ಲಾಸ್ ಏಂಜಲೀಸ್: ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರ, 2023ರ ಆಸ್ಕರ್‌ನ ʼಅತ್ಯುತ್ತಮ ಕಿರು ಸಾಕ್ಷ್ಯಚಿತ್ರʼ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯನ್ನು ಈ ಸಾಕ್ಷ್ಯಚಿತ್ರ ಹೊಂದಿದೆ. ಹೌಲ್‌ಔಟ್, ಹೌ ಡು ಯು ಮೆಶರ್ ಎ ಇಯರ್, ದಿ ಮಾರ್ಥಾ ಮಿಶೆಲ್ ಎಫೆಕ್ಟ್, ಸ್ಟ್ರೇಂಜರ್ ಎಟ್ ದಿ ಗೇಟ್ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ನಿರ್ದೇಶಕಿ ಕಾರ್ತಿಕಿ ಹಾಗೂ ನಿರ್ಮಾಪಕಿ ಗುನೀತ್ ಮೋಂಗಾ ಸಮಾರಭದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡರು.
‘ದಿ ಎಲಿಫೆಂಟ್ ವಿಸ್ಪರರ್ಸ್’ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. ತಮಗೆ ಸಿಕ್ಕಿದ ಈ ಪ್ರಶಸ್ತಿ ʼನನ್ನ ತಾಯ್ನೆಲ ಭಾರತಕ್ಕೆ ಅರ್ಪಿತʼ ಎಂದಿದ್ದಾರೆ ಇದರ ನಿರ್ದೇಶಕ ಕಾರ್ತಿಕಿ. ಅಚಿನ್ ಜೈನ್ ಮತ್ತು ಗುನೀತ್ ಮೋಂಗಾ ಇದನ್ನು ನಿರ್ಮಿಸಿದ್ದಾರೆ.
ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇರುವ ಒಂದು ಕುಟುಂಬ, ಅದು ಸಾಕುವ ಆನೆಮರಿಗಳ ಕತೆಯನ್ನು ಇದು ಒಳಗೊಂಡಿದೆ. ಕಾರ್ತಿಕಿ ಅವರಿಗೆ ಇದು ಮೊದಲ ನಿರ್ದೇಶನ.
ಇದನ್ನೂ ಓದಿ: Oscars 2023: ಮಿಂಚಿದ ʼಆರ್‌ಆರ್‌ಆರ್ʼ ಹೀರೋಗಳು, ಡ್ಯಾನ್ಸ್