ಬೆಂಗಳೂರು: ಬಿಗ್ ಬಾಸ್ ಸೀಸನ್-4ರ ವಿಜೇತ, ನಟ ಒಳ್ಳೆ ಹುಡುಗ ಪ್ರಥಮ್ (Olle Huduga Pratham) ಅವರ ಕೈಯಲ್ಲಿ ಹಲವಾರು ಸಿನಿಮಾಗಳು ಇವೆ. ಕಳೆದ ವರ್ಷ ‘ನಟ ಭಯಂಕರ’ ಸಿನಿಮಾ ನಿರ್ದೇಶಿಸಿ, ನಟಿಸಿದ್ದರು. ‘ಎಂಎಲ್‌ಎ’, ‘ದೇವರಂಥ ಮನುಷ್ಯ’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು. ಇದೀಗ ʻಕರ್ನಾಟಕ ಅಳಿಯʼ ಶೂಟಿಂಗ್ ನಡೆಯುತ್ತಿದ್ದು, ʻಡ್ರೋನ್ ಪ್ರಥಮ್ʼ ಸಿನಿಮಾ ಕೂಡ ಸೆಟ್ಟೇರಲು ಸಜ್ಜಾಗಿದ್ದು ವಿದೇಶದಲ್ಲಿ ಮೂಹರ್ತ ನೆರವೇರಲಿದೆ ಎಂದು ವಿಸ್ತಾರ ನ್ಯೂಸ್ ಜತೆ ಮಾತನಾಡಿ, ಈ ವಿಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್‌ಕುಮಾರ್ ಅವರು ನನಗೆ ಮಾರ್ಕೆಟಿಂಗ್ ವಸ್ತುವಲ್ಲ ಎಂದು ಹೇಳಿಕೊಂಡಿದ್ದಾರೆ.
ಯಾರನ್ನೋ ನೋಡಿ ನಾನು ಸಿನಿಮಾ ಮಾಡ್ತಿಲ್ಲ!
`ಡ್ರೋನ್ ಪ್ರಥಮ್’ ಸಿನಿಮಾ ವಿಚಾರವಾಗಿ ಪ್ರಥಮ್ ವಿಸ್ತಾರ್ ನ್ತೂಸ್ ಜತೆ ಮಾತನಾಡಿದ್ದು ಹೀಗೆ. ಡ್ರೋನ್ ಪ್ರತಾಪ್ ಅವರ ಕಥೆಗೆ ಏನಾದರೂ ಸಾಮ್ಯತೆ ಇದೆಯಾ ಎಂಬ ಪ್ರಶ್ನೆಗೆ ಪ್ರಥಮ್ ಮಾತನಾಡಿ ʻʻವಿಶ್ವೇಶರಯ್ಯ, ಭಗತ್‌ಸಿಂಗ್, ಹೀಗೆ ಮುಂತಾದವರ ಬಗ್ಗೆ ಸಿನಿಮಾ ಬಂದಿದ್ಯಾ? ಅವರೆಲ್ಲರಕ್ಕಿಂತ ಇವರು ದೊಡ್ಡ ಸಾಧಕರಾ? ನಾನು ಮಾಡುತ್ತಿರುವುದು ಡ್ರೋನ್ ಪ್ರಥಮ್ ಸಿನಿಮಾ. ಸುಭಾಷ್ ಚಂದ್ರ ಭೋಸ್ ಹೀಗೆ ಅನೇಕ ಮಹಿನಿಯರ ಬಗ್ಗೆ ಸಿನಿಮಾ ಬಂದಿಲ್ಲ, ಅವರಿಗಿಂತಲೂ ದೊಡ್ಡ ಮಹನಿಯರು ಡ್ರೋನ್ ಪ್ರತಾಪ್ ಆಗಿದ್ದರೆ, ಇವರದ್ದೇ ಫಸ್ಟ್ ಸಿನಿಮಾ ಮಾಡಿರುತ್ತಿದ್ದೆʼʼ ಎಂದರು.
