Site icon Vistara News

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ

ಚಲನಚಿತ್ರ ವಾಣಿಜ್ಯ ಮಂಡಳಿ

ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber) ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಸಾ.ರಾ ಗೋವಿಂದು ಮತ್ತು ಬಾ.ಮಾ. ಹರೀಶ್‌ ನಡುವೆ ಪ್ರಬಲ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ. ಬೆಳಗ್ಗೆ 10 ಗಂಟೆಯಿಂದ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಆರಂಭವಾದ ಮತದಾನ 6 ಗಂಟೆಯವರೆಗೆ ನಡೆಯಲಿದೆ. ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನ ನಡೆಯುತ್ತಿದ್ದು, ರಾತ್ರಿ ವೇಳೆಗೆ ಫಲಿತಾಂಶ ಲಭಿಸುವ ಸಾಧ್ಯತೆಯಿದೆ.

ಹಿರಿಯ ನಿರ್ಮಾಪಕ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಈ ಹಿಂದೆ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ಸಿನಿಮಾರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ಸಮಭಾವದಿಂದ ಕಂಡು ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಹಲವು ಸಕಾರಾತ್ಮಕ ಸುಧಾರಣೆಗಳು ಅವರ ಗೆಲುವಿಗೆ ನೆರವಾಗಲಿವೆ ಎಂದು ಹಿರಿಯ ಕಲಾವಿದರ ಮತ್ತು ತಂತ್ರಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿ | ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ʼThank Godʼ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ, ವಿಕ್ರಾಂತ್‌ ರೋಣ ಫಿಕ್ಸ್‌

ಅಷ್ಟೆ ಅಲ್ಲದೆ, ಅನೇಕ ನಿರ್ಮಾಪಕರು ಇವರ ಹಿಂದೆ ಇರುವುದು ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸಾ.ರಾ.ಗೋವಿಂದು ಅಧಿಕಾರದಲ್ಲಿಲ್ಲದಿದ್ದರೂ ಕೊರೊನಾ ಸಮಯದಲ್ಲಿ ಸಿನಿಮಾರಂಗದ ಸದಸ್ಯರಿಗೆ ಸಹಾಯ ಮಾಡಿದ್ದರು.

ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ವಿ.ಸುಬ್ರಮಣಿ. ವಿತರಕರ ವಲಯದ ಉಪಾಧ್ಯಕ್ಷ ಸ್ಥಾನದಲ್ಲಿ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನದಲ್ಲಿ ಜಿ.ಪಿ.ಕುಮಾರ್ ಸ್ಪರ್ಧಾಕಣದಲ್ಲಿದ್ದಾರೆ. ಬಾಮಾ ಹರೀಶ್ ಅವರ ತಂಡದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಟ ಜೈಜಗದೀಶ್, ವಿತರಕ ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ಶ್ರೀನಿವಾಸ್ ಮುತ್ತು ಕೆ.ಮೋ.ರಂಗಪ್ಪ, ವಿತರಕರ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಮತ್ತು ಪಾರ್ಥಸಾರಥಿ, ನಿರ್ಮಾಪಕ ಕಾರ್ಯದರ್ಶಿ ಸ್ಥಾನಕ್ಕೆ ಸುಂದರರಾಜು, ಹಣಕಾಸಿನ ಸ್ಥಾನಕ್ಕೆ ನಟ ಲೂಸ್ ಮಾದ ಯೋಗಿ ಅವರ ತಂದೆ ಟಿ.ಆರ್. ಸಿದ್ದರಾಜು ಸ್ಪರ್ಧಾ ಕಣದಲ್ಲಿದ್ದಾರೆ.

ಇದನ್ನೂ ಓದಿ | ವಿಧಾನ ಪರಿಷತ್ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಜೂನ್‌ 13 ರಂದು ಚುನಾವಣೆ

Exit mobile version