Site icon Vistara News

Kiccha Sudeep : ಸುದೀಪ್ ಹೊಸ ಸಿನಿಮಾದ ಟೀಸರ್ ರೆಡಿ! ಬಿಡುಗಡೆಯ ಡೇಟ್ ಗೊತ್ತಾಯ್ತಾ?

Kiccha Sudeep

ಬೆಂಗಳೂರು: ಕರ್ನಾಟಕ: ಕಿಚ್ಚ ಸುದೀಪ್ (Kiccha Sudeep) ಅವರ ಹೊಸ ಸಿನಿಮಾದ (Kannada New Film) ಟೀಸರ್ (Teaser) ಜುಲೈ 2ರಂದು ಬೆಳಗ್ಗೆ 44.46ಕ್ಕೆ ಲಾಂಚ್ ಆಗಲಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌‌ನ (Instagram) ಕೆಆರ್‌ಜಿ ಕನೆಕ್ಟ್ಸ್‌ನ ಫೇಜ್‌ನಲ್ಲಿ ವಿಡಿಯೋವೊಂದನ್ನು ಷೇರ್ ಮಾಡಿಕೊಂಡಿದ್ದು, ಅದರಲ್ಲಿ ಸುದೀಪ್ ಅವರ ಹೊಸ ಸಿನಿಮಾದ ಮಾಹಿತಿಯನ್ನು ನೀಡಲಾಗಿದೆ.

ಇನ್‌ಸ್ಟಾದಲ್ಲಿ ಷೇರ್ ಮಾಡಲಾದ ವಿಡಿಯೋದಲ್ಲಿ ಕಿಚ್ಚ 46 ಟೀಸರ್ ಎಂದು ಬರೆಯಲಾಗಿದೆ. ಅಲ್ಲದೇ, ಕನ್ನಡದ ಅನೇಕ ಯುವ ನಟರು, ನಟಿಯರು ಈ ವಿಡಿಯೋದಲ್ಲಿ ಡೇಟ್ ಗೊತ್ತಾಯ್ತಾ ಎಂದು ಕೇಳುತ್ತಾರೆ. ಡಾರ್ಲಿಂಗ್ ಕೃಷ್ಣ, ಅನೂಪ್ ಭಂಡಾರಿ, ನವೀನ್ ಶಂಕರ್, ಸಪ್ತಮಿ ಗೌಡ, ವಾಸುಕಿ ವೈಭವ್, ನಿರೂಪ್ ಭಂಡಾರಿ, ವಿನಯ್ ರಾಜಕುಮಾರ್, ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಅವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಡೇಟಾ ಗೊತ್ತಾಯ್ತಾ? ಎಂದು ಕೇಳುತ್ತಾರೆ. ವಿಡಿಯೋ ಕೊನೆಗೆ 46 ಕಿಚ್ಚ ಟೀಸರ್. ಜುಲೈ 2ರಂದು ಬೆಳಗ್ಗೆ 11.46ಕ್ಕೆ ಬಿಡುಗಡೆ ಎಂದು ತೋರಿಸಲಾಗುತ್ತದೆ.

ಕಿಚ್ಚ ಸುದೀಪ್ ಅವರು ತೀರಾ ಇತ್ತೀಚಿನ ಸಿನಿಮಾ ವಿಕ್ರಾಂತ ರೋಣ. ಈ ಸಿನಿಮಾವು 2022ರಲ್ಲಿ ತೆರೆಕಂಡು ಸಕ್ಸೆಸ್ ಆಗಿತ್ತು. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಚಿತ್ರದ ಗಳಿಕೆಯು ನೂರು ಕೋಟಿ ರೂ. ದಾಟಿತ್ತು. ಈ ಚಿತ್ರದ ರಾ ರಾ ರಕ್ಕಮ್ಮ ಸಾಂಗ್ ಫುಲ್ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ: Kichcha Sudeepa: ಸಿನಿಮಾಗೆ ಕಾಲಿಟ್ಟ ಅಕ್ಕನ ಮಗನಿಗೆ ಕಿಚ್ಚ ಸುದೀಪ್‌ ಕಿವಿ ಮಾತು; ಟೈಟಲ್ ಕೊಟ್ಟಿದ್ದು ಯಾರು?

ವಿಕ್ರಾಂತ ರೋಣ ಬಳಿಕ ಕಿಚ್ಚ ಸುದೀಪ್ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಅವರ ಅಭಿಮಾನಿಗಳು ಸುದೀಪ್ ಅವರ ನೆಕ್ಸ್ಟ್ ಸಿನಿಮಾಗಾಗಿ ಕಾದು ಕುಳಿತಿದ್ದರು. ಇದೀಗ ಅವರ ಅಭಿಮಾನಿಗಳಿಗೆ ಸುದೀಪ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಟೀಸರ್ ಲಾಂಚ್ ದಿನ ಈ ಎಲ್ಲ ಮಾಹಿತಿಯು ದೊರೆಯಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version