Site icon Vistara News

ಜೂ.3ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ -2 ಲಭ್ಯ; ಹೆಚ್ಚುವರಿ ಹಣ ಪಾವತಿಸಬೇಕಿಲ್ಲ!

KGF Chapter 2

ಬೆಂಗಳೂರು: ಯಶ್‌ ಅಭಿನಯದ ಬ್ಲಾಕ್‌ ಬಸ್ಟರ್‌ ಸಿನಿಮಾ ಕೆಜಿಎಫ್‌ ಚಾಪ್ಟರ್‌ 2 (KGF: Chapter 2) ಒಟಿಟಿಯಲ್ಲಿ ಉಚಿತವಾಗಿ ಬಿಡುಗಡೆಯಾಗುವ ದಿನಾಂಕ ಘೋಷಣೆಯಾಗಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋವನ್ನು ಸಬ್‌ಸ್ಕ್ರೈಬ್‌ ಮಾಡಿರುವವರು ಜೂನ್‌ 3ರಿಂದ ಈ ಸಿನಿಮಾವನ್ನು ಉಚಿವಾಗಿ ವೀಕ್ಷಿಸಬಹುದು. ಇಷ್ಟುದಿನ ಸಬ್‌ಸ್ಕ್ರೈಬ್‌ ಮಾಡಿದ್ದವರೂ 199 ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸಿ ಚಿತ್ರ ವೀಕ್ಷಿಸಬೇಕಿತ್ತು. ಜೂ.3ರಿಂದ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಕೆಜಿಎಫ್‌ ಸಿನಿಮಾವನ್ನು ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಫ್ರೀ ನೋಡಬಹುದಾಗಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋ ಟ್ವಿಟರ್‌ ಅಕೌಂಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

2018ರಿಂದಲೂ ವಿಶ್ವಾದ್ಯಂತ ಕೆಜಿಎಫ್‌ ಸಿನಿಮಾ ಹವಾ ಇದ್ದೇ ಇದೆ. ಅದರಲ್ಲೂ ಕೆಜಿಎಫ್‌ ಚಾಪ್ಟರ್‌ 2 ದೊಡ್ಡ ಪ್ರಮಾಣದಲ್ಲಿ ಸಂಚಲನ ಮೂಡಿಸಿದೆ. ಕೋಲಾರದ ಚಿನ್ನದ ಗಣಿಯ ಸುತ್ತಮುತ್ತ ಹೆಣೆದ ಕತೆಯಿದು. ಕೆಜಿಎಫ್‌ ಚಾಪ್ಟರ್‌ 2 ಏಪ್ರಿಲ್‌ 14ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕೂಡ 1238 ಕೋಟಿ ರೂ. ಗಡಿ ದಾಟಿದೆ. ಕನ್ನಡದ ನಟ ಯಶ್‌ ಇಂದು ಜಾಗತಿಕ ಸಿನಿಪ್ರಿಯರ ಮನೆಮಾತಾಗಿದ್ದಾರೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಗಡಿಗಳಾಚೆಗೂ ಪ್ರಸಿದ್ಧಿಯಾಗಿದ್ದಾರೆ.

ಕೆಜಿಎಫ್‌ ಚಲನಚಿತ್ರವನ್ನು ಈಗ 20 ದಿನಗಳ ಹಿಂದೆಯೇ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಅಮೆಜಾನ್‌ ಪ್ರೈಮ್‌ ವಿಡಿಯೋ ಬಳಕೆದಾರರು ಹೆಚ್ಚುವರಿ ಹಣಕೊಟ್ಟು ವೀಕ್ಷಣೆ ಮಾಡಬೇಕಿತ್ತು. ಅಂದರೆ 199 ರೂಪಾಯಿ ನೀಡಿ, ಸಿನಿಮಾವನ್ನು ಬಾಡಿಗೆ ಪಡೆಯಬೇಕಿತ್ತು. ಆಗಲೂ ಕೂಡ ಐದು ಭಾಷೆಗಳಲ್ಲಿ ಸಿನಿಮಾ ನೋಡಬಹುದಾಗಿತ್ತು.

ಇದನ್ನೂ ಓದಿ: ರಶ್ಮಿಕಾ ಹಾದಿಯಲ್ಲಿ ಕೆಜಿಎಫ್‌ ನಾಯಕಿ ಶ್ರೀನಿಧಿ ಶೆಟ್ಟಿ; ಸಂಭಾವನೆ ಮೊತ್ತದಲ್ಲಿ ಭರ್ಜರಿ ಏರಿಕೆ !

Exit mobile version