Movies Releasing This Week In OTT and theater Movies Releasing This Week: ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾಗಳಿವು! - Vistara News

South Cinema

Movies Releasing This Week: ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾಗಳಿವು!

ಆದಿಪುರುಷ್‌ ಸಿನಿಮಾಗೆ ಸ್ಪರ್ಧೆ ನೀಡಲು ಹಲವಾರು ಚಿತ್ರಗಳು ಚಿತ್ರಮಂದಿರಗಳಲ್ಲಿ (Movies Releasing This Week) ಹಾಗೂ ಒಟಿಟಿಯಲ್ಲಿ ಲಗ್ಗೆ ಇಡುತ್ತಿವೆ.

VISTARANEWS.COM


on

Movies Releasing This Week In OTT and theater
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಭಾಸ್‌ ನಟನೆಯ ‘ಆದಿಪುರುಷ್’ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಹೀಗಿರುವಾಗಲೂ ಈ ಸಿನಿಮಾಗೆ ಸ್ಪರ್ಧೆ ನೀಡಲು ಹಲವಾರು ಚಿತ್ರಗಳು ಚಿತ್ರಮಂದಿರಗಳಲ್ಲಿ (Movies Releasing This Week) ಹಾಗೂ ಒಟಿಟಿಯಲ್ಲಿ ಲಗ್ಗೆ ಇಡುತ್ತಿವೆ. ಈ ವಾರದ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.

ಧೂಮಂ ಸಿನಿಮಾ

ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Film) ಸಿನಿಮಾ ಜೂನ್ 23ರಂದು ಮಲಯಾಳಂ ಹಾಗೂ ಕನ್ನಡದಲ್ಲಿ ಒಟ್ಟಿಗೆ ರಿಲೀಸ್‌ ಆಗುತ್ತಿದೆ. ಟ್ರೈಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ʻಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ.

ಮಾಲಿವುಡ್‌ ನಟ ಫಹಾದ್‌ ಮಲಯಾಳಂ ಹೊರತುಪಡಿಸಿ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಮ್‌ ಸಿನಿಮಾಗಳಲ್ಲಿ ಕೂಡ ಖ್ಯಾತಿ ಪಡೆದ ಫಹಾದ್‌ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ. ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: Dhoomam Movie: ಧೂಮಂ ಇದೇ 23ಕ್ಕೆ ರಿಲೀಸ್‌; ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್‌?

‘ಅಗ್ರಸೇನಾ’ ಸಿನಿಮಾ

ಅಮರ್ ವಿರಾಜ್, ಅಗಸ್ತ್ಯ ಬಾಳ್ಗೆರೆ, ರಚನಾ ದಶರಥ್​, ನೀರ್ನಳ್ಳಿ ರಾಮಕೃಷ್ಣ ಮೊದಲಾದವರು ನಟಿಸಿರುವ ‘ಅಗ್ರಸೇನಾ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಹಳ್ಳಿ ಹಾಗೂ ನಗರದಲ್ಲಿ ಡಬಲ್ ಟ್ರ್ಯಾಕ್‍ನಲ್ಲಿ ಸಾಗುವ ಕಥಾಹಂದರ ಚಿತ್ರದಲ್ಲಿದ್ದು, ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‍ನಲ್ಲಿ ಸಾಗುವುದು ಚಿತ್ರದ ಕುತೂಹಲ. ಮುರುಗೇಶ್ ಕಣ್ಣಪ್ಪ ನಿರ್ದೇಶನ ಮಾಡಿರುವ ಅಗ್ರಸೇನಾ ಚಿತ್ರ ಜೂನ್‌ 23ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಮಮತಾ ಜಯರಾಮರೆಡ್ಡಿ ಹಾಗೂ ಜಯರಾಮರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Movies Releasing This Week

ಮೊದಲ ಮಳೆ ಸಿನಿಮಾ

ಜೂನ್‌ 23ರಂದು ಮೊದಲ ಮಳೆ ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ರಾಜಾ ನರಸಿಂಹ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಒಂಬತ್ತು ನಾಯಕಿಯರು ನಟಿಸಿದ್ದಾರೆ. ರಾಜಾ ನರಸಿಂಹ ಜೊತೆ ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾ ಶೆಟ್ಟಿ ಸೇರಿದಂತೆ 9 ನಾಯಕಿಯರಾಗಿ ನಟಿಸಿದ್ದಾರೆ ಎಂಬುದು ವಿಶೇಷ. ರಾಜ್​ ಶರಣ್ ಅವರು ‘ಮೊದಲ ಮಳೆ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

