Site icon Vistara News

KGF-2 | ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಬಿಗ್‌ ಅಪ್ಡೇಟ್ಸ್‌ : ಆ್ಯಕ್ಷನ್ ಕಟ್‌ ಹೇಳಲಿದ್ದಾರಾ ಶಂಕರ್ ಷಣ್ಮುಗಂ?

KGF-2

ಬೆಂಗಳೂರು : ಕೆಜಿಎಫ್‌-2 (KGF-2) ಖ್ಯಾತಿಯ ರಾಕಿಂಗ್‌ ಸ್ಟಾರ್‌ ಯಶ್‌ ತಮಿಳು ನಿರ್ದೇಶಕ ಶಂಕರ್‌ ಷಣ್ಮುಗಂ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿವೆ. ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಜತೆ ಶಂಕರ್ ಷಣ್ಮುಗಂ ಈಗಾಗಲೇ RC15 ಪ್ರಾಜೆಕ್ಟ್‌ನಲ್ಲಿ ಬ್ಯೂಸಿಯಾಗಿದ್ದಾರೆ.

ನಿರ್ದೇಶಕ ಶಂಕರ್ ʻಎಂಥಿರನ್ʼ, ʻಅಪರಿಚಿತ್ʼ, ಚಿತ್ರಗಳಿಗೆ ಹೆಸರುವಾಸಿ. ಇದೀಗ ಯಶ್‌ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಂಕರ್ ಷಣ್ಮುಗಂ ಜತೆ ಯಶ್‌ ಐತಿಹಾಸಿಕ ಕತೆಯಿರುವ ಸಿನಿಮಾ ಮಾಡುತ್ತಿದ್ದಾರೆ. ಹಾಗೇ ಈ ಚಿತ್ರ ಬಿಗ್‌ ಬಜೆಟ್‌ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ನಿರ್ದೇಶಕರು ಈ ಪ್ರಾಜೆಕ್ಟ್‌ನಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಎಲ್ಲಾ ಪ್ರಮುಖ ನಟರನ್ನು ಒಗ್ಗೂಡಿಸಿಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗೂ 1000 ಕೋಟಿ ರೂ. ಬಜೆಟ್‌ ಸಿನಿಮಾ ಮಾಡಬೇಕೆಂಬ ಗುರಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಶಂಕರ್‌ ಷಣ್ಮುಗಂ

ವರದಿ ಪ್ರಕಾರ ರಣಬೀರ್ ಕಪೂರ್ ಮತ್ತು ಅಯಾನ್ ಮುಖರ್ಜಿಯ ಬ್ರಹ್ಮಾಸ್ತ್ರ ಸಿನಿಮಾಕ್ಕಿಂತ ಈ ಸಿನಿಮಾ ಬಜೆಟ್‌ ಹೆಚ್ಚಿರಬಹುದು. ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣದ ವೆಚ್ಚ 650 ಕೋಟಿ ರೂ. ಕೆಜಿಎಫ್-2 ನಟ ಯಶ್ ಮತ್ತು ಶಂಕರ್ ಕಾಂಬಿನೇಶನ್‌ ಕಲ್ಪನೆಯು ಚಿತ್ರ 1000ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಮತ್ತು ಈ ಸಿನಿಮಾಗೆ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದ ಎಲ್ಲಾ ಪ್ರಮುಖ ನಟರನ್ನು ಒಟ್ಟಿಗೆ ತೆರೆ ಮೇಲೆ ಕಾಣಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಾಜೆಕ್ಟ್‌ಗೆ ನೆಟ್‌ಫ್ಲಿಕ್ಸ್ ಮತ್ತು ಕರಣ್ ಜೋಹರ್ ಕೂಡ ಕೈ ಹಾಕುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ.

ಇದನ್ನೂ ಓದಿ | K.G.F Movie | ಇನ್ಸ್ಟಾ ಲೈವ್‌ನಲ್ಲಿ ಕೆಜಿಎಫ್‌ 3 ಸುಳಿವು ಕೊಟ್ಟ ಅರ್ಚನಾ?

ಕೆಜಿಎಫ್‌ ಈಗಾಗಲೇ 120 ಕೋಟಿ ರೂ. ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಮಾಡಿದೆ. ಕೆಜಿಎಫ್‌-2 ಚಿತ್ರಕ್ಕೆ ಯಶ್‌ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದರು. ನಿರ್ದೇಶಕ ಶಂಕರ್ ಕೂಡ ಕೆಜಿಎಫ್ ಸಿನಿಮಾದ ದೊಡ್ಡ ಅಭಿಮಾನಿ. ಈ ಹಿಂದೆ KGF 2 ಬಗ್ಗೆ ಟ್ವೀಟ್‌ ಮಾಡಿ ಪ್ರಶಂಸಿಸಿದ್ದರು. ಶಂಕರ್‌ ಟ್ವೀಟ್‌ ಮಾಡಿ ʻʻಕೆಜಿಎಫ್‌ ಸಿನಿಮಾ ನೋಡುವಾಗ ಕಥೆ ಮತ್ತು ಚಿತ್ರಕಥೆ, ಸಂಕಲನ ಅದ್ಭುತವಾಗಿ ಮೂಡಿಬಂದಿದೆ. ಇಂಟರ್‌ಕಟ್‌ ಆಕ್ಷನ್‌ ಮತ್ತು ಚಿತ್ರದ ಸಂಭಾಷಣೆ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆʼʼ ಎಂದು ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು.

ಕೆಜಿಎಫ್‌-2 ಸಿನಿಮಾದಲ್ಲಿ ಕೆಜಿಎಫ್‌-3 ಸಿನಿಮಾ ಬರಲಿದೆಯಾ ಎಂಬ ಸುಳಿವನ್ನು ಕೂಡ ನೀಡಿತ್ತು. ಪ್ರಶಾಂತ್‌ ನೀಲ್‌ ಸದ್ಯಕ್ಕೆ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಯಶ್‌ ಮುಂದೆ ಯಾವ ಸಿನಿಮಾ ಮೂಲಕ ಬರಲಿದ್ದಾರೆ ಎಂದು ಸಿನಿಪ್ರಿಯರು ಎದರು ನೋಡುತ್ತಿದ್ದಾರೆ. ಶಂಕರ್‌ ಜತೆ ಯಶ್‌ ಮುಂದಿನ ಸಿನಿಮಾದಲ್ಲಿ ಬರಲಿದ್ದಾರಾ? ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ | KGF | ತಮಿಳಿನಲ್ಲಿ ಬರುತ್ತಿದೆ ರಿಯಲ್‌ ಕೆಜಿಎಫ್‌: ಹೀರೋ ಯಶ್‌ ಅಲ್ಲ!

Exit mobile version