Site icon Vistara News

Movies Releasing This Week: ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾಗಳಿವು!

Movies Releasing This Week In OTT and theater

ಬೆಂಗಳೂರು: ಪ್ರಭಾಸ್‌ ನಟನೆಯ ‘ಆದಿಪುರುಷ್’ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಹೀಗಿರುವಾಗಲೂ ಈ ಸಿನಿಮಾಗೆ ಸ್ಪರ್ಧೆ ನೀಡಲು ಹಲವಾರು ಚಿತ್ರಗಳು ಚಿತ್ರಮಂದಿರಗಳಲ್ಲಿ (Movies Releasing This Week) ಹಾಗೂ ಒಟಿಟಿಯಲ್ಲಿ ಲಗ್ಗೆ ಇಡುತ್ತಿವೆ. ಈ ವಾರದ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.

ಧೂಮಂ ಸಿನಿಮಾ

ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Film) ಸಿನಿಮಾ ಜೂನ್ 23ರಂದು ಮಲಯಾಳಂ ಹಾಗೂ ಕನ್ನಡದಲ್ಲಿ ಒಟ್ಟಿಗೆ ರಿಲೀಸ್‌ ಆಗುತ್ತಿದೆ. ಟ್ರೈಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ʻಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ.

ಮಾಲಿವುಡ್‌ ನಟ ಫಹಾದ್‌ ಮಲಯಾಳಂ ಹೊರತುಪಡಿಸಿ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಮ್‌ ಸಿನಿಮಾಗಳಲ್ಲಿ ಕೂಡ ಖ್ಯಾತಿ ಪಡೆದ ಫಹಾದ್‌ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ. ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: Dhoomam Movie: ಧೂಮಂ ಇದೇ 23ಕ್ಕೆ ರಿಲೀಸ್‌; ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್‌?

‘ಅಗ್ರಸೇನಾ’ ಸಿನಿಮಾ

ಅಮರ್ ವಿರಾಜ್, ಅಗಸ್ತ್ಯ ಬಾಳ್ಗೆರೆ, ರಚನಾ ದಶರಥ್​, ನೀರ್ನಳ್ಳಿ ರಾಮಕೃಷ್ಣ ಮೊದಲಾದವರು ನಟಿಸಿರುವ ‘ಅಗ್ರಸೇನಾ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಹಳ್ಳಿ ಹಾಗೂ ನಗರದಲ್ಲಿ ಡಬಲ್ ಟ್ರ್ಯಾಕ್‍ನಲ್ಲಿ ಸಾಗುವ ಕಥಾಹಂದರ ಚಿತ್ರದಲ್ಲಿದ್ದು, ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‍ನಲ್ಲಿ ಸಾಗುವುದು ಚಿತ್ರದ ಕುತೂಹಲ. ಮುರುಗೇಶ್ ಕಣ್ಣಪ್ಪ ನಿರ್ದೇಶನ ಮಾಡಿರುವ ಅಗ್ರಸೇನಾ ಚಿತ್ರ ಜೂನ್‌ 23ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಮಮತಾ ಜಯರಾಮರೆಡ್ಡಿ ಹಾಗೂ ಜಯರಾಮರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಮೊದಲ ಮಳೆ ಸಿನಿಮಾ

ಜೂನ್‌ 23ರಂದು ಮೊದಲ ಮಳೆ ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ರಾಜಾ ನರಸಿಂಹ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಒಂಬತ್ತು ನಾಯಕಿಯರು ನಟಿಸಿದ್ದಾರೆ. ರಾಜಾ ನರಸಿಂಹ ಜೊತೆ ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾ ಶೆಟ್ಟಿ ಸೇರಿದಂತೆ 9 ನಾಯಕಿಯರಾಗಿ ನಟಿಸಿದ್ದಾರೆ ಎಂಬುದು ವಿಶೇಷ. ರಾಜ್​ ಶರಣ್ ಅವರು ‘ಮೊದಲ ಮಳೆ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ರೋಡ್ ಕಿಂಗ್

ಇದೇ 23 ರಂದು ಬಿಡುಗಡೆಯಾಗುತ್ತಿದೆ. ಕೊರೊನಾ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ‘ರೋಡ್ ಕಿಂಗ್’ ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಆಗಿನ ಪ್ರಕಾರ ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಇದೇ ಮೊದಲು. ಮತೀನ್ ಹುಸೇನ್ ಚಿತ್ರಕ್ಕೆ ಕಥೆ ಹಾಗೂ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರದಲ್ಲಿ ಲೀಲಾ ಮೋಹನ್, ಹರೀಶ್ ಕುಮಾರ್ ಹಾಗೂ ಭುವನ್ ರಾಜ್ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರ ಹಾಡು ಕೂಡ ಈ ಸಿನಿಮಾದಲ್ಲಿದೆ.

