Site icon Vistara News

Nayanthara marriage | ವಿಘ್ನೇಶ್‌ ಕೈ ಹಿಡಿದ ನಯನತಾರಾ: ಹರಸಿದ ರಜನಿ, ಶಾರುಖ್‌, ಮಣಿರತ್ನಂ

ಲೇಡಿ ಸೂಪರ್ ಸ್ಟಾರ್‌

ಬೆಂಗಳೂರು: ಲೇಡಿ ಸೂಪರ್‌ ಸ್ಟಾರ್‌ ನಯನತಾರಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಏಳು ವರ್ಷಗಳಿಂದ ಪ್ರೀತಿಸಿದ ಜೋಡಿ ಸಪ್ತಪದಿ ತುಳಿದಿದೆ. ಸೂಪರ್‌ಸ್ಟಾರ್‌ ರಜನಿಕಾಂತ್‌ , ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌, ಕಲಾವಿದರಾದ ಕಾರ್ತಿ, ಶರತ್‌ ಕುಮಾರ್, ಅಟ್ಲಿ, ವಿಜಯ್ ಸೇತುಪತಿ, ಮಣಿರತ್ನಂ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದರು.

ಮಹಾಬಲಿಪುರಂನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಪಾಲ್ಗೊಂಡರು. ಆರಂಭದಲ್ಲಿ ತಿರುಪತಿಯಲ್ಲಿ ವಿವಾಹವಾಗುವುದಾಗಿ ಈ ಜೋಡಿ ಡಿಸೈಡ್‌ ಮಾಡಿತ್ತು. ಈ ವಿವಾಹಕ್ಕೆ ಕೇವಲ ಆಪ್ತರು ಮತ್ತು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಟ, ನಟಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ಶಭಾಶಯಗಳನ್ನು ಕೋರುತ್ತಿದ್ದಾರೆ.

ಇದನ್ನೂ ಓದಿ | ತಮಿಳುನಾಡು ಮುಖ್ಯಮಂತ್ರಿ ಭೇಟಿ: ಮದುವೆ ಯಾವಾಗ Lady Superstar ನಯನತಾರ ? 

ನಿರ್ದೇಶಕ ಅಟ್ಲೀ ಅವರು ಇನ್ಸ್ಟಾ ಪೋಸ್ಟ್‌ ಮೂಲಕ ʼನಯನತಾರಾ ಹಾಗೂ ವಿಘ್ನೇಶ್‌ ವೆಡ್ಡಿಂಗ್‌ ಡೈರೀಸ್‌ʼ ಎಂದು SRK ಜತೆ ಇರುವ ಪೋಸ್ಟ್‌ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್‌ ಮೀಡಿಯಾ ಮೂಲಕ ಸೆಲೆಬ್ರಿಟಿಗಳ ವಿಶಸ್‌:

ನಯನತಾರಾ ಮತ್ತು ವಿಘ್ನೇಶ್ ಮದುವೆಯಾಗುತ್ತಾರೆಂಬ ಊಹಾಪೋಹ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ officially ಗಂಡ-ಹೆಂಡತಿ ಆಗಿದೆ 2015 ರಲ್ಲಿ ʼನಾನುಮ್ ರೌಡಿ ದಾನ್ʼ ಸಿನಿಮಾ ಮೂಲಕ ಜತೆಯಾಗಿದ್ದರು ನಯನತಾರಾ ಹಾಗೂ ವಿಘ್ನೇಶ್‌.

ಇದನ್ನೂ ಓದಿ | Happy Birthday ಸಮಂತಾ ರುತ್ ಪ್ರಭು

ನಯನತಾರಾ ಜತೆ ಹಸೆಮಣೆ ಏರುವ ಕೆಲವೇ ಗಂಟೆಗಳ ಮುನ್ನ ನಿರ್ದೇಶಕ ವಿಘ್ನೇಶ್‌ ಧನ್ಯವಾದ ಹೇಳುವುದರ ಮೂಲಕ ಪೋಸ್ಟ್‌ ಹಂಚಿಕೊಂಡಿದ್ದರು. ʼನನ್ನ ಜೀವದ ಸಂಗಾತಿ ಆಗಿರುವ ನಯನತಾರಾಗೆ ಇದೆಲ್ಲವೂ ಅರ್ಪಣೆʼ ಎಂದು ಬರೆದುಕೊಂಡಿದ್ದರು.

ʼನನ್ನ ಜೀವನದ ಪ್ರೀತಿಪಾತ್ರರಿಗೆ, ಪ್ರತಿಯೊಬ್ಬರಿಗೆ, ದೇವರಿಗೆ ಮತ್ತು ನಿಮ್ಮೆಲ್ಲರ ಪ್ರತಿ ಹಾರೈಕೆ ಮತ್ತು ಪ್ರೀತಿಗೆ ನಾನು ಎಂದೂ ಚಿರಋಣಿʼ ಎಂದು ವಿಘ್ನೇಶ್‌ ಪೋಸ್ಟ್‌ ಹಂಚಿಕೊಳ್ಳುವುದರ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.

ಜೂನ್ 11ರಂದು ಅಭಿಮಾನಿಗಳಿಗೆ ಆರತಕ್ಷತೆ ಕಾರ್ಯಕ್ರಮ‌ ಆಯೋಜಿಸಲಾಗಿದೆ. ಮದುವೆಗೆ ಕುಟುಂಬದ ಆಪ್ತರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಇವರಿಬ್ಬರ ಮದುವೆ ಸಮಾರಂಭವು OTT ಪ್ಲಾಟ್‌ ಫಾರ್ಮ್‌ನಲ್ಲಿ ಸ್ಟ್ರೀಮ್‌ ಅಗಲಿದೆ ಎಂಬ ಸುದ್ದಿಯೂ ಇದೆ. ಹಾಗೂ ನೆಟ್‌ಫ್ಲಿಕ್ಸ್‌ ಕೂಡ ಖರೀದಿ ಮಾಡಿದ್ದು, ಕಾಲಿವುಡ್ ಚಲನಚಿತ್ರ ನಿರ್ಮಾಪಕ ಗೌತಮ್ ಮೆನನ್ ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ದಂಪತಿಗಳು ಎಲ್ಲಿಯೂ ಹೇಳಿಕೊಂಡಿಲ್ಲ.

ಇದನ್ನೂ ಓದಿ | Jawan Teaser: ಲಿಯಾಮ್ ನೀಸನ್ ಅವರ 1990ರ ಚಿತ್ರ ಡಾರ್ಕ್‌ಮ್ಯಾನ್ ಕಾಪಿ ಮಾಡಿದ್ರಾ SRK?

Exit mobile version