Movies Releasing This Week

ರೋಡ್ ಕಿಂಗ್

ಇದೇ 23 ರಂದು ಬಿಡುಗಡೆಯಾಗುತ್ತಿದೆ. ಕೊರೊನಾ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ‘ರೋಡ್ ಕಿಂಗ್’ ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಆಗಿನ ಪ್ರಕಾರ ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಇದೇ ಮೊದಲು. ಮತೀನ್ ಹುಸೇನ್ ಚಿತ್ರಕ್ಕೆ ಕಥೆ ಹಾಗೂ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರದಲ್ಲಿ ಲೀಲಾ ಮೋಹನ್, ಹರೀಶ್ ಕುಮಾರ್ ಹಾಗೂ ಭುವನ್ ರಾಜ್ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರ ಹಾಡು ಕೂಡ ಈ ಸಿನಿಮಾದಲ್ಲಿದೆ.

Movies Releasing This Week

1920: ಹಾರರ್ಸ್ ಆಫ್ ಹಾರ್ಟ್​

ಹಾರರ್ ಸಿನಿಮಾಗಳನ್ನು ಇಷ್ಟ ಪಡುವರಿಗೆ ಈ ಸಿನಿಮಾ. ಕೃಷ್ಣ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಕ್ರಮ್ ಭಟ್ ನಿರ್ಮಾಣ ಮಾಡಿದ್ದಾರೆ. ಅವಿಕಾ ಗೋರ್, ರಾಹುಲ್ ದೇವ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಬಾಲ ಕಲಾವಿದೆ ಅವಿಕಾ ಗೋರ್‌, ಎಲ್ಲ ವೀಕ್ಷಕರಿಗೂ ಪರಿಚಿತ. ಈಗ ಈ ಬಾಲ ಕಲಾವಿದೆ ನಾಯಕಿಯಾಗಿದ್ದಾರೆ. 1920; ಹಾರರ್ಸ್‌ ಆಫ್‌ ದಿ ಹಾರ್ಟ್‌ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಇದೇ ಜೂನ್‌ 23ರಂದು ಈ ಸಿನಿಮಾ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ: Bollywood News: ಶೋಲೆ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಅಮಿತಾಭ್‌ಗೆ ನಿಜವಾದ ಗುಂಡನ್ನೇ ಹಾರಿಸಿದ್ದ ಧರ್ಮೇಂದ್ರ!

Movies Releasing This Week

ಮನು ಚರಿತ್ರಾ

ತೆಲುಗಿನಲ್ಲಿ ಮನು ಚರಿತ್ರಾ ಹೆಸರಿನ ಸಿನಿಮಾ ರಿಲೀಸ್ ಆಗುತ್ತಿದೆ. ಭರತ್ ಪೆಡಗನಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಿವ ಕಂಡುಕುರಿ, ಮೇಘಾ ಆಕಾಶ್ ಮೊದಲಾದವರು ನಟಿಸಿದ್ದಾರೆ.

ಒಟಿಟಿ

ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್​’

ಸಲ್ಮಾನ್ ಖಾನ್ (salman khan) ಅವರು 2014ರಲ್ಲಿ ರಿಲೀಸ್ ಆದ ತಮಿಳಿನ ‘ವೀರಂ’ ಚಿತ್ರವನ್ನು ರಿಮೇಕ್ ಮಾಡಿದ್ದರು. ಈ ರಿಮೇಕ್‌ ಸಿನಿಮಾ ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಇದೀಗ ಜೂನ್‌ 23ರಂದು ಜೀ5 ಮೂಲಕ ಈ ಚಿತ್ರ ಪ್ರಸಾರ ಕಾಣಲಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ.‌

ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ

ಸುರೇಂದರ್ ರೆಡ್ಡಿ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಸೋನಿ ಲಿವ್​ನಲ್ಲಿ ಜೂನ್‌ 23ರಂದು ರಿಲೀಸ್ ಆಗಲಿದೆ .ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಸಾಕ್ಷಿ ವೈದ್ಯ ನಾಯಕಿಯಾಗಿ ನಟಿಸಿದ್ದಾರೆ.ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್‌ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ.

