Site icon Vistara News

KGF Kannada Movie : ಕೆಜಿಎಫ್‌ 5 ಕೂಡ ತೆರೆಗೆ ಬರುತ್ತೆ; ಆದರೆ ನಾಯಕ ಯಶ್‌ ಅಲ್ಲ! ಸಲಾರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಕಿ ಭಾಯ್‌?

ಬೆಂಗಳೂರು: ಪ್ರಶಾಂತ್‌ ನೀಲ್‌ ಅವರ ಕೆಜಿಎಫ್‌ (KGF Kannada Movie) ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಕಮಾಲ್‌ ಮಾಡಿತ್ತು. ಕೆಜಿಎಫ್‌ 2 ಅಂತೂ ದೇಶಾದ್ಯಂತ ಮೆಚ್ಚುಗೆ ಪಡೆದಿದೆ. 1250 ಕೋಟಿ ರೂ. ಬಾಚಿಕೊಂಡಿರುವ ಸಿನಿಮಾ 2022ರಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಕೆಜಿಎಫ್‌ 3 ಕೂಡ ಬರಲಿದೆ ಎನ್ನುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿಸಿದೆ. ಇದೀಗ ಇನ್ನೊಂದು ಅಚ್ಚರಿಯ ವಿಚಾರವೆಂದರೆ ಕೆಜಿಎಫ್‌ 3 ಗೆ ಈ ಸೀರಿಸ್‌ ನಿಲ್ಲುವುದಿಲ್ಲ. ಕೆಜಿಎಫ್‌-5ರವರೆಗೂ ಈ ಚಿತ್ರ ಸಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: KGF Babu: ವಿರೋಧಿಗಳು ಕೊಡುತ್ತಿರುವ ತೊಂದರೆಯಿಂದ ಇ.ಡಿ. ಅಧಿಕಾರಿಗಳು ಪದೇ ಪದೆ ಕರೆಯುತ್ತಿದ್ದಾರೆ: ಕೆಜಿಎಫ್‌ ಬಾಬು ಬೇಸರ

ಹೌದು. ಸಿನಿಮಾದ ನಿರ್ದೇಶನ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಅವರು ಇಂಥದ್ದೊಂದು ಮಾಹಿತಿಯನ್ನು ಕೊಟ್ಟಿದ್ದಾರೆ. ಸಿನಿಮಾ ಒಟ್ಟು ಐದು ಸರಣಿಯಲ್ಲಿ ಬಿಡುಗಡೆಯಾಗಲಿದೆ. ಜೇಮ್ಸ್‌ ಬಾಂಡ್‌ (James Bond) ಸಿನಿಮಾದಂತೆಯೇ ಸರಣಿಯಾಗಿ ಬಿಡುಗಡೆಯಾಗುವ ಈ ಸಿನಿಮಾದಲ್ಲಿ ಬೇರೆ ಬೇರೆ ನಾಯಕ ನಟ ಕಾಣಿಸಿಕೊಳ್ಳಲಿದ್ದಾರೆ ಎಂದು ವಿಜಯ್‌ ತಿಳಿಸಿದ್ದಾರೆ.

2025ರಲ್ಲಿ ಕೆಜಿಎಫ್‌ 3 ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಈಗ ವಿಜಯ್‌ ಅವರು ಹೇಳಿರುವ ಮಾತಿನಿಂದಾಗಿ ಕೆಜಿಎಫ್‌ 3ನಲ್ಲಿ ಯಶ್‌ ಅವರೇ ಇರಲಿದ್ದಾರೆಯೇ ಅಥವಾ ಬೇರಿನ್ನಾರಾದರೂ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಅನುಮಾನ ಶುರುವಾಗಿದೆ.‌

ಸಲಾರ್‌ನಲ್ಲೂ ರಾಕಿ ಭಾಯ್‌?

ಇದೇ ವೇಳೆ ಕೆಜಿಎಫ್‌ ನಿರ್ದೇಶಕ ತೆಲುಗುವಿನ ಪ್ರಭಾಸ್‌ (Prabhas) ಅವರೊಂದಿಗೆ ಸೇರಿಕೊಂಡು ʼಸಲಾರ್‌ʼ ಸಿನಿಮಾ ಮಾಡುತ್ತಿದ್ದಾರೆ. ಕೆಜಿಎಫ್‌ ಸಿನಿಮಾದಂತೆಯೇ ಇರಲಿರುವ ಈ ಸಿನಿಮಾದಲ್ಲಿ ಪ್ರಭಾಸ್‌ ಜತೆ ಯಶ್‌ (Yash) ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಲಾರ್‌ ಹಾಗೂ ರಾಕಿ ಭಾಯ್‌ ನಡುವೆ ಈ ಸಿನಿಮಾ ಸಂಬಂಧ ಬೆಸೆಯಲಿದೆ ಎನ್ನುವ ಚರ್ಚೆಗಳಿವೆ.


ಸಲಾರ್‌ ಸಿನಿಮಾದಲ್ಲಿ ಪ್ರಭಾಸ್‌ ಅವರೊಂದಿಗೆ ಪ್ರಥ್ವಿರಾಜ್‌ ಸುಕುಮಾರನ್‌, ಶೃತಿ ಹಾಸನ್‌, ಜಗಪತಿ ಬಾಬು ಸೇರಿ ಅನೇಕರು ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ನಂತರ ಪ್ರಶಾಂತ್‌ ಅವರು ಜೂ.ಎನ್‌ಟಿಆರ್‌ ಅವರೊಂದಿಗೆ ಒಂದು ಸಿನಿಮಾ ಮಾಡಲಿದ್ದು, ಅದರ ನಂತರ ಕೆಜಿಎಫ್‌ 3 ಮಾಡಲಿದ್ದಾರೆ.

ಇದನ್ನೂ ಓದಿ: Actor Prabhas | ʻಸಲಾರ್‌ʼ ಬಗ್ಗೆ ಹೊಸ ಅಪ್‌ಡೇಟ್‌: ನಿಜಾನಾ ಅಂತಿದ್ದಾರೆ ಫ್ಯಾನ್ಸ್‌!

Exit mobile version