Site icon Vistara News

KGF 3 Movie : ಕೆಜಿಎಫ್‌ 2ಗೆ ಒಂದು ವರ್ಷ, ಕೆಜಿಎಫ್ 3 ಸಿನಿಮಾ ಪಕ್ಕಾ! ಸುಳಿವು ಬಿಟ್ಟು ಕೊಟ್ಟ ಹೊಂಬಾಳೆ ಫಿಲಂಸ್

#image_title

ಬೆಂಗಳೂರು: ಅದು 2022ರ ಏಪ್ರಿಲ್‌ 14. ನಟ ಯಶ್‌ ನಟಿಸಿ, ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ ಕೆಜಿಎಫ್‌ 2 ಸಿನಿಮಾ ಬಿಡುಗಡೆಗೊಂಡಿತ್ತು. ಮೂರು ವರ್ಷಗಳ ನಂತರ ನೆಚ್ಚಿನ ನಟನನ್ನು ತೆರೆ ಮೇಲೆ ಕಾಣಲು ಕಾದು ಕುಳಿತಿದ್ದ ಅಂದು ಸಂಭ್ರಮದಿಂದ ಕುಣಿದಾಡಿದ್ದರು. ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಸಿದ್ಧವಾಗಿದ್ದ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ, ವಿದೇಶದಲ್ಲಿಯೂ ತೆರೆ ಕಂಡ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿತು. ದಾಖಲೆಗಳನ್ನು ಬರೆದ ಆ ಸಿನಿಮಾ ಬಿಡುಗಡೆಗೊಂಡು ಇಂದಿಗೆ ಭರ್ತಿ ಒಂದು ವರ್ಷ. ಅದೇ ಖುಷಿಯಲ್ಲಿ ಸಿನಿ ತಂಡ ಸಿನಿಮಾದ ಮೂರನೇ ಭಾಗಕ್ಕೂ (KGF 3 Movie) ಬಲಗಾಲು ಇಟ್ಟಿದೆ.

ಕೆಜಿಎಫ್‌ 2 ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಸಿನಿಮಾದ ಮೂರನೇ ಭಾಗದ ಬಗ್ಗೆಯೂ ಜನರಿಗೆ ಕುತೂಹಲ ಹೆಚ್ಚಾಗಿತ್ತು. ಮೂರನೇ ಭಾಗ ಹೇಗಿರಲಿದೆ? ಏನಾಗಲಿದೆ ಎನ್ನುವುದರ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಇದೀಗ ಸಿನಿಮಾ ತಂಡ ಕೆಜಿಎಫ್‌ 3ನೇ ಭಾಗದ ಬಗ್ಗೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Road Accident : ತಿರುಪತಿ ದರ್ಶನ ಮುಗಿಸಿ ಬರುತ್ತಿದ್ದಾಗ ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಕೆಜಿಎಫ್‌ನ ದಂಪತಿ ಸ್ಥಳದಲ್ಲೇ ಸಾವು
ಹೌದು. ಕೆಜಿಎಫ್‌ ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಅವರು ಕೆಜಿಎಫ್‌ ಚಿತ್ರದ ಮೂರನೇ ಭಾಗದ ಟೀಸರ್‌ ಬಿಡುಗಡೆ ಮಾಡಿವೆ. ಈಗಾಗಲೇ ಬಂದಿರುವ ಎರಡು ಭಾಗಗಳಂತೆಯೇ ಮೂರನೇ ಭಾಗದಲ್ಲೂ ಸಖತ್‌ ಆಕ್ಷನ್‌ ಇರಲಿದೆ ಎನ್ನುವುದು ಟೀಸರ್‌ನಲ್ಲೇ ಗ್ಯಾರಂಟಿಯಾಗಿದೆ. ರಾಕಿ ಭಾಯ್‌ 1978ರಿಂದ 1981ರವರೆಗೆ ಎಲ್ಲಿದ್ದರು? ಎನ್ನುವ ಪ್ರಶ್ನೆಯನ್ನು ವಿಡಿಯೊದಲ್ಲಿ ಕೇಳಲಾಗಿದೆ. ಹಾಗಾಗಿ ಕೆಜಿಎಫ್‌ 3 ಸಿನಿಮಾದಲ್ಲಿ ಈ ಕಾಲದಲ್ಲಿ ನಡೆಯುವ ಕಥೆಯನ್ನು ಸಿನಿತಂಡ ಹೇಳಬಹುದು ಎಂದು ಊಹಿಸಲಾಗುತ್ತಿದೆ.


ಅಂದ ಹಾಗೆ ಕೆಜಿಎಫ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಶಾಂತ್‌ ನೀಲ್‌ ಅವರು ಸದ್ಯ ತೆಲುಗು ಚಿತ್ರರಂಗದಲ್ಲಿ ಬಿಜಿ ಇದ್ದಾರೆ. ಪ್ರಭಾಸ್‌ ಜತೆ ಸಲಾರ್‌ ಸಿನಿಮಾದ ಕೆಲಸ ಮಾಡುತ್ತಿರುವ ಅವರು ಅದಾದ ನಂತರ ಜೂ.ಎನ್‌ಟಿಆರ್‌ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಅದಾದ ನಂತರ ಮತ್ತೆ ಪ್ರಭಾಸ್‌ ಅವರೊಂದಿಗೆ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ವರದಿಯಿದೆ. ಹಾಗಾಗಿ ಪ್ರಶಾಂತ್‌ ನೀಲ್‌ ಅವರು ಸದ್ಯಕ್ಕೆ ಕೆಜಿಎಫ್‌ 3ರ ಕಡೆ ತಲೆ ಹಾಕುವುದು ಸುಳ್ಳಾಗಿದೆ. ವರದಿಗಳನ್ನು ನಂಬುವುದಾದರೆ ಕೆಜಿಎಫ್‌ 3 ಸಿನಿಮಾ 2025ರಲ್ಲಿ ತೆರೆ ಕಾಣುವ ಸಾಧ್ಯತೆಯಿದೆ.

ಕೆಜಿಎಫ್‌ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಆ ಸಿನಿಮಾ ಕಂಡ ಯಶಸ್ಸಿನ ಬೆನ್ನಲ್ಲೇ ಸಿನಿಮಾ ತಂಡ ಕೆಜಿಎಫ್‌ 2 ಸಿನಿಮಾ ಮಾಡಿತ್ತು. ಈ ಸಿನಿಮಾ ವಿಶ್ವಾದ್ಯಂತ ಒಟ್ಟು 1200 ಕೋಟಿ ರೂ. ಅನ್ನು ಬಾಚಿಕೊಂಡಿತ್ತು. ಭಾರತದಲ್ಲೇ ಸಿನಿಮಾ ಒಟ್ಟು 980 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

Exit mobile version