‘ದಿ ಕೇರಳ ಸ್ಟೋರಿ’

ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿಯಲ್ಲಿ ಜೂನ್‌ 23ರಂದು ಪ್ರಸಾರ ಕಾಣುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಇದು ಕೇರಳದ ಹಿಂದು/ಕ್ರಿಶ್ಚಿಯನ್​ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುವ, ಐಸಿಸ್​ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್​ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Rashmika Mandanna: ಅಂಬಾನಿ ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಸ್ಟನ್ನಿಂಗ್ ಲುಕ್‌; ಸೀರೆ ಬೆಲೆ ಕೇಳಿ ಫ್ಯಾನ್ಸ್‌ ಶಾಕ್‌!

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಸೀರೆಯಲ್ಲಿ ಮಿಂಚಿದರು. ನೀಲಿ ಸೀರೆಯಲ್ಲಿ ಅದ್ಧೂರಿಯಾಗಿ ಮಿಂಚಿದ್ದಾರೆ. ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಬಹುನಿರೀಕ್ಷೆಯ ಪುಷ್ಪಾ – 2 ಸಿನಿಮಾ ಮುಂದಿನ ತಿಂಗಳು ಆಗಸ್ಟ್‌ಗೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಡಿಸೆಂಬರ್‌ಗೆ ಫಿಕ್ಸ್ ಆಗಿದೆ. ಅಭಿಮಾನಿಗಳು ರಶ್ಮಿಕಾರನ್ನು ಶ್ರೀವಲ್ಲಿ ಪಾತ್ರದಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

VISTARANEWS.COM


on

Rashmika Mandanna Chose A Beautiful Ajrakh Saree For Anant Ambani
Koo

ಬೆಂಗಳೂರು: ಜುಲೈ 13ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅದ್ಧೂರಿ ಶುಭ ಆಶೀರ್ವಾದ ಸಮಾರಂಭ ನಡೆಯಿತು. ಅನೇಕ ಬಾಲಿವುಡ್‌, ಸೌತ್‌ ಸೆಲೆಬ್ರಿಟಿಗಳು ಸೇರಿದ್ದರು. ಈ ವೇಳೆ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಸೀರೆಯಲ್ಲಿ ಮಿಂಚಿದರು. ನೀಲಿ ಸೀರೆಯಲ್ಲಿ ಅದ್ಧೂರಿಯಾಗಿ ಮಿಂಚಿದ್ದಾರೆ. ವರದಿಗಳ ಪ್ರಕಾರ ರಶ್ಮಿಕಾ ಸೀರೆ ಬೆಲೆ 1,28,000 ರೂ. ಎನ್ನಲಾಗಿದೆ.

ವಜ್ರಗಳಿಂದ ಅಲಂಕರಿಸಲ್ಪಟ್ಟ ಸುಂದರವಾದ ನೆಕ್ಲೇಸ್ ಅನ್ನು ಧರಿಸಿದ್ದರು, ಅಂದವಾದ ಕಿವಿಯೋಲೆಗಳು, ಬಳೆಗಳ ಸ್ಟಾಕ್ ಮತ್ತು ಸ್ಟೇಟ್‌ಮೆಂಟ್ ರಿಂಗ್‌ನೊಂದಿಗೆ ಮತ್ತಷ್ಟು ಚೆಂದವಾಗಿ ಕಂಡಿದ್ದಾರೆ. ಹಿಂದಿ, ತೆಲುಗು ಸಿನಿಮಾಗಳಲ್ಲಿ ಬ್ಯೂಸಿ ಇರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಬಹುನಿರೀಕ್ಷೆಯ ಪುಷ್ಪಾ – 2 ಸಿನಿಮಾ ಮುಂದಿನ ತಿಂಗಳು ಆಗಸ್ಟ್‌ಗೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಡಿಸೆಂಬರ್‌ಗೆ ಫಿಕ್ಸ್ ಆಗಿದೆ. ಅಭಿಮಾನಿಗಳು ರಶ್ಮಿಕಾರನ್ನು ಶ್ರೀವಲ್ಲಿ ಪಾತ್ರದಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.ಇನ್ನು ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನೂರಿ ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ನಟ ಧನುಷ್ ಅಭಿನಯದ ‘ಕುಬೇರ’ ಸಿನಿಮಾದಲ್ಲಿ ನಟಿ ಬ್ಯೂಸಿ ಇದ್ದಾರೆ. ರವಿತೇಜ – ಗೋಪಿಚಂದ್ ಮಲಿನೇನಿ ಚಿತ್ರ ಜೊತೆಗೆ ‘ರೈನ್ಬೋ’ ಲೇಡಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ರಶ್ಮಿಕಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಬಾಲಿವುಡ್ ಸಲ್ಮಾನ್ ಖಾನ್ ಚಿತ್ರ ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ನಟಿಸಬೇಕಿದೆ.

