Site icon Vistara News

ಕಿಚ್ಚ ಸುದೀಪ್- ಕುಮಾರ್ ಜಟಾಪಟಿ; ರವಿಚಂದ್ರನ್ ಮನೆಯ ಸಂಧಾನ ಸಭೆಯಲ್ಲಿ ಏನೇನು ನಡೀತು?

kichcha sudeep Ravichandran MN Kumar

ಬೆಂಗಳೂರು: ನಟ ಕಿಚ್ಚ ಸುದೀಪ್ (Kiccha Sudeep) ಹಾಗೂ ನಿರ್ಮಾಕ ಎಂ ಎನ್ ಕುಮಾರ್ (N Kumar)ನಡುವೆ ಕಾಲ್‌ಶೀಟ್‌ಗೆ (Call Sheet Issue) ಸಂಬಂಧಿಸಿದಂತೆ ಉಂಟಾದ ವಿವಾದ ಕುರಿತು ಶುಕ್ರವಾರ ಹಿರಿಯ ನಟ ರವಿಚಂದ್ರನ್ (Ravichandran) ಅವರ ಮನೆಯಲ್ಲಿ ಚರ್ಚಿಸಲಾಯಿತು. ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ಸಂಧಾನ ಸಭೆ ರಾತ್ರಿ 10 ಗಂಟೆವರೆಗೆ ನಡೆಯಿತು. ನಾಳೆ, ಶನಿವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಬಳಿಕ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ.

ರವಿಚಂದ್ರನ್ ಮನೆಯಲ್ಲಿ ನಡೆದ ಸಭೆಯಲ್ಲಿ ಕಿಚ್ಚ ಸುದೀಪ್, ನಿರ್ಮಾಪಕ ಎಂ ಎನ್ ಕುಮಾರ್, ರವಿಚಂದ್ರನ್, ನಿರ್ಮಾಪಕ ರಾಕ್‍‌ಲೈನ್ ವೆಂಕಟೇಶ್, ಭಾಮ ಹರೀಶ್ ಸೇರಿ 6 ಜನರು ಹಲವರು ಪಾಲ್ಗೊಂಡಿದ್ದರು. ಸಭೆಯಲ್ಲಿ ಸುದೀಪ್ ಮತ್ತು ಕುಮಾರ್ ಅವರನ್ನು ಪರಸ್ಪರ ಮುಖಾಮುಖಿಯಾಗಿ ಮಾಡಲಾಗಿದೆ.

ನಾಳೆ ಮತ್ತೊಂದ ಸುತ್ತಿನ ಸಭೆ

ಶುಕ್ರವಾರ ಒಂದು ಸುತ್ತಿನ ಸಂಧಾನ ಸಭೆ ನಡೆದಿದೆ. ಶನಿವಾರ ಕೂಡ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಅದಾದ ನಂತ್ರ ರವಿಚಂದ್ರನ್ ಅವರೇ ಖುದ್ದಾಗಿ ನಿರ್ಧಾರದ ಬಗ್ಗೆ ಮಾತನಾಡಲಿದ್ದಾರೆ. ಶುಕ್ರವಾರ ಮೂರು ಗಂಟೆಗೆ ಶುರುವಾದ ಸಂಧಾನ ಸಭೆ ರಾತ್ರಿ ಹತ್ತರವರೆಗೂ ನಡೀದಿದೆ. ನಟ ಶಿವರಾಜಕುಮಾರ್ ಅವರು ಹೈದ್ರಾಬಾದ್‌ನಲ್ಲಿರುವ ಕಾರಣ ಸಭೆಯಲ್ಲಿ ಭಾಗಿಯಾಗಿಲ್ಲ.

ಈ ಸುದ್ದಿಯನ್ನೂ ಓದಿ: Kichcha Sudeep: ಎಂ ಎನ್​ ಕುಮಾರ್​ ಹೊರಿಸಿದ ಆರೋಪಕ್ಕೆ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್‌

ಸತತ ಎಳು ಗಂಟೆಗಳ ಕಾಲ ನಡೆದ ಸಂಧಾನ ಸಭೆ ನಡೆದಿದ್ದು, ಸುದೀಪ್ ಹಾಗು ಎನ್ .ಕುಮಾರ್ ಪರಸ್ಪರ ಕೂತು ಮಾತನಾಡಿದ್ದಾರೆ. ಸಂಧಾನ ಒಂದು ಹಂತಕ್ಕೆ ಬಂದು ತಲುಪಿದೆ. ನಾಳೆ ರವಿಚಂದ್ರನ್, ರಾಕ್ ಲೈನ್, ಭಾ.ಮ.ಹರೀಶ್, ಉಮೇಶ್ ಬಣಕರ್ ಕೂತು ಮತ್ತೊಂದು ರೌಂಡ್ ಚರ್ಚೆ ಮಾಡಲಿದ್ದಾರೆ. ಇದಾದ ನಂತ್ರ ತಮ್ಮ ನಿರ್ಧಾರ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version