ಇದನ್ನೂ ಓದಿ: Actor Pratham: ಒಳ್ಳೆ ಹುಡ್ಗ ಪ್ರಥಮ್ ಮದುವೆಯಾಗಲಿರುವ ಹುಡುಗಿಯ ಹಿನ್ನೆಲೆ ಏನು?
ಕರ್ನಾಟಕ ಅಳಿಯ ಶೂಟಿಂಗ್‌ನಲ್ಲಿ ರಾಘವೆಂದ್ರ ರಾಜ್‌ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿ ʻʻವಿ ಮನಹೋರ್, ರೇಖಾ ಅವರಿದ್ದಾರೆ. ದೊಡ್ಡ ಕಲಾವಿದರ ದಂಡೇ ಇದೆ. ಅಪ್ಪು ಅವರ ಹೆಸರನ್ನು ಸಖಾಸುಮ್ಮನೆ ಪ್ರಚಾರಕ್ಕೆ ಬಳಸಿಕೊಳ್ಳುವುದು ತಪ್ಪು. ನನ್ನ ಸಿನಿಮಾಗೂ ಅವರ ನೆನಪಪುಗಳಿವೆ. ಸಿನಿಮಾ ಬಗ್ಗೆ ಪ್ರೀತಿಯಿಂದ ಆಡಿಯೊ ಮೆಸೆಜ್ ಕೂಡ ಕಳುಹಿಸಿದ್ದರು. ಚೇತೋಹಾರಿ ಮಾತು ಅಪ್ಪು ನನಗೆ ಹೇಳಿದರು. ತುಂಬಾ ಬೇಜಾರಾದಾಗ ಅದನ್ನು ಕೇಳುತ್ತೇನೆ. ಮಾರ್ಕೆಟಿಂಗ್ ಆಗಿ ಇದನ್ನು ಬಳಸಿಕೊಳ್ಳುವುದಿಲ್ಲ. ಅಪ್ಪು ನನಗೆ ಮಾರ್ಕೆಟಿಂಗ್ ವಸ್ತುವಲ್ಲ. ಅವರು ಒಳ್ಳೆಯ ಭಾವನಾತ್ಮಕ ಜೀವಿ. ಅದ್ಭುತ ಕಲಾವಿದರು. ನಮ್ಮ ಕರ್ನಾಟಕದ ಹೆಮ್ಮೆ. ಎಷ್ಟೋ ಜನ ಅಪ್ಪುರನ್ನು ಇಟ್ಟುಕೊಂಡು ಮಾರ್ಕೆಟಿಂಗ್ ಮಾಡುತ್ತಾರೆʼʼ ಎಂದರು.
ಈ ಹಿಂದೆ ಕೂಡ ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಅಭಿಮಾನಿಗಳು ಮಾಲೆ ಧರಿಸಿ ಅಪ್ಪು ಪುಣ್ಯಭೂಮಿಯ ದರ್ಶನ ಪಡೆದಿದ್ದರು. ಈ ಬಗ್ಗೆ ಇಳ್ಳೆ ಹುಡುಗ ಪ್ರಥಮ್ ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದಲ್ಲಿ ವರ್ತಿಸಬೇಡಿ ಎಂದು ಟ್ವೀಟ್ ಮಾಡಿದ್ದರು.
ʻʻದೇವರ ಮೇಲೆ ಭಕ್ತಿ ಇರಲಿ! ಕಲಾವಿದರ ಮೇಲೆ ಪ್ರೀತಿ, ಅಭಿಮಾನವಿರಲಿ…! ಶಬರಿಮಲೆಗೆ ಹೋಗುವುದು ಅಯ್ಯಪ್ಪನಲ್ಲಿ ಶರಣಾಗುವುದಕ್ಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗಿರುವುದಕ್ಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು. ದೇವರು-ದೇವರೇ…ಕಲಾವಿದರು-ಕಲಾವಿದರೇʼʼಎಂದು ಟ್ವೀಟ್ ಮಾಡಿದ್ದರು ಪ್ರಥಮ್.