ಇದನ್ನೂ ಓದಿ: Rashmika Mandanna: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

ರಶ್ಮಿಕಾ ಫಸ್ಟ್‌ ಲುಕ್‌ ಜತೆಗೆ ಕ್ಯಾರಕ್ಟರ್‌ ಗ್ಲಿಂಪ್ಸ್‌ ಕೂಡ ಕುಬೇರ ಚಿತ್ರತಂಡ ರಿವೀಲ್‌ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೊದಲ್ಲಿ ರಶ್ಮಿಕಾ ಪಾತ್ರದ ಝಲಕ್‌ ಇದೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್‌ ಕೊಡುವಂತಿದೆ. ಶೇಖರ್ ಕುಮ್ಮಲ ಅವರ ಕುಬೇರ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ. ಸದ್ಯ ಈ ಹೈ-ಬಜೆಟ್ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಆಗುತ್ತಿವೆ. ಇತ್ತೀಚೆಗಷ್ಟೇ ಧನುಷ್ ಅವರ ಫಸ್ಟ್ ಲುಕ್ ಪೋಸ್ಟರ್‌ ಅನಾವರಣಗೊಂಡಿತ್ತು. ಮಾತ್ರವಲ್ಲ ಪ್ರೇಕ್ಷರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಪೋಸ್ಟರ್‌ ಲುಕ್‌ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ.

Continue Reading

ಸ್ಯಾಂಡಲ್ ವುಡ್

Kannada New Movie: ಸಸ್ಪೆನ್ಸ್, ಥ್ರಿಲ್ಲರ್ `ನೈಸ್ ರೋಡ್’ ಟ್ರೈಲರ್ ಬಿಡುಗಡೆ!

Kannada New Movie: ಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ ಪ್ಲ್ಯಾನ್ ಇದೆ

VISTARANEWS.COM


on

Kannada New Movie Nice road trailer out
Koo

ಬೆಂಗಳೂರು: ಗೋಪಾಲ್ ಹಳೇಪಾಳ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ (Kannada New Movie) ಮಾಡಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ʻನೈಸ್ ರೋಡ್ʼ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಹಿಂದಿನ ಜನ್ಮದಲ್ಲಿ ಮಾಡಿದ ತಪ್ಪಿಗೆ ಈ ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ ಎನ್ನುವ ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ ಮೇಲೆ ‘ನೈಸ್ ರೋಡ್’ ಚಿತ್ರದ ಕಥೆ ಹೆಣೆಯಲಾಗಿದೆ.

ನಿರ್ದೇಶನದ ಜತೆಗೆ ಪುನರ್ ಗೀತಾ ಸಿನಿಮಾಸ್ ಬ್ಯಾನರ್ ಅಡಿ ಗೋಪಾಲ್ ಹಳೇಪಾಳ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲ್ ಮಾತನಾಡಿ ʻʻಈ ಹಿಂದೆ ನಾನು ತಾಂಡವ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರ. ಈ ಕಥೆ ಬರೆಯುವಾಗಲೇ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ ಧರ್ಮ ಅವರನ್ನು ಆಯ್ಕೆ ಮಾಡಿಕೊಂಡಿದ್ದೆ, ಮತ್ತೊಂದು ಮುಖ್ಯ ಪಾತ್ರದಲ್ಲಿ ಜೋತಿ ರೈʼʼ ಕಾಣಿಸಿಕೊಂಡಿದ್ದಾರೆ.‌ ಎಂದರು.

ʻʻಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ ಪ್ಲ್ಯಾನ್ ಇದೆ, ನೈಸ್ ರೋಡ್ ಗೂ ನಮ್ಮ ಸಿನಿಮಾಗೂ ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳ್ತಿರ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆʼʼ ಎಂದು ಹೇಳಿದರು.

