ನವದೆಹಲಿ: ಇಂಗ್ಲಿಷ್ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಮತ್ತೊಮ್ಮೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ಬಾರಿ ರಾಜಧಾನಿಯಲ್ಲಿ ಜಸ್ಟಿನ್ ಬೀಬರ್ ಪರ್ಫಾರ್ಮ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಬಾರಿ 2007ರಲ್ಲಿ ಕನೆಡಾ ಪಾಪ್ ಸಿಂಗರ್ ಮುಂಬೈನ ಪಾಟೀಲ್ ಸ್ಟೇಡಿಯಂನಲ್ಲಿ ಹಾಡಿನ ಮೂಲಕ ಅಭಿಮಾನಿಗಳನ್ನು ಮನರಂಜಿಸಿದ್ದರು.
ಜಸ್ಟಿನ್ ಬೀಬರ್ ಅವರ ʼಜಸ್ಟಿಸ್ʼ ಎಂಬ ಹೊಸ ಸಾಂಗ್ ಆಲ್ಬಂ ಬಿಡುಗಡೆಯಾಗುತ್ತಿದೆ. ಈ ಆಲ್ಬಂನ ಪ್ರಮೋಷನ್ ನಿಟ್ಟಿನಲ್ಲಿ ವರ್ಲ್ಡ್ ಟೂರ್ ನಡೆಸುತ್ತಿದ್ದಾರೆ. ಮೇ 2022ರಿಂದ ಆರಂಭಗೊಂಡು 2023ರ ಮಾರ್ಚ್‌ವರೆಗೆ ಅವರು ಈ ಪ್ರವಾಸ ಕೈಗೊಳ್ಳುತ್ತಿದ್ದಾರೆ. 30ಕ್ಕೂ ಅಧಿಕ ದೇಶದಲ್ಲಿ ಸುಮಾರು 125 ಶೋ ನಡೆಯಲಿದೆ. ಈ ಪ್ರವಾಸದ ಅಂಗವಾಗಿ ಭಾರತಕ್ಕೂ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ | Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು
ಜಸ್ಟಿನ್ ಬೀಬರ್ ಅವರು ಈ ಹಿಂದೆ ʼಪರ್ಪಸ್ʼ ಎಂಬ ಆಲ್ಬಂಗಾಗಿ 2016-2017ರ ಸಂದರ್ಭಲ್ಲಿ ವರ್ಲ್ಡ್ ಟೂರ್ ಹಮ್ಮಿಕೊಂಡಿದ್ದರು. ಅದಾದ ಬಳಿಕ ಯಾವುದೇ ವರ್ಲ್ಡ್ ಟೂರ್ ನಡೆದಿರಲಿಲ್ಲ. ಕಳೆದ ಬಾರಿ ಭಾರತಕ್ಕೆ ಆಗಮಿಸಿದ್ದಾಗ ಜಸ್ಟಿನ್ ಬೀಬರ್ ಅವರ ಪರ್ಫಾರ್‌ಮೆನ್ಸ್‌ನಿಂದ ಅವರ ಅಭಿಮಾನಿಗಳಿಗೆ ನಿರಾಶೆಯಾಗಿತ್ತು.
ಬಾಲಿವುಡ್ ತಾರೆ ಬಿಪಾಷ ಬಸು ಹಾಗೂ ಸೊನಾಲಿ ಬೇಂದ್ರೆ ಕೂಡ ಜಸ್ಟಿನ್ ಬೀಬರ್ ಅವರ ಹಾಡಿನಿಂದ ಬೇಸರಗೊಂಡು ಟ್ವೀಟ್ ಮಾಡಿದ್ದರು. ಈ ಘಟನೆಯಿಂದ ಜಸ್ಟಿನ್ ಬೀಬರ್ ಮುಂಬೈ ಇವೆಂಟ್ ಮುಗಿಸಿ ಭಾರತದಿಂದ ತಮ್ಮ ದೇಶಕ್ಕೆ ಮರಳಿದರು. ತಾಜ್ ಮಹಲ್ ಹಾಗೂ ರಾಜಸ್ಥಾನಕ್ಕೆ ಭೇಟಿ ನೀಡುವ ಪ್ಲಾನ್ ಕೂಡ ಕ್ಯಾನ್ಸಲ್ ಮಾಡಿ ತವರೂರಿಗೆ ಹಾರಿದ್ದರು.
ಅದಾದ ಬಳಿಕ ಮತ್ತೊಮ್ಮೆ ಜಸ್ಟಿನ್ ಭಾರತದಲ್ಲಿ ಹಾಡಿನ ಮೋಡಿ ಮಾಡಲು ಬರುತ್ತಿದ್ದಾರೆ. ಈ ಬಾರಿ ಅಭಿಮಾನಿಗಳ ನಿರೀಕ್ಷೆ ಮುಟ್ಟಬಹುದೇ ಎಂಬ ಕುತೂಹಲವಿದೆ.
ಟಿಕೆಟ್ ಎಲ್ಲಿ ಪಡೆಯಬಹುದು?
ಜೂನ್ 4ರಿಂದ ಈ ಕಾನ್ಸರ್ಟ್‌ಗೆ ಬುಕ್ ಮೈ ಶೋ ಅಲ್ಲಿ ಟಿಕೆಟ್ ಲಭ್ಯವಾಗಲಿದೆ. ಪ್ರೀ-ರೆಜಿಸ್ಟರ್ ಆಗಿರುವ ಗ್ರಾಹಕರು ಜೂನ್ 2ರಿಂದ ಖರೀದಿಸಬಹುದಾಗಿದೆ.
ಇದನ್ನೂ ಓದಿ | ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಮತ್ತೊಮ್ಮೆ ವಧು