1920: ಹಾರರ್ಸ್ ಆಫ್ ಹಾರ್ಟ್​

ಹಾರರ್ ಸಿನಿಮಾಗಳನ್ನು ಇಷ್ಟ ಪಡುವರಿಗೆ ಈ ಸಿನಿಮಾ. ಕೃಷ್ಣ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಕ್ರಮ್ ಭಟ್ ನಿರ್ಮಾಣ ಮಾಡಿದ್ದಾರೆ. ಅವಿಕಾ ಗೋರ್, ರಾಹುಲ್ ದೇವ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಬಾಲ ಕಲಾವಿದೆ ಅವಿಕಾ ಗೋರ್‌, ಎಲ್ಲ ವೀಕ್ಷಕರಿಗೂ ಪರಿಚಿತ. ಈಗ ಈ ಬಾಲ ಕಲಾವಿದೆ ನಾಯಕಿಯಾಗಿದ್ದಾರೆ. 1920; ಹಾರರ್ಸ್‌ ಆಫ್‌ ದಿ ಹಾರ್ಟ್‌ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಇದೇ ಜೂನ್‌ 23ರಂದು ಈ ಸಿನಿಮಾ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ: Bollywood News: ಶೋಲೆ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಅಮಿತಾಭ್‌ಗೆ ನಿಜವಾದ ಗುಂಡನ್ನೇ ಹಾರಿಸಿದ್ದ ಧರ್ಮೇಂದ್ರ!

ಮನು ಚರಿತ್ರಾ

ತೆಲುಗಿನಲ್ಲಿ ಮನು ಚರಿತ್ರಾ ಹೆಸರಿನ ಸಿನಿಮಾ ರಿಲೀಸ್ ಆಗುತ್ತಿದೆ. ಭರತ್ ಪೆಡಗನಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಿವ ಕಂಡುಕುರಿ, ಮೇಘಾ ಆಕಾಶ್ ಮೊದಲಾದವರು ನಟಿಸಿದ್ದಾರೆ.

ಒಟಿಟಿ

ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್​’

ಸಲ್ಮಾನ್ ಖಾನ್ (salman khan) ಅವರು 2014ರಲ್ಲಿ ರಿಲೀಸ್ ಆದ ತಮಿಳಿನ ‘ವೀರಂ’ ಚಿತ್ರವನ್ನು ರಿಮೇಕ್ ಮಾಡಿದ್ದರು. ಈ ರಿಮೇಕ್‌ ಸಿನಿಮಾ ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಇದೀಗ ಜೂನ್‌ 23ರಂದು ಜೀ5 ಮೂಲಕ ಈ ಚಿತ್ರ ಪ್ರಸಾರ ಕಾಣಲಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ.‌

ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ

ಸುರೇಂದರ್ ರೆಡ್ಡಿ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಸೋನಿ ಲಿವ್​ನಲ್ಲಿ ಜೂನ್‌ 23ರಂದು ರಿಲೀಸ್ ಆಗಲಿದೆ .ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಸಾಕ್ಷಿ ವೈದ್ಯ ನಾಯಕಿಯಾಗಿ ನಟಿಸಿದ್ದಾರೆ.ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್‌ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ.

‘ದಿ ಕೇರಳ ಸ್ಟೋರಿ’

ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿಯಲ್ಲಿ ಜೂನ್‌ 23ರಂದು ಪ್ರಸಾರ ಕಾಣುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಇದು ಕೇರಳದ ಹಿಂದು/ಕ್ರಿಶ್ಚಿಯನ್​ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುವ, ಐಸಿಸ್​ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್​ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡಿದೆ.

Exit mobile version