ಇದನ್ನೂ ಓದಿ: Kannada New Movie: ಕಣ್ಮನ ಸೆಳೆಯುತ್ತಿದೆ ”ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್

ನಟ ಧರ್ಮ ಮಾತನಾಡಿ ಈವರೆಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದೇನೆ. ಇಲ್ಲೂ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಇದರಲ್ಲಿ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದ್ದು, ಡಿಫರೆಂಟ್ ಆಗಿ ಬಂದಿದೆ. ಗೋಪಾಲ್ ನೀವೇ ಬೇಕು ಅಂತ ಬಂದಿದ್ದರು ಎಂದು ಹೇಳಿದರು.

ರಾಜುಗೌಡ ಮಾತನಾಡಿ ʻʻಈ ಕಾನ್ಸೆಪ್ಟ್ ಕೇಳಿದಾಗ ತುಂಬಾ ಇಷ್ಟ ಆಯ್ತು. ಕ್ಯಾರೆಕ್ಟರ್ ಗಳಲ್ಲಿ ನಮ್ಮ ಸುತ್ತಲಿನ ಅನೇಕ ಪಾತ್ರಗಳು ಸಿಗುತ್ತವೆ, ಇದು ಬದುಕಿನ ಆಯಾಮ ಕಟ್ಟಿಕೊಡುವ ಚಿತ್ರ ಈ ಬಳಗದ ಜೊತೆ ನಾನು ನಿಂತದ್ದು ಖುಷಿಯಿದೆʼʼ ಎಂದರು.

ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡುತ್ತ ಪ್ರಾರಂಭದಲ್ಲಿ ಹಾಡುಗಳು ಇರಲಿಲ್ಲ. ಆರ್.ಆರ್. ತುಂಬಾ ಚಾಲೆಂಜಿಂಗ್ ಆಗಿತ್ತು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಮನುಷ್ಯ ಜೀವನದಲ್ಲಿ ನಡೆವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದರು.

ಉಳಿದಂತೆ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ, ಕಲಾವಿದರಾದ ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

Continue Reading

ಟಾಲಿವುಡ್

Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

Kalki 2898 AD: ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ಪ್ರಭಾಸ್, ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರವನ್ನು ‘ದೊಡ್ಡ ಹಿಟ್’ ಮಾಡಿದಕ್ಕಾಗಿ ಧನ್ಯವಾದ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

VISTARANEWS.COM


on

Kalki 2898 AD Prabhas thanks fans
Koo

ಬೆಂಗಳೂರು: ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ಪ್ರಭಾಸ್, ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರವನ್ನು ‘ದೊಡ್ಡ ಹಿಟ್’ ಮಾಡಿದಕ್ಕಾಗಿ ಧನ್ಯವಾದ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ವೈಜಯಂತಿ ನೆಟ್‌ವರ್ಕ್ ಒಂದು ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ, “ನನಗೆ ಇಷ್ಟು ದೊಡ್ಡ ಹಿಂಟ್‌ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ತುಂಬಾ ಧನ್ಯವಾದಗಳು. ನೀವಿಲ್ಲದೆ (ಅಭಿಮಾನಿಗಳು) ನಾನು ಶೂನ್ಯ. ನಾಗ್ ಅಶ್ವಿನ್ ಅವರಿಗೆ ಧನ್ಯವಾದಗಳ. ಇಂತಹ ದೊಡ್ಡ ಸಿನಿಮಾ ಮಾಡಲ ಐದು ವರ್ಷಗಳ ಕಾಲ ಶ್ರಮಿಸಿದ್ದಾರೆ.ನಾವು ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ಅತ್ಯಂತ ಧೈರ್ಯಶಾಲಿ ನಿರ್ಮಾಪಕರು. ಅವರು ಖರ್ಚು ಮಾಡಿದ ರೀತಿ, ನಮಗೆಲ್ಲ ಆತಂಕವಾಯಿತು. ಭಾರತೀಯ ಚಿತ್ರರಂಗದ ಶ್ರೇಷ್ಠ ದಂತಕಥೆಗಳೊಂದಿಗೆ ಕೆಲಸ ಮಾಡುವ ಅವಕಾಶವನ್ನು ನೀಡಿದ ಈ ನಿರ್ಮಾಪಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.

