡ್ಯಾನ್ಸ್. ರಜನಿಕಾಂತ್ ಮೇಲೆ ಇರುವ ನನ್ನ ಪ್ರೀತಿ ನಿರಂತರ’ ಎಂದು ಅವರು ಬರೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಹಳ ಗ್ಯಾಪ್ ನಂತರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದಾರೆ. ಈ ಸಿನಿಮಾ ರಿಲೀಸ್‌ ಆಗುವ ಮುಂಚೆ ಸೆನ್ಷೇಷನ್‌ ಕ್ರಿಯೇಟ್‌ ಮಾಡಿದ್ದು ತಮನ್ನಾ ಅವರ ಕಾವಾಲಾ ಹಾಡು.
ರಜನಿಕಾಂತ್ ದಶಕಗಳಿಂದ ಜಪಾನಿಯರ ಮೆಚ್ಚುಗೆ ಗಳಿಸಿದ್ದಾರೆ. ಕಾವಾಲಾ ಹಾಡು ವೈರಲ್‌ ಆಗುತ್ತಿದ್ದಂತೆ ತಮನ್ನಾ ಸ್ಟೆಪ್ಸ್‌ ಖ್ಯಾತ ಪಾಪ್ ಗಾಯಕಿ ಶಕೀರಾ ಅವರ ‘ವಾಕಾ ವಾಕಾ’ ಹಾಡಿಗೆ ನೆಟ್ಟಿಗರು ಹೋಲಿಸಲು ಶುರು ಮಾಡಿದ್ದರು. ತಮಿಳು ಆವೃತ್ತಿಯನ್ನು ಶಿಲ್ಪಾ ರಾವ್ ಹಾಡಿದ್ದರೆ, ಹಿಂದಿ ಆವೃತ್ತಿಯನ್ನು ಸಿಂಧೂಜಾ ಶ್ರೀನಿವಾಸನ್ ಹಾಡಿದ್ದಾರೆ.

ಇದನ್ನೂ ಓದಿ: Tamannaah Bhatia: ಹಿಂದಿ ವರ್ಷನ್‌ ʻಕಾವಾಲಾʼ ಸಾಂಗ್‌ಗೆ ಸ್ಟೆಪ್ಸ್‌ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ!

ವೈರಲ್‌ ವಿಡಿಯೊ

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್, ರಜನಿಕಾಂತ್ ಅಭಿಮಾನಿಗಳಿಗೆ ಆಕ್ಷನ್-ಪ್ಯಾಕ್ಡ್ ಟ್ರೀಟ್ ಆಗಿದೆ. ಸೂಪರ್‌ಸ್ಟಾರ್ ಜತೆಗೆ, ಚಿತ್ರದಲ್ಲಿ ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್ ಮತ್ತು ಮೋಹನ್‌ಲಾಲ್ ಅವರ ವಿಶೇಷ ಅತಿಥಿ ಪಾತ್ರವನ್ನು ಒಳಗೊಂಡಂತೆ ತಾರಾ ಬಳಗವಿದೆ.

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಜಾನಿ ಮಾಸ್ಟರ್ ಈ ಮ್ಯೂಸಿಕ್ ವಿಡಿಯೊಗೆ ಕೊರಿಯೋಗ್ರಫಿ ಮಾಡಿದ್ದಾರೆ.ʻಜೈಲರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ. ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Exit mobile version