“ನಮ್ಮಲ್ಲಿ ಅಮಿತಾಬ್ ಸರ್ ಮತ್ತು ಕಮಲ್ ಸರ್ ಇದ್ದಾರೆ .ನಾವೆಲ್ಲರೂ ನಿಮ್ಮನ್ನು ನೋಡುತ್ತಾ ಬೆಳೆದಿದ್ದೇವೆ ಮತ್ತು ನಿಮ್ಮಿಂದ ನಾವು ಬಹಳಷ್ಟು ಕಲಿತಿದ್ದೇವೆ. ದೀಪಿಕಾ ಅವರಿಗೆ ಕೂಡ ತುಂಬಾ ಧನ್ಯವಾದಗಳು. ಮತ್ತೊಮ್ಮೆ, ನನ್ನ ಅಭಿಮಾನಿಗಳಿಗೆ ಧನ್ಯವಾದಗಳುʼʼಎಂದು ಹೇಳಿಕೊಂಡಿದ್ದಾರೆ.

Kalki 2898 AD: 1,000 ಕೋಟಿ ರೂ. ಕಲೆಕ್ಷನ್‌ ಮಾಡಿದ `ಕಲ್ಕಿ 2898 ಎಡಿ’: ಪ್ರಭಾಸ್ ಹೊಸ ದಾಖಲೆ!ಇದನ್ನೂ ಓದಿ:

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

Continue Reading

ಸ್ಯಾಂಡಲ್ ವುಡ್

Anchor Aparna: ತೆಳ್ಳಗಿರುವ ಬಟ್ಟೆ ಹಾಕಿಸಿ, ಹಿಂದೆ ಲೈಟ್‌ ಇಡೋರು ನಾವು; ಅಪರ್ಣಾ ತಂದೆಗೆ ಪುಟ್ಟಣ್ಣ ಕಣಗಾಲ್‌ ಹೀಗೆ ಹೇಳಿದ್ದೇಕೆ?

Anchor Aparna:  ಒಮ್ಮೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸುತ್ತಿದ್ದ ‘ಮಸಣದ ಹೂವು’ ಸಿನಿಮಾದಲ್ಲಿ ಅವಕಾಶ ನೀಡುವಂತೆ ಅಪರ್ಣಾ ಅವರನ್ನು ಕರೆದುಕೊಂಡು ಅವರ ತಂದೆ ಹೋಗಿದ್ದರು. ಆಗ ಅಪರ್ಣ ತಂದೆಗೆ ಪುಟ್ಟಣ್ಣ ಕಣಗಾಲ್ ನಾವು ಸಿನಿಮಾದವರು ಕೆಟ್ಟವರು ಎಂದು ಹೇಳಿದ್ದರು.

VISTARANEWS.COM


on

Anchor Aparna Aparna's father conversation by Puttanna Kanagal
Koo

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಿರೂಪಕಿ ಅಪರ್ಣಾ (Anchor Aparna) ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಪುಟ್ಟಣ್ಣ ಕಣಗಾಲ್ ಅವರ ʻಮಸಣದ ಹೂವುʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಅವರು ಮನೆಮಾತಾಗಿದ್ದರು. ಅದರಲ್ಲೂ, 80 ಮತ್ತು 90ರ ದಶಕದಲ್ಲಿ ಕನ್ನಡ ಕಿರುತೆರೆ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದರು. ಅಪರ್ಣಾ ಅವರ ತಂದೆ ಸಿನಿಮಾ ಪತ್ರಕರ್ತರಾಗಿದ್ದರು. ಹೀಗಾಗಿ ಸಹಜವಾಗಿಯೇ ಅವರಿಗೆ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಿತ್ತು. ಒಮ್ಮೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸುತ್ತಿದ್ದ ‘ಮಸಣದ ಹೂವು’ ಸಿನಿಮಾದಲ್ಲಿ ಅವಕಾಶ ನೀಡುವಂತೆ ಅಪರ್ಣಾ ಅವರನ್ನು ಕರೆದುಕೊಂಡು ಅವರ ತಂದೆ ಹೋಗಿದ್ದರು. ಆಗ ಅಪರ್ಣ ತಂದೆಗೆ ಪುಟ್ಟಣ್ಣ ಕಣಗಾಲ್ ನಾವು ಸಿನಿಮಾದವರು ಕೆಟ್ಟವರು ಎಂದು ಹೇಳಿದ್ದರು.

ಪುಟ್ಟಣ್ಣ ಕಣಗಾಲ್ ಯಾಕೆ ಹೀಗೆ ಹೇಳಿದ್ದರು ಎನ್ನೋದನ್ನು ಅಂದು ಬಾಲ ನಟನಾಗಿ ಗುರುತಿಸಿಕೊಂಡಿದ್ದ ರಾಜೇಶ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.

ʻಮಸಣದ ಹೂವುʼ ಸಿನಿಮಾ ಅವಕಾಶ ಕೇಳಲು ಅಪರ್ಣಾ ಅವರು ಪುಟ್ಟಣ್ಣ ಕಣಗಾಲ್‌ ಹತ್ತಿರ ತಂದೆ ಜತೆ ಬಂದಿದ್ದರು. ಪುಟ್ಟಣ್ಣ ಹೇಳಿದ್ದು ಹೀಗೆ. ʻʻಸಿನಿಮಾ ನಮ್ಮ ಹೆಣ್ಣು ಮಕ್ಕಳಿಗೆ ಬೇಡ. ಸಿನಿಮಾದವರು ನಾವು ಎಷ್ಟು ಕೆಟ್ಟವರು ಅಂದರೆ, ತೆಳ್ಳಗಿರುವ ಬಟ್ಟೆ ಹಾಕಿಸಿ, ಹಿಂದೆ ಲೈಟ್‌ ಹಾಕಿಸಿ, ತೊಡೆ ಶೇಪ್‌ ಕಾಣಿಸುವಂತೆ ಶೂಟ್‌ ಮಾಡುತ್ತೇವೆ. ಕೆಟ್ಟವರು ನಾವುʼʼಎಂದಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

ಅಪರ್ಣಾ ಅವರು 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರು ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

Continue Reading
Advertisement
Janhvi Kapoor Trying To Copy Uorfi Javed TROLLED
ಬಾಲಿವುಡ್4 mins ago

Janhvi Kapoor: ಉರ್ಫಿ ಸ್ಟೈಲ್ ಕಾಪಿ ಮಾಡಿದ್ರಾ ಜಾಹ್ನವಿ ಕಪೂರ್‌? ಟ್ರೋಲ್‌ ಆದ್ರು ನಟಿ!

Teachers Recruitment
ಕರ್ನಾಟಕ24 mins ago

Teachers Recruitment: 10 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ

ಕ್ರಿಕೆಟ್39 mins ago

Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

Paris Olympics 2024
ಕ್ರೀಡೆ43 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

Pooja Khedkar
ದೇಶ47 mins ago

Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Omar Abdullah
ದೇಶ48 mins ago

‘ಆಜಾದ್‌ ಕಾಶ್ಮೀರ’ ಎನ್ನುತ್ತಿದ್ದ ಒಮರ್‌ ಅಬ್ದುಲ್ಲಾ ಈಗ ಪತ್ನಿಯಿಂದ ಸ್ವಾತಂತ್ರ್ಯ ಕೊಡಿಸಿ ಎಂದು ಕೋರ್ಟ್‌ ಮೊರೆ!

Katrina Pregnancy Rumours Vicky Kaushal Silence
ಬಾಲಿವುಡ್50 mins ago

Katrina Kaif: ಕತ್ರಿನಾ ಕೈಫ್ ಪ್ರೆಗ್ನೆನ್ಸಿ ವದಂತಿಗಳ ಬಗ್ಗೆ ಮೌನ ಮುರಿದ ವಿಕ್ಕಿ ಕೌಶಲ್!

kalaburagi News
ಕಲಬುರಗಿ51 mins ago

Kalaburagi News : ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

Ban on PTI
ವಿದೇಶ1 hour ago

Ban on PTI: ಇಮ್ರಾನ್‌ ಖಾನ್‌ಗೆ ಬಿಗ್‌ ಶಾಕ್‌! ಪಿಟಿಐ ಪಕ್ಷದ ಮೇಲೆ ನಿಷೇಧ

dcm dk shivakumar
ಪ್ರಮುಖ ಸುದ್ದಿ2 hours ago

DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ6 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ11 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ24 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

ಟ್ರೆಂಡಿಂಗ್‌